ಅಂಕೋಲಾ: ತಾಲೂಕಿನ ಆಂದ್ಲೆ ಕ್ರಾಸ್ ಸಮೀಪ ಭಾರೀ ಅಪಘಾತ ಸಂಭವಿಸಿದ್ದು ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಬಸ್ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಸೂಗಮಾ ಟೂರಿಟ್ಟ್ ಬಸ್ ಹಾಗೂ ಮುಂಬಯಿಂದ ಮಂಗಳೂರಿಗೆ ಬರುತ್ತಿದ್ದ ಮಹಾರಾಷ್ಟ್ರದ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಬಸ್ ಹಾಗೂ ಲಾರಿ ಮುಖ್ಕಾಮುಖಿಯಾಗಿ ಅಪಘಾತವಾದ ಕಾರಣ ಎರಡೂ ಚಾಲಕರು ಸೇರಿ ಬಸ್ಸ ನಲ್ಲಿ ಇದ್ದ ಎಲ್ಲಾ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
RELATED ARTICLES ಕುಮಟಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ನಾಪತ್ತೆಯಾದ ಬೈಕ್ ಒಂದೇ ದಿನದಲ್ಲಿ ವಾರಸುದಾದರರಿಗೆ ವಾಪಸ್
ಕುಮಟಾ ಹಾಗೂ ಅಂಕೊಲಾ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳಿಗೆ ರವಾನಿಸಲಾಗಿದೆ. ಅಪಘಾತದಿಂದಾಗಿ ರಸ್ತೆ ಸಂಚಾರ ಕೆಲಕಾಲ ಗೊಂದಲವಾಗಿದ್ದು ಪೋಲೀಸರು ಪರ್ಯಾಯ ವ್ಯವಸ್ಥೆ ಕಲ್ಪಿಸಿದರು ಎನ್ನಲಾಗಿದೆ.