ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಕಳೆದ 15 ವರ್ಷಗಳಿಂದ ತಾಳಮದ್ದಳೆಯ ರಸದೌತಣ ನೀಡುತ್ತಿರುವ ಸಂಚಾರಿ ಯಕ್ಷಗಾನ ಮಂಡಳಿಯರು ನಗರದ ದೋಭಿಘಾಟ ರಸ್ತೆಯ ಸಾಯಿಮಂದಿರದಲ್ಲಿ “ರುಕ್ಮಾಂಗದ ಚರಿತ್ರೆ” ಎಂಬ ತಾಳಮದ್ದಳೆ ನಡೆಸಿದರು.
ರುಕ್ಮಾಂಗದನಾಗಿ ಮಲ್ಪೆ ವಾಸುದೇವ ಸಾಮಗ, ಧರ್ಮಾಂಗದನಾಗಿ ಪೂಕಳ ಲಕ್ಷ್ಮೀನಾರಾಯಣ ಭಟ್, ಮೋಹಿನಿಯಾಗಿ ಎಂ.ಕೆ.ರಮೇಶ ಆಚಾರ್ಯ, ಸಂಧ್ಯಾವಳಿಯಾಗಿ ರಘುನಾಥ ಶೆಟ್ಟಿ ಪಾತ್ರ ನಿಭಾಯಿಸಿದರು. ಹಿಮ್ಮೇಳದಲ್ಲಿ ಭಾಗವತರಾರಗಿ ಕರುಣಾಕರ ಶೆಟ್ಟಿ ಹಾಗೂ ಮಂಜುನಾಥ ತೆಕ್ಕಟ್ಟೆ ಸುಶ್ರಾವ್ಯ ಸಂಗೀತದ ಮೂಲಕ ಗಮನ ಸೆಳೆದರು.
ನಗರದ ಸಾಯಿ ಮಂದಿರ ಹಾಗೂ ಚೌಡೇಶ್ವರಿ ಹವ್ಯಾಸಿ ಯಕ್ಷಗಾನ ಮಂಡಳಿಯ ಜಂಟಿ ಆಶ್ರಯದಲ್ಲಿ ತಾಳಮದ್ದಳೆ ಏರ್ಪಡಿಸಲಾಗಿತ್ತು.