ಮೇಷ:- ನಿಮ್ಮ ವರ್ಚಸ್ಸನ್ನು ವಿಸ್ತರಿಸಿಕೊಳ್ಳಲು ಅನುಕೂಲವಾಗುವ ಒಳ್ಳೆಯ ಅವಕಾಶಗಳು ಲಭ್ಯವಾಗುವವು. ಆ ಉತ್ತಮ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.
ವೃಷಭ:- ಯಾರನ್ನೂ ಬೇಗನೆ ನಂಬಬೇಡಿ. ನಿಮಗೆ ತಿಳಿಯದಿರುವ ಇಕ್ಕಟ್ಟುಗಳನ್ನು ಸೃಷ್ಠಿಸುವ ಸಾಧ್ಯತೆ ಇರುತ್ತದೆ. ತಮಾಷೆಗಾಗಿ ಆಡಿದ ಮಾತು ವಿರೋಧಕ್ಕೆ ತಿರುಗಿ ಪತಿ ಪತ್ನಿಯಲ್ಲಿ ವಿರಸ ತರುವ ಸಾಧ್ಯತೆ ಇದೆ. ಈ ಬಗ್ಗೆ ಜಾಗ್ರತೆ ವಹಿಸಿ.
ಮಿಥುನ:- ಆಫೀಸಿನ ತೊಂದರೆಗಳನ್ನು ಮನೆಯಲ್ಲಿಯೂ ತಂದು ದುಃಖ ಪಡದಿರಿ. ಇದರಿಂದ ಮನೆ ರಣರಂಗವಾಗುವುದು. ಮನೆಯ ಸದಸ್ಯರೊಡನೆ ಭಿನ್ನಾಭಿಪ್ರಾಯ ಮೂಡುವುದು. ಆರ್ಥಿಕ ಸಮಸ್ಯೆ ಎದುರಾಗುವುದು.
ಕಟಕ:- ಖರ್ಚಿನ ಯಾದಿಯನ್ನು ನಿಯಂತ್ರಣದಲ್ಲಿಡಿ. ವಿಶೇಷವಾದ ಕಾರ್ಯ ಒಂದನ್ನು ರೂಪಿಸಿಕೊಳ್ಳಲು ಹಿರಿಯರಿಂದ ಬೆಂಬಲ ಸಾಧ್ಯವಿದೆ. ಕುಲದೇವರನ್ನು ಪ್ರಾರ್ಥನೆ ಮಾಡಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.
ಸಿಂಹ:- ನೇರವಾಗಿ ಬರುವ ಕಷ್ಟಗಳನ್ನು ಎದುರಿಸುವಿರಿ. ಆದರೆ ಹಿಂದಿನಿಂದ ಬರುವ ಕಷ್ಟಗಳಿಂದ ತಪ್ಪಿಸಿಕೊಳ್ಳಲಾರಿರಿ. ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಪ್ರಯಾಣ ಕಾಲದಲ್ಲಿ ಲಕ್ಷ್ಮೀನಾರಸಿಂಹ ದೇವರನ್ನು ಸ್ತುತಿಸಿ.
ಕನ್ಯಾ:- ನಿಮ್ಮ ತಿಳಿವಳಿಕೆಗೆ ಮೀರಿದ ಉತ್ತಮ ಶಕ್ತಿಯೊಂದು ನಿಮ್ಮನ್ನು ಅನುಗ್ರಹಿಸಲಿದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ತಪ್ಪದೇ ವಿಷ್ಣುಸಹಸ್ರನಾಮ ಪಠಿಸಿ.
ತುಲಾ:- ನಿಮ್ಮ ಕುಟುಂಬದ ಸದಸ್ಯರ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ಬಂಧುಗಳು, ಸ್ನೇಹಿತರು ನಿಮ್ಮ ಸಂತೋಷದಲ್ಲಿ ಪಾಲ್ಗೊಳ್ಳುವರು. ಮನೆಯಲ್ಲಿ ನೆಮ್ಮದಿ, ಸಂತೋಷದ ವಾತಾವರಣ ಕಾಣುವಿರಿ. ಗುರುಹಿರಿಯರ ಆಶೀರ್ವಾದ ನಿಮಗೆ ದೊರೆಯುವುದು.
ವೃಶ್ಚಿಕ:- ಗ್ರಹಗತಿಗಳು ಕೆಟ್ಟಿರುವಾಗ ಮಡದಿ ಮಕ್ಕಳೇ ನಿಮ್ಮನ್ನು ದೂರುವರು. ಗೆಳೆಯರ ಜೊತೆ ನಿಮ್ಮ ಕಷ್ಟವನ್ನು ಹಂಚಿಕೊಳ್ಳಿ. ಆದರೆ ಸ್ವಾಭಿಮಾನಕ್ಕೆ ಧಕ್ಕೆ ಮಾಡಿಕೊಳ್ಳದಿರಿ. ಆಂಜನೇಯ ಸ್ವಾಮಿ ಮಂತ್ರ ಪಠಿಸುವುದು ಒಳ್ಳೆಯದು.
ಧನುಸ್ಸು:- ನೀವು ಮಹತ್ತರವಾದ ಯೋಜನೆಗಳನ್ನು ರೂಪಿಸುವಿರಿ. ಆದರೆ ದೈವಬಲ ಇಲ್ಲದ ನಿಮಗೆ ಎಲ್ಲಾ ಹಂತದಲ್ಲೂ ಅಡೆತಡೆಗಳೇ ಎದುರಾಗುವುದು. ಗುರು ದಕ್ಷಿಣಾಮೂರ್ತಿಯನ್ನು ಧ್ಯಾನಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ.
ಮಕರ:- ನಿಮ್ಮ ಇಷ್ಟದ ವಿಷಯವನ್ನೇ ಬೆಂಬಲಿಸುವ ಬಾಳಸಂಗಾತಿಯಿಂದ ಸಂತೋಷದ ವಾತಾವರಣ ಮೂಡಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಆರೋಗ್ಯದ ಕಡೆ ತುಸು ಎಚ್ಚರಿಕೆ ವಹಿಸುವುದು ಒಳ್ಳೆಯದು.
ಕುಂಭ:- ನಿಮ್ಮ ಶಕ್ತಿ ಮೀರಿ ಎಲ್ಲಾ ಕೆಲಸಗಳನ್ನು ಸಕಾಲದಲ್ಲಿ ಪೂರೈಸುವಿರಿ. ಇದರಿಂದ ನಿಮ್ಮ ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ಸ್ನೇಹಿತರು ನಿಮ್ಮನ್ನು ಅಭಿನಂದಿಸುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.
ಮೀನ:- ಉನ್ನತ ವ್ಯಾಸಂಗದ ವಿಚಾರದಲ್ಲಿ ಮಕ್ಕಳು ಪ್ರಗತಿ ಸಾಧಿಸುವರು. ಹಳೆಯ ಗೆಳೆಯನೊಬ್ಬನಿಂದ ಒಳಿತಿಗಾಗಿನ ದಾರಿ ನಿಮಗೆ ಗೋಚರಿಸುವುದು. ಹಿರಿಯರು ನಿಮಗೆ ಬದುಕಿನ ಬಗೆಗಿನ ಸುರಕ್ಷತೆ ಕಲ್ಪಿಸಿಕೊಡುತ್ತಾರೆ.