ಭಟ್ಕಳ – ಜಗದ್ವಿಖ್ಯಾತ ಮುರುಡೇಶ್ವರ ಪ್ರವಾಸಿತಾಣದಲ್ಲಿ ಜಿಲ್ಲೆಯ ಭಾವಕವಿ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಉಮೇಶ ಮುಂಡಳ್ಳಿಯವರು ಬರೆದ ” ಉತ್ತರ ಕನ್ನಡಕ್ಕೆ ಒಂದು ಸುತ್ತು” ಪ್ರವಾಸಿ ತಾಣಗಳ ಪರಿಚಯಾತ್ಮಕ ಪುಸ್ತಕದ ಎರಡನೇ ಆವೃತ್ತಿ ಇಂದು ಬಿಡುಗಡೆಯಾಯಿತು.
ಮೈಸೂರಿನ ಪ್ರಸಿದ್ದ ಪ್ರಕಾಶನ ಸಂಸ್ಥೆ ವೈದ್ಯನಾಥೇಶ್ವರ ಪ್ರಕಾಶನ ಪ್ರಕಟಿಸಿರುವ ಪುಸ್ತಕ ವನ್ನು ರವಿವಾರ ಬೆಳಿಗ್ಗೆ ಪ್ರಸಿದ್ದ ಪ್ರವಾಸಿತಾಣವಾದ ಮುರುಡೇಶ್ವರದ ರಾಜಗೋಪುರದ ಮುಂಬಾಗದಲ್ಲಿ ವಿನೂತವಾಗಿ ಆಡಂಬರವಿಲ್ಲದೆ ನೆರದ ಪ್ರವಾಸಿಗರಿಂದಲೇ ಬಿಡುಗಡೆಗೊಳಿಸಲಾಯಿತು. ಕೆರಳ ಕಣ್ಣೂರಿನ ಪ್ರವಾಸಿಗ ಪ್ರೇಮನ್ ಸಿ. ಪೊನ್ನಿಯಮ್ ಅವರು ಪುಸ್ತಕವನ್ನು ಬಿಡುಗೊಳಿಸಿ ಮಾತನಾಡಿ ಶ್ರೀ ಕ್ಷೇತ್ರದಲ್ಲಿ ತನಗೆ ದೊರೆತ ಅಪೂರ್ವ ಅವಕಾಶ ಇದಾಗಿದ್ದು ಪುಸ್ತಕ ಎಲ್ಲ ಪ್ರವಾಸಿಗರ ಕೈ ಸೇರಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಲೇಖಕ ಉಮೇಶ ಮುಂಡಳ್ಳಿ ಮಾತನಾಡುತ್ತಾ ಈ ಕೃತಿಯ ಹೊರತರುವ ಉದ್ದೇಶ ವನ್ನು ನೆರೆದ ಪ್ರವಾಸಿಗರ ಎದುರು ತರೆದಿಟ್ಟರು,ಜಿಲ್ಲೆ ಹೊರಜಿಲ್ಲೆಯಿಂದ ಉತ್ತರ ಕನ್ನಡಕ್ಕೆ ಬರುವ ಪ್ರವಾಸಿಗರಿಗೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅನುಕೂಲಕರವಾಗಿ ಈ ಪುಸ್ತಕ ಮಿತ್ರನಂತೆ ಸಹಕಾರಿಯಾಗಬೇಕು.
ಒಂದು ಕ್ಷೇತ್ರ ಅಥವಾ ತಾಣಕ್ಕೆ ಬೇಟಿ ನೀಡಿದಾಗ ಸುತ್ತಲಿನ ಸಮೀಪದ ಹತ್ತು ಹಲವು ತಾಣಗಳ ಪರಿಚಯ ಅವರಿಗೆ ಸುಲಭವಾಗಿ ದೊರೆತು ಪ್ರವಾಸಿಗರಿಗೆ ಆ ಪ್ರದೇಶಕ್ಕೆ ಹೋಗಲು ಅನುವಾಗುವಂತೆ ಇರಬೇಕು. ಎಂಬ ಕಾರಣದಿಂದ ಈ ಪುಸ್ತಕವನ್ನು ಸುಮಾರು ಮೂರು ನಾಲ್ಕು ವರ್ಷಗಳ ಕ್ಷೇತ್ರದ ಭೇಟಿ ಮತ್ತು ಅಧ್ಯಯನ ಹಿನ್ನೆಲೆ ಮತ್ತು ಸೂಕ್ತ ಪೋಟೊ ದಾಖಲೆಯೊಂದಿಗೆ ಹೊರತರುವ ಪ್ರಯತ್ನ ಮಾಡಲಾಗಿದೆ ಎಂದರು. ಇದು ಉತ್ತರ ಕನ್ನಡ ಪ್ರವಾಸಿಪ್ರೀಯರಿಗೆ ಅತ್ಯಂತ ಉಪಯುಕ್ತ ಸಂಗ್ರಹ ಯೋಗ್ಯ ಪುಸ್ತಕವಾಗಬಹುದೆಂಬ ಭರವಸೆ ಕೂಡ ಇದೆ ಎಂದರೂ. ಈ ಸಂದರ್ಭದಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಪುಸ್ತಕವನ್ನು ಪ್ರವಾಸಿಗರು ಖರಿದಿಸಿದ್ದು ವಿಶೇಷ ವಾಗಿತ್ತು..
ಈ ಸಂದರ್ಭದಲ್ಲಿ ಕವಯತ್ರಿ ರೇಷ್ಮಾ ಉಮೇಶ, ನಿನಾದ ಉಮೇಶ, ಕಸಾಪ ಘಟಕದ ಸದಸ್ಯರು ಹಾಗೂ ಸಿವಿಲ್ ಇಂಜಿನಿಯರ್ ಮಹೇಶ ನಾಯ್ಕ, ಪ್ರವಾಸಿಗರಾದ ರಮ್ಯಶ್ರೀ ಬೆಂಗಳೂರು, ರಾಜೀವ್ ಪಿ ಹಾಸನ, ಜ್ಯೋತಿ ನಾಯರ್ ಕೇರಳ, ವಿಶ್ವನಾಥ್ ಮಾಂಜ್ರೆಕರ್, ಸೀಮಾ ಮಾಂಜ್ರೆಕರ್, ವಸುದಾ ಗೌಡ ಮಂಡ್ಯ , ಸುಜಾತ ಕೃಷ್ಣ ರಾಮನಗರ ಮೊದಲಾದ ಅನೇಕ ಪ್ರವಾಸಿಗರು ಹಾಜರಿದ್ದರು.ಮೊದಲಿಗೆ ಎಲ್ಲ ಪ್ರವಾಸಿಗರನ್ನು ಕವಯತ್ರಿ ರೇಷ್ಮಾ ಉಮೇಶ ಸ್ವಾಗತಿಸಿದರು.