ಕುಮಟಾ: ಹಿರೇಗುತ್ತಿ ಕೆ.ಡಿ.ಸಿ.ಸಿ ಬ್ಯಾಂಕ್ ಮೆನೆಜರ್ ಲಕ್ಷ್ಮಣ ಗೌಡ ಸೇವಾ ನಿವೃತ್ತಿ ಹೊಂದಿದ್ದರಿಂದ ಎಲ್ಲಾ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಹಾಗೂ ಶ್ರೀ ಬ್ರಹ್ಮಜಟಕ ಯುವಕ ಸಂಘ, ಗ್ರಾಮ ಪಂಚಾಯತ್ ಹಿರೇಗುತ್ತಿ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ನೌಕರರು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ, ಊರಿನ ನಾಗರಿಕರು ಸನ್ಮಾನಿಸಿ ಆತ್ಮೀಯವಾಗಿ ಬಿಳ್ಕೊಟ್ಟರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮೆನೆಜರ್ ಲಕ್ಷಣ ಗೌಡರವರು “ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುವಾಗ ಸಹಕರಿಸಿದ ಹಿರೇಗುತ್ತಿ ಊರಿನ ಜನರ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ನೌಕರರ ಸಹಕಾರವನ್ನು ಸ್ಮರಿಸಿದರು”. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಡಿ.ಸಿ.ಸಿ ಬ್ಯಾಂಕ್ ವಿಭಾಗಾಧಿಕಾರಿ ಬೀರಣ್ಣ ಕೆಂಚನ್‍ರವರು “ಲಕ್ಷ್ಮಣ ಗೌಡರವರು ಸದಾ ಕ್ರೀಯಾಶಿಲತೆಯಿಂದಿರುವ ಸಹನೆಯ ವ್ಯಕ್ತಿತ್ವದವರು. ಮುಂದೆಯೂ ಸಮಾಜಮುಖಿಯಾಗಿ ತಮ್ಮ ಸೇವೆಯನ್ನು ಒದಗಿಸಿರಿ” ಎಂದು ಆಶಿಸಿ ಶುಭ ಹಾರೈಸಿದರು.
ಸೆಕೆಂಡರಿ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ ಮಾತನಾಡಿ “ಲಕ್ಷ್ಮಣ ಗೌಡರವರ ಕಾರ್ಯದಕ್ಷತೆ, ಕರ್ತವ್ಯ, ಪ್ರಜ್ಞಾವಂತಿಕೆ ಅನುಕರಣೀಯ ಅವರ ನಿವೃತ್ತಿ ಜೀವನ ಸಂತೋಷಮಯವಾಗಲಿ” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ಹಿರೇಗುತ್ತಿ ಡಾ.ಗಿರೀಶ ನಾಯ್ಕ, ಗೋಕರ್ಣ ಮಹಾಬಲೇಶ್ವರ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷರಾದ ರಾಮು ಕೆಂಚನ್, ಹಿರೇಗುತ್ತಿ ಗ್ರಾಮಪಂಚಾಯತ್ ಅಧ್ಯಕ್ಷ ಸಣ್ಣಪ್ಪ ಮಾರುತಿ ನಾಯಕ, ಹಿರೇಗುತ್ತಿ ಸೊಸೈಟಿ ಉಪಾಧ್ಯಕ್ಷರಾದ ಹರೀಶ ನಾಯಕ ಹಾಗೂ ಗ್ರಾಮಪಂಚಾಯತ್ ಸದಸ್ಯರಾದ ನೀಲಪ್ಪ ಗೌಡ, ವಾಸುದೇವ ನಾಯಕ ಕೆಂಚನ್, ರಮಾನಂದ ಪಟಗಾರ, ಆಂದ್ಲೆ ಸೊಸೈಟಿ ಸೆಕ್ರೆಟರಿ ಶಿವಾನಂದ ನಾಯಕ, ಬರ್ಗಿ ಸೊಸೈಟಿ ಸೆಕ್ರೆಟರಿ ಎಮ್.ಎನ್.ಗಾವಡಿ, ಹಿರೇಗುತ್ತಿ ಸೊಸೈಟಿ ಸೆಕ್ರೆಟರಿ ರಾಘವೇಂದ್ರ ನಾಯಕ, ಹಾಗೂ ಬ್ರಹ್ಮಾನಂದ ನಾಯಕ, ಹಿರೇಗುತ್ತಿ ಬ್ಯಾಂಕಿನ ಎಸ್.ಎನ್.ಭಟ್ ಹಾಗೂ ಅರುಣ ಹೆಗಡೆ ಉಪಸ್ಥಿತÀರಿದ್ದರು.ಎನ್ ರಾಮು ಹಿರೇಗುತ್ತಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

RELATED ARTICLES  ಚಲಿಸುತ್ತಿದ್ದ ರೈಲಿನಿಂದ ಬಿದ್ದ ವ್ಯಕ್ತಿ : ಗಂಭೀರ ಗಾಯ

ವರದಿ: ಎನ್ ರಾಮು ಹಿರೇಗುತ್ತಿ