ಕುಮಟಾ: ತಾಲೂಕಿನಲ್ಲಿ ಇಂದು ನಡೆದ ಅಫಘಾತವೊಂದು ಇಡೀ ಜನಸಮೂಹ ಬೆಚ್ಚಿಬೀಳುವಂತೆ ಮಾಡಿದೆ.
ತಾಲೂಕಿನ ಮೂರೂರು ಕ್ರಾಸ್ ಸಮೀಪ ನಡೆದ ಅಪಘಾತದಲ್ಲಿ ಕೈಗಾದಿಂದ ಕುಮಟಾ ಕ್ಕೆ ಗರ್ಭಕೋಶದ ಚಿಕಿತ್ಸೆ ಎಂದು ಗಂಡನ ಜೊತೆಯಲ್ಲಿ ಬೈಕಿನಲ್ಲಿ ಬರುತ್ತಿದ್ದ ಮಹಿಳೆಯ ಮೇಲೆ ಕಂಟೇನರ್ ಹರಿದ ಘಟನೆ ನಡೆದಿದೆ.
ಹುಬ್ಬಳ್ಳಿ ಕಡೆಯಿಂದ ಮಂಗಳೂರಿನ ಕಡೆ ಬರುತ್ತಿದ್ದ ಕಂಟೇನರ್ ಬೈಕ್ ಮುಂದಿನ ಭಾಗದಲ್ಲಿ ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಹಿಂದೆ ಕುಳಿತಿದ್ದ ಮಹಿಳೆ ಲಾರಿಯ ಹಿಂದಿನ ಚಕ್ರಕ್ಕೆ ಸಿಲುಕಿದ್ದಾಳೆ ,ಮಹಿಳೆಯ ತಲೆ ಮೇಲೆ ಕಂಟೇನರ್ ಹಾದು ಹೋಗಿ ಮಹಿಳೆ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ.
ಮೃತಪಟ್ಟ ಮಹಿಳೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಿವಾಸಿ ಸ್ವಾತಿ ದೇವಾಸಿ ಎಂದು ಗುರುತಿಸಲಾಗಿದೆ.ಇವರು ಕೈಗಾದ ಅಣು ವಿದ್ಯುತ್ ಸ್ಥಾವರದಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.