ಕುಮಟಾ : ಕುಮಟಾ-ಹೊನ್ನಾವರ ಕ್ಷೇತ್ರದ ಅಭಿವೃದ್ಧಿ ಹರಿಕಾರರು, ಜನಾನುರಾಗಿಗಳು ಮಾಜಿ ಶಾಸಕರು ಆದ ದಿ. ಮೋಹನ್ ಕೆ. ಶೆಟ್ಟಿಯವರ ಜನ್ಮ ದಿನಾಚರಣೆಯ ನಿಮಿತ್ತ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು-ಬ್ರೆಡ್ ವಿತರಿಸಿದರು.
ಈ ಸಂದರ್ಭದಲ್ಲಿ ದಿಲೀಪ್ ಮೋಹನ್ ಶೆಟ್ಟಿ, ವಿ.ಎಲ್. ನಾಯ್ಕ, ಯಶೋದಾ ಶೆಟ್ಟಿ, ಮಧುಸೂದನ್ ಶೇಟ್, ವಿನಾಯಕ ಶೇಟ್ ಸುರೇಖಾ ವಾರೇಕರ್, ಕೃಷ್ಣಾನಂದ ವೆರ್ಣೇಕರ್, ಎಂ.ಟಿ. ನಾಯ್ಕ, ಅನಿತಾ ಮಾಪಾರಿ, ಗಣಪತಿ ಶೆಟ್ಟಿ, ಮನೋಜ ನಾಯಕ, ಸಂತೋಷ ನಾಯ್ಕ , ವೀಣಾ ನಾಯಕ, ಕಿಟ್ಟ ನಾಯ್ಕ,ರವಿ. ಗೌಡ, ವಿನು ಜಾರ್ಜ್, ಕೃಷ್ಣ ದೇವಳಿ, ರಮೇಶ್ ನಾಯ್ಕ, ದತ್ತು ಶೆಟ್ಟಿ, ಗಣೇಶ ಶೆಟ್ಟಿ ಮುಂತಾದವರು ಹಾಜರಿದ್ದರು.