ಶಿರಸಿ : ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇದರ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರಿಗೆ ಶ್ರೀ ಹವ್ಯಕ ಮಹಾಸಭಾ (ರಿ.) ಬೆಂಗಳೂರು ಇವರು ಹವ್ಯಕ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಕಳೆದ ಡಿಸೆಂಬರ್ 2018 ರಲ್ಲಿ ನಡೆದ ಹವ್ಯಕ ಮಹಾಸಭಾದ ಅಮೃತ ಮಹೋತ್ಸವ ಮತ್ತು ದ್ವಿತೀಯ ವಿಶ್ವಹವ್ಯಕ ಸಮ್ಮೇಳನದಲ್ಲಿ ಈ ಪ್ರಶಸ್ತಿ ಲಭಿಸಿತ್ತು.
ಆದರೆ ಈ ಸಂದರ್ಭದಲ್ಲಿ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಅವರು ಅನಿವಾರ್ಯ ಕಾರಣಗಳಿಂದ ಈ ಸಮಾರಂಭದಲ್ಲಿ ಪಾಲ್ಗೋಳ್ಳಲು ಆಗದೇ ಇರುವುದರಿಂದ ದಿ:15.06.2019 ರಂದು ಶ್ರೀ ಅಖಿಲ ಹವ್ಯಕ ಮಹಾಸಭಾದವರು ಟಿ.ಎಸ್.ಎಸ್.ಗೆ ಭೇಟಿ ನೀಡಿ ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುವುದರೊಂದಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಹವ್ಯಕ ಮಹಾಸಭಾದ ಉಪಾಧ್ಯಕ್ಷರುಗಳಾದ ಶ್ರೀ ಆರ್. ಎಮ್. ಹೆಗಡೆ, ಬಾಳೇಸರ ಮತ್ತು ಶ್ರೀಧರ ಭಟ್ಟ, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಿ.ಜಿ. ಹೆಗಡೆ ತಲೇಕೇರಿ ಮತ್ತು ಡಾ. ಡಿ.ವಿ. ನರಹರಿ ರಾವ್, ಹಾಗೂ ನಿರ್ದೇಶಕರುಗಳಾದ ಶ್ರೀ ಪ್ರಶಾಂತ ಹೆಗಡೆ, ಶ್ರೀ ಬಿ. ಪಿ. ಹೆಗಡೆ, ಶ್ರೀ ಜಿ.ಎಮ್. ಭಟ್ಟ, ಕಾಜಿನಮನೆ, ಶ್ರೀ ಶಶಾಂಕ ಹೆಗಡೆ, ಶೀಗೇಹಳ್ಳಿ ಹಾಗೂ ಟಿ.ಎಸ್.ಎಸ್. ಸಂಘದ ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ಹೆಗಡೆ ಕಡವೆ, ನಿರ್ದೇಶಕರಾದ ಶ್ರೀ ಗಣಪತಿ ಎಸ್. ರಾಯ್ಸದ್, ಕಲ್ಸಳ್ಳಿ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ರವೀಶ ಹೆಗಡೆ ಇವರುಗಳು ಉಪಸ್ಥಿತರಿದ್ದರು.