ಕುಮಟಾ : “ಗ್ರಾಮಸ್ಥರೇ ರಸ್ತೆಗಾಗಿ ಶ್ರಮಿಸುತ್ತಿರುವುದು. ಎಚ್ಚೇತ್ತು ಕೊಳ್ಳದ ಸ್ಥಳೀಯ ಸರ್ಕಾರ ಮತ್ತು ಅಧಿಕಾರಿಗಳು”. ಮತದಾನ ಬಹಿಷ್ಕಾರದ ಎಚ್ಚರಿಕೆ ಕೊಟ್ಟರು ಜಗ್ಗದ ಅಧಿಕಾರಿಗಳು, ಜನ ಪ್ರತಿನಿಧಿಗಳು ಮತ್ತು ಸರ್ಕಾರ ಇದು ಕುಮಾಟಾದ ಕೆಲ ಗ್ರಾಮಗಳ ಸಮಸ್ಯೆ .

ಕುಮಟಾ ತಾಲ್ಲೂಕಿನ ಸಂಡಳ್ಳಿ ಮತ್ತಳ್ಳಿ, ಕಂದಳ್ಳಿ ಮತ್ತು ಮಾವಳ್ಳಿ ಗ್ರಾಮಕ್ಕೆ ಸರಿಯಾದ ರಸ್ತೆ ಮತ್ತು ಮೊಬೈಲ್ ಟವರ್ ಇಲ್ಲ ಎಂಬ ಕಾರಣಕ್ಕೆ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದರು. ಸಂಬಂಧಿಸಿದ ಅಧಿಕಾರಿಗಳು ಚುನಾವಣಾ ನಂತರ ಗ್ರಾಮದ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ ನಂತರ ಚುನಾವಣಾ ಬಹಿಷ್ಕಾರ ಹಿಂದಕ್ಕೆ ಪಡೆದಿದ್ದರು.

RELATED ARTICLES  ಶ್ರೀ ಗುರು ಸುಧೀಂದ್ರ ಬಿ.ಕಾಂ ಕಾಲೇಜು ವಿದ್ಯಾರ್ಥಿಗಳ 99.35 ಫಲಿತಾಂಶ.

ಆದರೆ ಚುನಾವಣೆ ಪ್ರಕ್ರಿಯೆ ಮುಗಿದರು ಯಾವುದೇ ಅಧಿಕಾರಿಗಳು, ಸರ್ಕಾರ ಗಳು ಸ್ಪಂದಿಸದೇ ಇರುವುದರಿಂದ ಗ್ರಾಮಸ್ಥರೇ ತಮ್ಮ ಗ್ರಾಮದ ರಸ್ತೆಯನ್ನು ಮನೆಗೆ ಒಬ್ಬರು ಇಬ್ಬರೂ ಸದಸ್ಯರಂತೆ ಬಂದು ರಸ್ತೆ ಸರಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

RELATED ARTICLES  ಜಯಶ್ರೀ ಎಂಟರ್ಪ್ರೈಸಸ್ - ಬಿಲ್ಡಿಂಗ್ ಮಟೀರಿಯಲ್ಸ್ ಮಳಿಗೆ ಉದ್ಘಾಟನೆ

45 ವರ್ಷದ ಹಿಂದೆಯೂ ಇದೇ ಪರಿಸ್ಥಿತಿ ಇತ್ತು ಈಗಲೂ ಅದೇ ಪರಿಸ್ಥಿತಿ ಇದೆ ಅಂದರೆ ನಾವು ಮತ್ತು ನಮ್ಮ ದೇಶ ಎಲ್ಲಿದೆ ಅಂತ ಎಲ್ಲರೂ ಊಹಿಸಬಹುದು.