ಕುಮಟಾ: ಈ ಹಿಂದೆ ಸುದ್ದಿಯಾಗಿದ್ದ ತಾಲೂಕಿನ ಕೂಜಳ್ಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗಣಪತಿ ದೇವಸ್ಥಾನದ ಕಾಣಿಕೆ ಡಬ್ಬಿಯ ಕಳ್ಳತನದ ಪ್ರಕರಣದ ಆರೋಪಿಗಳು ಈಗ ಪೋಲೀಸರ ಬಲೆಗೆ ಬಿದ್ದಿದ್ದಾರೆ.

ದೇವಾಲಯ ಕಳ್ಳತನದ ಜೊತೆಗೆ ಹಲವು ಬೈಕ್‍ಗಳನ್ನು ಕದ್ದು ಅದನ್ನು ಹಾನಿಮಾಡಿ ವಿಕೃತಿ ಮೆರೆಯುತ್ತಿದ್ದ ಮೂವರು ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

RELATED ARTICLES  ದೀವಗಿ ಹಾಗೂ ಅಳಕೋಡ ಭಾಗದಲ್ಲಿ ಸೂರಜ್ ನಾಯ್ಕ ಸೋನಿ ಪ್ರಚಾರ : ಜನರಿಂದ ಉತ್ತಮ ಸ್ಪಂದನೆ.

ಪಟ್ಟಣದ ವನ್ನಳ್ಳಿ ನಿವಾಸಿ ದಾವೂದ್ ಅಬ್ದುಲ್ ಖರೀಮ್ ಲಂಗಡೊ ಹಾಗೂ ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಮಂಗೋಡ್ಲ ನಿವಾಸಿಗಳಾದ ಜಕ್ರಿಯಾ ಮೂಸಾ ಲಂಗಡೊ, ಅಲ್ತಾಫ್ ಫಕೀರಾ ಕೊಜಾ ಬಂಧಿತ ಆರೋಪಿಗಳಾಗಿದ್ದಾರೆ.

RELATED ARTICLES  ಸಾಧನೆಗಾಗಿ ಸಂದಿತು "ಸಾಧನಾ ಪೈ"ಅವರಿಗೆ "ವಿನಯ ಸ್ಮೃತಿ ಸಮರ್ಥ ಶಿಕ್ಷಕಿ" ಪುರಸ್ಕಾರ!

ಈ ಮೂವರು ಆರೋಪಿಗಳು ಕೂಜಳ್ಳಿಯ ಗಣಪತಿ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ಕಳ್ಳತನಮಾಡಿರುವುದಲ್ಲದೇ ಕಳೆದ ಎರಡು ವರ್ಷದಿಂದ ಕುಮಟಾ ಮತ್ತು ಹೊನ್ನಾವರದಲ್ಲಿ ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.