ಕಾರವಾರ:-ಜಿಲ್ಲಾ ಪಂಚಾಯತ್ ನಲ್ಲಿ ಹಮ್ಮಿಕೊಂಡಿದ್ದ ಕೆ ಡಿ ಪಿ ಸಭೆಗೆ ಕಂದಾಯ ಸಚಿವ ಆರ್ .ವಿ ದೇಶಪಾಂಡೆ ಹಳಿಯಾಳ ದಿಂದ ಕಾರವಾರಕ್ಕೆ ಆಗಮಿಸುತ್ತಿದ್ದ ವೇಳೆ
ಅವರ ಬೆಂಗಾವಲು ವಾಹನ ಆಯಾ ತಪ್ಪಿ ಪಲ್ಟಿಯಾದ ಘಟನೆ ಕಾರವಾರ ತಾಲೂಕಿನ ಕದ್ರಾ ಗ್ರಾಮದ ಘಟ್ಟದ ಬಳಿ ನಡೆದಿದೆ.
ವಾಹನದಲ್ಲಿದ್ದ ಸಿಬ್ಬಂದಿಗಳಾದ ಮಾರುತಿ ನಾಯ್ಕ,ಚಾಲಕ ರಾಜೇಶ ನಾಯ್ಕ ಎನ್ನುವವರಿಗೆ ಗಾಯಗಳಾಗಿದ್ದು ಗಾಯಾಳುಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.ಘಟನೆ ಸಂಬಂಧ ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳುಗಳನ್ನು ಸಚಿವ ಆರ್ ವಿ ದೇಶಪಾಂಡೆ ಭೇಟಿಯಾಗಿ ಸಭೆಗೆ ನಡೆದರು ಎನ್ನಲಾಗಿದೆ.