ಮೇಷ:- ಮನಸ್ಸಿನ ಹೊಯ್ದಾಟಗಳಿಂದ ನಷ್ಟವಾಗುವುದು. ನಂಬಿ ಕೆಟ್ಟವರಿಲ್ಲವೋ ಭಗವಂತನ ಎಂಬುದು ಸಾರ್ವಕಾಲಿಕ ಸತ್ಯ. ಹಾಗಾಗಿ ನಿಮ್ಮ ಮನಸ್ಸಿನ ಹೊಯ್ದಾಟಗಳನ್ನು ದೂರ ಮಾಡಲು ಭಗವಂತನನ್ನು ಅನನ್ಯ ಭಜಿಸಿ. ಭಕ್ತಿಯಿಂದ ಕರೆದರೆ ಶಿವನು ಓ ಎನ್ನದಿರಲಾರ. 

ವೃಷಭ:- ತಲೆ ಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಂಡರೆ ಅದರಿಂದ ನಿಮಗೇ ಹಾನಿಯೇ ಹೊರತು ಅನ್ಯರಿಗಲ್ಲ. ನಿಮ್ಮ ಕೋಪತಾಪ ಪ್ರದರ್ಶಿಸಲು ಹಲವು ಮಾರ್ಗವಳಿವೆ. ಮೌನೇನ ಕಲಹಂ ನಾಸ್ತಿ ಎಂದರು ಹಿರಿಯರು. ಹಾಗಾಗಿ ಮೌನಕ್ಕೆ ಶರಣಾಗುವುದು ಒಳಿತು. 

ಮಿಥುನ:- ನಿಶ್ಚಿತ ಗುರಿ ತಲುಪಲು ಸಾಧನೆ ಮಾಡಬೇಕಿದೆ. ನೀವು ನಿಮ್ಮ ಪಾಡಿಗೆ ಸಾಧನೆ ಮಾಡುತ್ತಾ ಇರಿ. ನಿಮ್ಮ ಗುರಿ ತಲುಪಲು ಇದು ಸಹಕಾರಿಯಾಗುವುದು. ಆರ್ಥಿಕ ಸ್ಥಿರತೆ ಕಂಡುಬರುವುದಿಲ್ಲ. 
ಕಟಕ:- ದುಃಸ್ವಪ್ನಗಳಿಂದ ಆಗಬಹುದಾದ ಭಯ, ಅಸ್ಥಿರತೆ ಮುಂತಾದವುಗಳಿಂದ ತಪ್ಪಿಸಿಕೊಳ್ಳಲು ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ. ಸಾಧ್ಯವಾದರೆ ದೀಕ್ಷಿತನಾದ ವಟುವನ್ನು ಕರೆದು ಹಣ, ವಸ್ತ್ರದಾನ ಮಾಡಿ.

ಸಿಂಹ:- ನೀರಿನ ವಿಚಾರವಾಗಿ ಮನೆಯಲ್ಲಿ ಮನಸ್ತಾಪ ಆಗುವ ಸಾಧ್ಯತೆ ಇದೆ. ನೀರು ಜೀವಜಲ ಅದನ್ನು ಪೋಲು ಮಾಡುವುದನ್ನು ಕಂಡರೆ ಎಲ್ಲರಿಗೂ ಸಿಟ್ಟು ಬರುತ್ತದೆ. ಒಂದು ಸಂಸ್ಥೆಯ ನಿರ್ವಾಹಕರಾದ ನಿಮಗೆ ಇದರ ಅರಿವಿದೆ. ಹಾಗಂತಲೇ ಗ್ರಾಹಕರ ಜೊತೆ ನಿಷ್ಠುರ ಮಾತುಗಳನ್ನು ಆಡುವಿರಿ. 

RELATED ARTICLES  ಭಾರತೀಯ ಸೇನೆಯಿಂದ ಪುಲ್ವಾಮಾ ದಾಳಿಯ ​ ಅಬ್ದುಲ್ ಸೇರಿ ಇಬ್ಬರು ಉಗ್ರರ​ ಹತ್ಯೆ.

ಕನ್ಯಾ:- ನಿಮ್ಮ ಅಂತರಂಗದ ಸಜ್ಜನಿಕೆ, ಅಂತಿಮವಾದ ಧೈರ್ಯ ಎರಡನ್ನು ಬೆರೆಸಿ ಪ್ರಯತ್ನಿಸಿದರೆ ದಿವ್ಯವಾದುದನ್ನು ಗೆಲ್ಲಬಲ್ಲಿರಿ. ಬಹು ದಿನಗಳ ನಿಮ್ಮ ಮನಸ್ಸಿನ ತಾಕಲಾಟಕ್ಕೆ ಒಂದು ಅಂತ್ಯ ಕಂಡುಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. 

ತುಲಾ:- ಅಂತಃಕರಣದ ಆದ್ರ್ರತೆಯಿಂದ ಮಾತನಾಡುವ ಗೆಳೆಯರ ಬಳಿ ಮನಸ್ಸಿನ ದುಗುಡ ಹೇಳಿಕೊಂಡು ಅವರ ಬೆಂಬಲ ಪಡೆಯಿರಿ. ಐಶಾರಾಮಿ ವಸ್ತುಗಳ ಖರೀದಿಗೆ ಕಡಿವಾಣ ಹಾಕುವುದು ಒಳ್ಳೆಯದು. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ರೂಢಿಸಿಕೊಳ್ಳಿ. 

ವೃಶ್ಚಿಕ:- ದೊಡ್ಡ ಯೋಜನೆಯೊಂದನ್ನು ರೂಪಿಸಿ ಅಸ್ತಿತ್ವಕ್ಕೆ ತರುವಂತಹ ಕಾರ್ಯಕ್ಕೆ ಚಾಲನೆ ಸಿಗುವುದು. ಆದರೆ ಅತಿಯಾದ ಗಡಿಬಿಡಿಯಿಂದ ಆ ಯೋಜನೆ ಕೈತಪ್ಪಿಹೋಗುವ ಸಾಧ್ಯತೆಯೂ ಇದೆ. ಹಾಗಾಗಿ ಸಾವಧಾನದಿಂದ ಕಾರ್ಯ ಹಮ್ಮಿಕೊಳ್ಳಿ. 

RELATED ARTICLES  ಸತತ ಸೋಲಿನ ಬಳಿಕ ಐದನೇ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ 'ನಿರ್ಭಯ್'!

ಧನುಸ್ಸು:- ಧನಲಾಭದ ಬಗೆಗಿನ ನಿಮ್ಮ ಯೋಜನೆ ಏನಿದೆಯೋ ಗೊತ್ತಿಲ್ಲ. ಆದರೆ ಅದನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳುವುದು ಒಳ್ಳೆಯದು. ಶಿಸ್ತುಳ್ಳ ಮನುಜಂಗೆ ಶಿವನೂ ತಲೆಬಾಗುವನು. ಹಾಗಾಗಿ ನಿಮ್ಮ ಕಾರ್ಯಗಳಲ್ಲಿ ನಿಯಮತೆ ಮತ್ತು ಶಿಸ್ತು ರೂಪಿಸಿಕೊಳ್ಳಿ. 

ಮಕರ:- ಯಾವುದೋ ಅನಿಷ್ಟ ಶಕ್ತಿ ನಿಮ್ಮನ್ನು ಹಿಂದಕ್ಕೆ ಜಗ್ಗುವಂತೆ ಭಾಸವಾಗುತ್ತಿದೆ. ಇದು ನಿಮ್ಮ ಕರ್ಮಕಾರಕ ಶನಿ ಆಟ ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ. ಸಾಡೇಸಾತ್‌ ಶನಿಯ ಕಾಡಾಟದಿಂದ ಮುಕ್ತಿ ಹೊಂದಲು ಆಂಜನೇಯ ಸ್ವಾಮಿ ಮಂತ್ರ ಜಪಿಸಿ. 

ಕುಂಭ:- ಆದಿಶಕ್ತಿ ದುರ್ಗಾಮಾತೆಯನ್ನು ಮನಸಾ ಪ್ರಾರ್ಥಿಸಿ. ನಿಮ್ಮ ಎಲ್ಲಾ ಕಾರ್ಯಗಳಲ್ಲಿಯೂ ಹೊಸತನ ಕಂಡು ಬರುವುದು. ಆಕೆಯ ಅನುಗ್ರಹದಿಂದ ಎಲ್ಲವೂ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು. 

ಮೀನ:- ಮನಸ್ಸಿನ ಚಂಚಲತೆ ದೂರ ಮಾಡಿಕೊಂಡು ಅಲ್ಲಿ ಸ್ಥಿರತೆ ಸ್ಥಾಪಿಸಿ. ನಿಮ್ಮ ನಿಲುವುಗಳ ಬದಲಾವಣೆಯಿಂದ ನಿಮ್ಮ ಬೆಂಬಲಿಗರು ದೂರವಾಗುವ ಸಾಧ್ಯತೆ ಇದೆ. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆಯನ್ನಿಡಿ.