ಮೇಷ:- ನಿಮ್ಮ ಏಳಿಗೆ ಸಹಿಸದ ದುರ್ಜನರು ವಿನಾಕಾರಣ ನಿಮ್ಮ ಮೇಲೆ ಆರೋಪ ಮಾಡಬಹುದು. ಶಾಂತವಾಗಿ ಎದುರಿಸಿ ಅದನ್ನು ನೀವು ಗೆಲ್ಲಬಲ್ಲಿರಿ. ನಿಮಗೆ ದೈವ ಬಲದ ಸಹಾಯವಿರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ.

ವೃಷಭ:- ಹೊರಗಿನ ಜನರು ನಿಮ್ಮನ್ನು ಆದರಿಸುವರು. ಆದರೆ ಮನೆಯ ಮಂದಿಯೇ ನಿಮ್ಮ ಕಾರ್ಯವೈಖರಿಗೆ ಮೂಗು ಮುರಿಯುವರು. ಆದ್ದರಿಂದ ಮೊದಲು ಮನೆಯ ಸದಸ್ಯರ ಮನ ಗೆಲ್ಲಿ. ಮನೆಗೆದ್ದು ಮಾರು ಗೆಲ್ಲುವುದು ಒಳ್ಳೆಯದಲ್ಲವೇ?

ಮಿಥುನ:- ದೂರದ ಊರಿನಿಂದ ಬರುವ ಬಂಧುಗಳು ವಿನಾಕಾರಣ ಚರ್ಚೆಗೆ ಇಳಿಯುವರು. ಈ ಚರ್ಚೆ ಉತ್ತಮ ರೀತಿಯಲ್ಲಿ ನಡೆಯದೇ ಇರುವುದರಿಂದ ಅವರು ಬಂದ ದಾರಿಗೆ ಸುಂಕವಿಲ್ಲವೆಂದು ತಿಳಿದು ವಾಪಾಸ್ಸಾಗುವರು. ಆಗ ಜಯ ನಿಮ್ಮದೇ ಆಗುವುದು.

ಕಟಕ:- ಆಸ್ತಿಯ ವಿಚಾರದಲ್ಲಿ ಅವಶ್ಯ ಕಾಗದ ಪತ್ರಗಳನ್ನು ಜತನದಿಂದಲೇ ಸಜ್ಜಾಗಿ ಇರಿಸಿಕೊಳ್ಳವುದು ಕ್ಷೇಮ. ಕೆಲವರಿಗೆ ದೂರ ಪ್ರಯಾಣದ ಸಂಭವ ಇದೆ. ಮಕ್ಕಳು ವಿದ್ಯೆಯಲ್ಲಿ ಪ್ರಗತಿ ತೋರುವರು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 15-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?.

ಸಿಂಹ:- ನಿಮ್ಮ ದಾರಿಯಲ್ಲಿನ ಅಡೆತಡೆ ನಿವಾರಣೆ ಮಾಡಿಕೊಳ್ಳಲು ಶ್ರೀಲಕ್ಷ್ಮೀ ನಾರಸಿಂಹ ದೇವರನ್ನು ಆರಾಧಿಸುವುದು ಒಳ್ಳೆಯದು. ಸಂಗಾತಿಯ ಸಕಾಲಿಕ ಸಲಹೆಯಿಂದ ಕಾರ್ಯಗಳು ಸುಗಮವಾಗಿ ಆಗುವವು.

ಕನ್ಯಾ:- ಅನ್ಯರ ಹಸ್ತಕ್ಷೇಪದಿಂದಾಗಿ ಅನವಶ್ಯಕ ಒತ್ತಡವೊಂದು ನಿರ್ಮಾಣವಾಗಲಿದೆ. ಇದನ್ನು ತಾಳ್ಮೆ ಮತ್ತು ದೇವರ ಪ್ರಾರ್ಥನೆಯಿಂದ ಸರಿದೂಗಿಸಿಕೊಳ್ಳಬಹುದು. ವೃತ್ತಿಯಲ್ಲಿ ಏಕತಾನತೆ ಕಂಡುಬರುವುದರಿಂದ ಸ್ವಲ್ಪ ಬೇಸರವುಂಟಾಗುವುದು.

ತುಲಾ:- ಹಣಕಾಸಿನ ವಿಚಾರದಲ್ಲಿ ಎಡವಟ್ಟು ಮಾಡಿಕೊಳ್ಳದಿರಿ. ಗ್ರಾಹಕರೊಂದಿಗೆ ಕೋಪ, ತಾಪ ತೋರದೆ ತಾಳ್ಮೆಯಿಂದ ವರ್ತಿಸಿ. ತಾಳಿದವನು ಬಾಳಿಯಾನು. ಹಾಗಾಗಿ ಎಲ್ಲಾ ಕೆಲಸ ಕಾರ್ಯಗಳ ಮೇಲೆ ನಿಮ್ಮ ತಾಳ್ಮೆಯ ಪ್ರಭಾವ ಬೀರುವುದು.

ವೃಶ್ಚಿಕ:- ವ್ಯಾಜ್ಯದ ಕುರಿತಾಗಿನ ಹೊಂದಾಣಿಕೆಗೆ ಎದುರಾಳಿಗಳು ಸಜ್ಜಾಗಿ ಬರುವರು. ಅವರನ್ನು ಜಾಣ್ಮೆ ನುಡಿಗಳಿಂದ ಎದುರಿಸುವಿರಿ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಯಾವುದೇ ಗುರುವಿನ ಸ್ತೋತ ಪಠಿಸಿ.

ಧನುಸ್ಸು:- ಯಾವುದೇ ಕೆಲಸ ಕಾರ್ಯಗಳು ತೊಂದರೆ ಇಲ್ಲದೆ ಸರಾಗವಾಗಿ ನಡೆಯುವವು. ಶನಿ ಅಥವಾ ಶಿವನ ದೇವಾಲಯದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ. ಹಸುವಿಗೆ ಅಕ್ಕಿ, ಬೆಲ್ಲ ನೀಡಿ. ಹಣಕಾಸಿನ ಪರಿಸ್ಥಿತಿಯಲ್ಲಿ ಸಾಧಾರಣ ಪ್ರಗತಿ ಉಂಟಾಗುವುದು.

RELATED ARTICLES  ವಿವಿವಿ ಮೂಲಕ ಭಾರತೀಯ ಶಿಕ್ಷಣಕ್ಕೆ ಹೊಸದಿಕ್ಕು: ರಾಘವೇಶ್ವರ ಶ್ರೀ

ಮಕರ:- ಬೆಂಕಿ ಅವಘಡ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ವಿದ್ಯುತ್‌ ಉಪಕರಣಗಳೊಂದಿಗೆ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಿ. ಆದಷ್ಟು ಶಿವ ಪಂಚಾಕ್ಷ ರಿ ಮಂತ್ರ ಪಠಿಸಿ.

ಕುಂಭ:- ಯಾವುದೇ ರೀತಿಯ ಸಮಸ್ಯೆ ಎದುರಿಸಲು ಮಾನಸಿಕವಾಗಿ ಸಿದ್ಧರಾಗುವಿರಿ. ಇದರಿಂದ ಬೇಗನೆ ಹೊರಬರುವಿರಿ. ನಂಬಿದವರಿಂದಲೇ ಮೋಸ ಹೋಗುವ ಸಂದರ್ಭ ಎದುರಾಗಲಿದೆ. ಈ ಬಗ್ಗೆ ಎಚ್ಚರಿಕೆ ಇರಲಿ.

ಮೀನ:- ನೀವು ಬಿಟ್ಟ ಬಾಣ ನಿಮಗೆ ತಾಗಲಿದೆ. ಪದೇ ಪದೆ ನಿಮ್ಮ ಮಾತುಗಳೇ ನಿಮಗೆ ಅಪಾಯ ತರುವ ಸಾಧ್ಯತೆ ಇರುವುದರಿಂದ ಎರಡು ಬಾರಿ ಚಿಂತಿಸಿ ಮಾತನಾಡುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.