ಕುಮಟಾ: ಕಳೆದ ಅನೇಕ ತಿಂಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಕಾಂಗ್ರೇಸ್ ನ ಹಿರಿಯ ರಾಜಕಾರಣಿ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಎಲ್ ವಿ ಶಾನಭಾಗ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ.
ಕುಮಟಾ ತಾಲೂಕಿನ ಹೆಗಡೆ ಗ್ರಾಮದ ನಿವಾಸಿಯಾಗಿದ್ದ ಎಲ್ ವಿ ಶಾನಭಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರ್ ವಿ ದೇಶಪಾಂಡೆ ಅವರ ಆಪ್ತರಾಗಿದ್ದರು.
ರಾಜಕಾರಣದಲ್ಲಿ ತನ್ನದೆ ಛಾಪು ಮೂಡಸಿದ್ದ ಎಲ್ ವಿ ಶಾನಭಾಗ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿದ್ದ ವೇಳೆ ಸಾಕಷ್ಟು ಅಭಿವೃದ್ಧಿ ಕಾರ್ಯಮಾಡಿದ್ದರು.