ಕುಮಟಾ : ತಾಲೂಕಿನ ಬಾಡ ಗ್ರಾಮದ ರೈತ ಸೇವಾ ಸಹಕಾರಿ ಸಂಘ ನಿಯಮಿತ ಇದರ ವ್ಯವಸ್ಥಾಪಕ ರ ಮುಂದಾಳತ್ವದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರುಗಳು ದಿ. 09.06.2019 ರವಿವಾರದಂದು ಬಾಡ ಗ್ರಾಮದಲ್ಲಿ ಸಮಾಜ ಸೇವಕ ಶ್ರೀ ಅರುಣ ಎಸ್. ಗುನಗಾ ಇವರ ಮಾರ್ಗದರ್ಶನದಲ್ಲಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಕಣ್ಣಿನ ಚಿಕಿತ್ಸಾ ವಿಭಾಗದ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

RELATED ARTICLES  ಕೂಲಿ ಕಾರ್ಮಿಕರಿಗೆ ಡಿಕ್ಕಿ ಹೊಡೆದ ಬೊಲೆರೊ ಮೂವರಿಗೆ ಗಂಭೀರ ಗಾಯ


ಬಾಡ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡರಲ್ಲದೇ ರೈತ ಸೇವಾ ಸಹಕಾರಿ ಸಂಘದ ಸಮಾಜಮುಖಿ ಕಾರ್ಯಕ್ರಮವನ್ನು ಶ್ಲಾಘಿಸಿದರು.


ಕುಮಟಾ ತಾಲೂಕಿಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಬಾಡ ಗ್ರಾಮದವರಾದ ಶ್ರೀ ಅರುಣ ಎಸ್. ಗುನಗಾ ಇವರು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯೊಂದಿಗೆ ಉತ್ತಮ ಸಂಪರ್ಕ ಮತ್ತು ಬಾಂಧವ್ಯ ಹೊಂದಿದ್ದು ಉತ್ತರ ಕನ್ನಡ ಜಿಲ್ಲೆಯ ಅನೇಕ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮತ್ತು ಈ ಭಾಗದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಗಳನ್ನು ವಿತರಿಸಲು ನಿಯೋಜನೆ ಗೊಂಡಿರುತ್ತಾರೆ. ಗ್ರಾಮಸ್ಥರು ಮತ್ತು ಕುಮಟಾ ಸುತ್ತಮುತ್ತಲಿನ ಸಾರ್ವಜನಿಕರು ಇವರ ಸಹಾಯ ಪಡೆದುಕೊಳ್ಳಲು 9448012077 ಅಥವಾ 8151729377 ಈ ಮೊಬೈಲ್ ದೂರವಾಣಿಗೆ ಕರೆಮಾಡಿ ಸಂಪರ್ಕಿಸಬೇಕಾಗಿ ಕಾರ್ಯಕ್ರಮ ಆಯೋಜಕರು ಕೋರಿದ್ದಾರೆ.

RELATED ARTICLES  ಮರಳು ದಿಬ್ಬಗಳಲ್ಲಿ ಮೇ.4 ರಿಂದ ಮರಳು ತೆಗೆಯಲು ತಾತ್ಕಾಲಿಕ ಅನುಮತಿ