ಭಟ್ಕಳ : ನಾಯಿಗಳನ್ನು ಕಂಡರೆ ಭಯ ಪಡೋ ಪರಿಸ್ಥಿತಿಯಲ್ಲಿ ಇದ್ದಾರೆ ಭಟ್ಕಳ ಹಾಗೂ ಸುತ್ತಲಿನ ಜನತೆ. ಹುಚ್ಚು ನಾಯಿಗಳ ಹಾವಳಿಯಿಂದಾಗಿ ಜನತೆ ಭಯದಲ್ಲಿಯೇ ಬದುಕುವಂತೆ ಆಗಿದೆ.
ತಾಲೂಕಿನಾದ್ಯಂತ ಹುಚ್ಚು ನಾಯಿ ಹಾವಳಿ ಹೆಚ್ಚಾಗಿದ್ದು ಒಂದು ವಾರದ ಹಿಂದಷ್ಟೇ ಮುಂಡಳ್ಳಿ ವ್ಯಾಪ್ತಿಯ ವೃದ್ಧೆಯನ್ನು ಕಚ್ಚಿ ಸಾಯಿಸಿದ್ದು.ಈಗ ಮತ್ತೆ ಇಲ್ಲಿನ ಹಳೆ ಬಸ್ ನಿಲ್ದಾಣದ ಹತ್ತಿರ ರಾತ್ರಿ ಅಂಗಡಿ ಸಮೀಪ ಮಲಗಿದ್ದ ವ್ಯಕ್ತಿಯ ಮೇಲೆ ಹುಚ್ಚುನಾಯಿ ದಾಳಿ ಮಾಡಿದ ಘಟನೆ ನಡೆದಿದೆ.
ಮುಂಡಳ್ಳಿ ಜಟ್ಟಮ್ಮ ಎಂಬ ವೃದ್ಧೆ ತನ್ನ ಮನೆಯ ಹೊರಗಡೆ ಮೂತ್ರ ವಿಸರ್ಜನೆ ತೆರಳಿದ ವೇಳೆ ಏಕಾಏಕಿ ಎರಗಿ ಮುಖದ ಭಾಗವನ್ನು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಘಟನೆ ನಡೆದ ಬೆನ್ನಲ್ಲೇ ಹಳೆ ಬಸ್ ಸ್ಟೆಂಡ್ ಸಮೀಪ ಮುಂಡಳ್ಳಿ ವ್ಯಕ್ತಿ ದುರ್ಗಪ್ಪ ನಾಯ್ಕ ಎನ್ನುವ ವ್ಯಕ್ತಿಗೆ
ಮುಖದ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ. ಇದು ಜನತೆ ಭಯಪಡಲು ಕಾರಣವಾಗಿದೆ.
ಸದ್ಯ ಈತ ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.