ಶಿರಸಿ: ತನ್ನ ಬೈಕ್ ಗೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನಿಗೆ ಥಳಿಸಿದ ಘಟನೆ ವರದಿಯಾಗಿದೆ.

ಈರ್ವರು ಪೋಕರಿ ಹುಡುಗರು ಶಿರಸಿ ನಗರದ ಡಿಪೋ ಬಳಿ ಈ ಕೃತ್ಯ ಎಸಗಿದ್ದಾರೆ.

ಸಾರಿಗೆ ಸಂಸ್ಥೆಯ ಚಾಲಕರಾಗಿದ್ದ ನಾಗೇಶ್ ರಾಮಚಂದ್ರ ಆಚಾರಿ ಥಳಿತಕ್ಕೆ‌ ಒಳಗಾದವರು. ಇವರು ಎಂದಿನಂತೆ ಹುಬ್ಬಳ್ಳಿಯಿಂದ ಶಿರಸಿಗೆ ಬರುತ್ತಿರುವಾಗ ಇರುವರು ಪೋಕರಿ ಹುಡುಗರು ಪಲ್ಸರ್ ಬೈಕ್ ಮೇಲೆ ಅತಿ ವೇಗವಾಗಿ ಬರುತ್ತಿದ್ದು, ಬಸ್ ಚಾಲಕ ತಮಗೆ ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಡಿಪೊ ಬಳಿ ಬಸ್ ಅಡ್ಡಗಟ್ಟಿ ಚಾಲಕನನ್ನು ಹೊರಗೆಳೆದು ಥಳಿಸಿ ಗಾಯ ಪಡಿಸಿದ್ದಾರೆ.

RELATED ARTICLES  ಚಿನ್ನದ ಆಭರಣದ ಜೊತೆಗೆ ಗಣಪತಿ ವಿಸರ್ಜಿಸಿದರು... ಮುಂದೇನಾಯ್ತು ಗೊತ್ತಾ?

ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಗಳಾದ ತಬ್ರೇಜ್ ಮೊಹಮ್ಮದ್ ಜಾಫರ್ ಹಾಗೂ ಸಂಶೀರ್ ಮೊಹಮ್ಮದ್ ಜಾಫರ್ ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ .

ಈ ಕುರಿತು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಮುಂದಿನ‌ 48 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ.