ಮೇಷ:- ಸಾಮರ್ಥ್ಯವಿದ್ದಾಗಲೂ ಸಮಯದ ವಿಷಯಧಾತುಗಳು ನಿಮ್ಮನ್ನು ವಂಚಿಸುವ ಸಾಧ್ಯತೆ ಇವೆ. ಹಾಗಾಗಿ ನೀವು ಕೆಲವು ವಿಷಯಗಳಲ್ಲಿ ಮೂಕಪ್ರೇಕ್ಷ ಕರಂತೆ ಇರಬೇಕಾಗುವುದು ಅನಿವಾರ್ಯವಾಗುವುದು. ಹಾಗಾಗಿ ಆದಷ್ಟು ಮೌನವಾಗಿರುವುದು ಒಳ್ಳೆಯದು.
ವೃಷಭ:- ವಿನಾಕಾರಣ ದುಂದುವೆಚ್ಚಗಳನ್ನು ನಿಯಂತ್ರಿಸಿ, ನಿಮ್ಮ ಸಹನೆ ಮತ್ತು ಕ್ರಿಯಾಶೀಲತೆಯಿಂದ ಸಂಪಾದನೆಗೆ ದಾರಿ ಇದೆ. ಇದರಿಂದ ಮನಸ್ಸಿಗೆ ಸಂತೋಷ ಉಂಟಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿಯು ನಿಮಗೆ ಖುಷಿ ನೀಡುವುದು.
ಮಿಥುನ:- ವಾಹನ ಖರೀದಿ ಬಗ್ಗೆ ನಿರ್ಧಾರ ಮಾಡಿದ್ದರೆ ಕೆಲವು ದಿನಗಳ ಕಾಲ ಆ ವಿಚಾರವನ್ನು ಮುಂದೂಡುವುದು ಒಳ್ಳೆಯದು. ಜನ್ಮಸ್ಥ ರಾಹು ಕೆಲ ಸಣ್ಣಪುಟ್ಟ ಅಪಘಾತಗಳನ್ನು ಮತ್ತು ಮನಸ್ಸಿಗೆ ಆಘಾತವನ್ನುಂಟು ಮಾಡುವ ಸಾಧ್ಯತೆ ಇದೆ.
ಕಟಕ:- ದುಡ್ಡಿದ್ದವನೇ ದೊಡ್ಡಪ್ಪ ಎಂಬ ಮಾತು ಸಾರ್ವಜನಿಕವಾಗಿ ಇದ್ದರೂ ನಿಮ್ಮ ವಿನಯವಂತಿಕೆಯಿಂದ ಸಮಾಜದಲ್ಲಿ ಗೌರವ ಸಂಪಾದಿಸುವಿರಿ. ಈ ಕಾರಣದಿಂದ ನಿಮ್ಮ ಮನೋಕಾಮನೆಗಳಲ್ಲಿ ಸಾಫಲ್ಯತೆ ಹೊಂದುವಿರಿ.
ಸಿಂಹ:- ಸದಾ ಹೊಯ್ದಾಟದಲ್ಲಿ ಇರುತ್ತೀರಿ. ಅದೃಷ್ಟಕ್ಕಾಗಿ ತುಂಬ ಪರದಾಡುತ್ತೀರಿ ಆದರೆ ಧೈರ್ಯ ಮಾತ್ರ ಬಿಡಬೇಡಿ. ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ನೀವು ನಿರ್ವಹಿಸುತ್ತಿರುವ ಜವಾಬ್ದಾರಿಯಿಂದ ಸಮಾಜಬಂಧುಗಳ ಗೌರವಕ್ಕೆ ಪಾತ್ರರಾಗುವಿರಿ.
ಕನ್ಯಾ:- ನಿಮ್ಮಲ್ಲಿ ಕ್ರಿಯಾಶೀಲತೆಯ ಸಾಂದ್ರತೆ ಹೆಚ್ಚು. ಚುರುಕಿನಿಂದ ಕೂಡಿದ್ದರೂ ಅನುಮಾನ ಪಡುವ ನಿಮ್ಮ ಸ್ವಭಾವದಿಂದ ಅನಗತ್ಯ ಹಿಂಸೆ ಅನುಭವಿಸುವಿರಿ. ಅನುಮಾನಂ ಪೆದ್ದ ರೋಗಂ ಎಂಬ ಮಾತನ್ನು ಸುಳ್ಳಾಗಿಸುವ ಪ್ರಯತ್ನ ಮಾಡಿ. ಎಲ್ಲರಲ್ಲೂ ವಿಶ್ವಾಸವಿಡಿ.
ತುಲಾ:- ನಿಮ್ಮ ಕೌಟುಂಬಿಕ ವ್ಯಾಜ್ಯಗಳು ನಿಮ್ಮನ್ನು ಒತ್ತಡದಲ್ಲಿ ಇರಿಸುತ್ತವೆ. ಹಿರಿಯರ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ ಸಣ್ಣ ವ್ಯಾಜ್ಯವನ್ನು ದೊಡ್ಡದು ಮಾಡಿಕೊಳ್ಳದಿರಿ.
ವೃಶ್ಚಿಕ:- ಭವಿಷ್ಯದ ಒಳಿತಿಗಾಗಿ ಸ್ವಾಭಿಮಾನ ಬಿಡಬೇಡಿ. ಕಾರ್ಯ ಸಾಧನೆಗಾಗಿ ನಯ, ವಿನಯ ತೋರಿಸಿ ಕೆಲಸ ಸಾಧನೆ ಮಾಡಿಕೊಳ್ಳಿ. ನಿಮ್ಮ ಸ್ನೇಹಿತರು ಬಂಧುಗಳು ನೀವು ಆಡುವ ಮಾತಿನ ಮೇಲೆ ವಿಶ್ವಾಸ ಇಟ್ಟುಕೊಂಡಿರುವರು. ಅವರಿಗೆ ನಿರಾಶೆ ಮಾಡದಿರಿ.
ಧನುಸ್ಸು:- ದುಷ್ಮನ್ ಎಲ್ಲಿದ್ದಾನೆ ಎಂದರೆ ಬಗಲಲ್ಲೇ ಇದ್ದಾನೆ ಎಂಬ ವಿಚಾರ ನಿಮ್ಮ ಅರಿವಿಗೆ ಬರುವುದು. ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎಂಬುದು ನಿಮ್ಮ ವಿವೇಚನೆಗೆ ಬಿಟ್ಟದ್ದು. ಈ ವಿಚಾರದಲ್ಲಿ ಎಚ್ಚರದಿಂದ ಇರುವುದು ಕ್ಷೇಮ.
ಮಕರ:- ಎಣ್ಣೆ ಬರುವ ಸಮಯದಲ್ಲಿ ಕಣ್ಣು ಮುಚ್ಚಿಕೊಳ್ಳುವಂತಹ ಅಚಾತುರ್ಯವನ್ನು ಖಂಡಿತಾ ಮಾಡಬೇಡಿ. ಗುರುವಿನ ಅನುಗ್ರಹದಿಂದ ಕೆಲ ವ್ಯವಹಾರಗಳಲ್ಲಿ ಅಧಿಕ ಲಾಭವುಂಟಾಗುವ ಸಾಧ್ಯತೆ ಇದೆ.
ಕುಂಭ:- ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಹತ್ತಿದಾಗ ಸಾರ್ಥಕ ಮನೋಭಾವ ಮೂಡುವುದು. ಈ ಸಾರ್ಥಕ ಮನೋಭಾವ ಮೂಡಲು ನಿಮ್ಮ ಹಾದಿಯಲ್ಲಿನ ಕೆಲವು ಕಂಟಕಗಳನ್ನು ಜಯಿಸಬೇಕಾದುದು ಅನಿವಾರ್ಯವಾಗುವುದು. ಕುಲದೇವರನ್ನು ಮನಸಾ ಸ್ಮರಿಸಿ.
ಮೀನ:- ಸುಖಸ್ಥಾನದ ರಾಹುವಿನ ದೆಸೆಯಿಂದ ಮನೆಯಲ್ಲಿನ ತಾಯಿ ಸ್ವರೂಪದವರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಸರ್ವರಕ್ಷ ಕಿಯಾದ ಮಾತಾ ದುರ್ಗಾದೇವಿಯನ್ನು ಆರಾಧಿಸಿ. ಮನೆಯ ಹೆಣ್ಣುಮಕ್ಕಳಿಗೆ ಗೌರವ ನೀಡಿ.