ಮೇಷ ರಾಶಿ :

ತಾಯಿಯ ಆರೋಗ್ಯದ ಬಗ್ಗೆ ಆತಂಕ ಕಾಡಬಹುದು. ಆಸ್ತಿ, ಹಣಕಾಸಿಗೆ ಸಂಬಂಧಿಸಿದ ಯಾವುದೇ ಕಾರ್ಯವನ್ನು ಮಾಡಲು ಇವತ್ತಿನ ದಿನ ಅನುಕೂಲಕರವಾಗಿಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು, ಎಚ್ಚರವಿರಲಿ.

ಅದೃಷ್ಟ ಸಂಖ್ಯೆ : 3

ವೃಷಭ ರಾಶಿ :

ಇಂದು ರುಚಿಕರ ಭೋಜನ ದೊರೆಯುತ್ತದೆ. ತಾಯಿಯ ಜೊತೆಗಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ. ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ. ಕೌಟುಂಬಿಕ ಮತ್ತು ಆರ್ಥಿಕ ವಿಷಯಗಳ ಕಡೆಗೆ ಗಮನ ಕೊಡಿ.

ಅದೃಷ್ಟ ಸಂಖ್ಯೆ : 1

ಮಿಥುನ ರಾಶಿ :

ನೀವು ಕೈಗೊಂಡ ಯೋಜನೆಗಳಿಂದ ಆರಂಭದಲ್ಲಿ ನಷ್ಟವಾದ್ರೂ ನಂತರ ಯಶಸ್ಸು ದೊರೆಯುತ್ತದೆ. ಶುಭ ಚಿಂತಕರು ಮತ್ತು ಮಿತ್ರರನ್ನು ಭೇಟಿಯಾಗಲಿದ್ದೀರಿ. ವ್ಯಾಪಾರದಲ್ಲಿ ಉತ್ಸಾಹ ಮತ್ತು ಪ್ರಸನ್ನತೆಯ ಅನುಭವವಾಗಲಿದೆ.

ಅದೃಷ್ಟ ಸಂಖ್ಯೆ : 6

ಕರ್ಕ ರಾಶಿ :

ಇವತ್ತು ಆನಂದವಾಗಿ ದಿನ ಕಳೆಯಲಿದ್ದೀರಿ. ತನು-ಮನ ಪ್ರಫುಲ್ಲವಾಗಿರಲಿದೆ. ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಮಿತ್ರರಿಂದ ಸಂತೋಷ ದೊರೆಯುತ್ತದೆ. ಉಪಹಾರದ ಯೋಗವೂ ಇದೆ.

ಅದೃಷ್ಟ ಸಂಖ್ಯೆ : 9

RELATED ARTICLES  ಪ್ರಧಾನಿ ಮೋದಿಯಿಂದಲೂ ಉಪವಾಸ ಸತ್ಯಾಗ್ರಹ ಘೋಷಣೆ!

ಸಿಂಹ ರಾಶಿ :

ನಿಮ್ಮ ಸಂವೇದನಶೀಲತೆಯ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಚಿಂತೆ ಕಾಡಬಹುದು. ಇದರಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಹದಗೆಡಬಹುದು. ವ್ಯರ್ಥ ವಾದ-ವಿವಾದದಿಂದ ದೂರವಿರಿ.

ಅದೃಷ್ಟ ಸಂಖ್ಯೆ : 2

ಕನ್ಯಾ ರಾಶಿ :

ಇಂದು ನಿಮಗೆ ಶುಭ ದಿನ. ಆರ್ಥಿಕ ಲಾಭದ ಯೋಗವೂ ಇದೆ. ಧನಪ್ರಾಪ್ತಿಯಾಗಬಹುದು. ಸ್ತ್ರೀ ಮಿತ್ರರಿಂದ ಲಾಭವಾಗುವ ಸಾಧ್ಯತೆ ಇದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಆದಾಯ ವೃದ್ಧಿಸಲಿದೆ.

ಅದೃಷ್ಟ ಸಂಖ್ಯೆ : 7

ತುಲಾ ರಾಶಿ :

ಇವತ್ತು ನಿಮಗೆ ಶುಭ ದಿನ. ಮನೆ ಮತ್ತು ಕಚೇರಿಯಲ್ಲಿ ಅನುಕೂಲಕರ ವಾತಾವರಣವಿರಲಿದೆ. ಉದ್ಯೋಗಿಗಳಿಗೆ ಪದೋನ್ನತಿಯ ಯೋಗವಿದೆ. ಕುಟುಂಬದಲ್ಲಿ ಹರ್ಷೋಲ್ಲಾಸ ತುಂಬಿರುತ್ತದೆ. ಗೃಹಸ್ಥ ಜೀವನವೂ ಉತ್ತಮವಾಗಿರಲಿದೆ.

ಅದೃಷ್ಟ ಸಂಖ್ಯೆ : 5

ವೃಶ್ಚಿಕ ರಾಶಿ :

ನಿಮಗೆ ಇಂದು ಆಯಾಸ, ಆಲಸ್ಯ ಮತ್ತು ಮಾನಸಿಕ ಚಿಂತೆಯ ಅನುಭವವಾಗಲಿದೆ. ವ್ಯಾಪಾರದಲ್ಲಿ ವಿಘ್ನ ಎದುರಾಗಬಹುದು. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಅವರ ಆರೋಗ್ಯದ ಬಗ್ಗೆಯೂ ಆತಂಕ ಕಾಡುತ್ತದೆ. ಪ್ರತಿಸ್ಪರ್ಧಿಗಳೊಂದಿಗೆ ವಾದ-ವಿವಾದ ಬೇಡ.

RELATED ARTICLES  ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಣೆಗೆ ತಡೆ.

ಅದೃಷ್ಟ ಸಂಖ್ಯೆ : 3

ಧನು ರಾಶಿ :

ಇಂದು ನೀವು ಅತ್ಯಂತ ಸಮಾಧಾನದಿಂದ ಇರುವುದು ಒಳಿತು. ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ಆರೋಗ್ಯ ಸಮಸ್ಯೆಗೆ ಹೊಸ ಚಿಕಿತ್ಸೆ ಆರಂಭಕ್ಕೂ ಉಚಿತ ಸಮಯವಲ್ಲ. ಅತಿಯಾದ ಸಂವೇದನಾಶೀಲತೆಯಿಂದ ಮನಸ್ಸು ವ್ಯಾಕುಲಗೊಳ್ಳಲಿದೆ.

ಅದೃಷ್ಟ ಸಂಖ್ಯೆ : 1

ಮಕರ ರಾಶಿ :

ಧನಲಾಭದ ಯೋಗವಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿತರಾಗುತ್ತೀರಿ. ಮನಸ್ಸು ಗೊಂದಲಮಯವಾಗಲಿದೆ. ಅಸ್ಥಿರತೆ ಕೂಡ ಉಂಟಾಗಬಹುದು. ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ : 6

ಕುಂಭ ರಾಶಿ :

ಕೆಲಸದ ಯಶಸ್ಸಿಗೆ ಇಂದು ಅನುಕೂಲಕರ ದಿನ. ಇವತ್ತು ಮಾಡಿದ ಕಾರ್ಯಗಳಿಂದ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಗೌರವ ಕೂಡ ಹೆಚ್ಚಾಗಲಿದೆ. ಕುಟುಂಬದವರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ.

ಅದೃಷ್ಟ ಸಂಖ್ಯೆ : 4

ಮೀನ ರಾಶಿ :

ಇಂದು ಕಾಲ್ಪನಿಕ ಜಗತ್ತಿನಲ್ಲಿ ವಿಹರಿಸುತ್ತೀರಿ. ವಿದ್ಯಾರ್ಥಿಗಳಿಗೆ ಶುಭ ಸಮಯ. ಪ್ರಯಾಣಕ್ಕೆ ದಿನ ಅನುಕೂಲಕರವಾಗಿದೆ. ವರ್ತನೆಯಲ್ಲಿ ಸಂಯಮ ಕಾಪಾಡಿಕೊಳ್ಳುವುದು ಉತ್ತಮ.

ಅದೃಷ್ಟ ಸಂಖ್ಯೆ : 7