ಹೊನ್ನಾವರ: ಹೊನ್ನಾವರ ಶಂಕರ್ ನಾಗ್ ಹುಟ್ಟೂರು ಶಂಕರ್ ನಾಗ್ ಎಂದರೆ ಆಟೋ ರಾಜ ಎಂದೇ ಎಲ್ಲರ ಮನ ಹೇಳುವುದು. ಶಂಕರ್ ನಾಗ್ ಹುಟ್ಟಿ ಬೆಳೆದ ಸ್ಥಳದಲ್ಲಿ ವಿನೂತನ ಸಿನಿಮಾದ ಟೀಸರ್ ಹೊರಬರಲಿದೆ. ಸ್ಯಾಂಡಲ್ ವುಡನಲ್ಲೇ ಮೊಟ್ಟಮೊದಲ ಬಾರಿಗೆ ಶಂಕರನಾಗ್ ಅವರ ಊರು ಹೊನ್ನಾವರದ ಚಿತ್ರಾಪುರದಲ್ಲಿ ಶಂಕರಣ್ಣನ ಅಪ್ಪಟ ಅಭಿಮಾನಿಗಳಾದ ಆಟೋಚಾಲಕರ ಸಂಘದವರ”ಫ್ಯಾನ್” ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ.

ಮುಖ್ಯತಾರಾಗಣದಲ್ಲಿ :-ನಾಯಕ- ಆರ‍್ಯನ್,
ನಾಯಕಿ- ಅಧ್ವಿತಿ ಶೆಟ್ಟಿ,ಸೆಲೆಬ್ರಿಟಿ ನಾಯಕಿ- ಸಮೀಕ್ಷಾ, ವಿಜಯ್ ಕಾಶಿ, ಮಂಡ್ಯ ರಮೇಶ್, ನವೀನ್ ಡಿ ಪಡೀಲ್, ರವಿ ಭಟ್, ರಘು ಪಾಂಡೇಶ್ವರ್, ವಿಟ್ಲ ಮಂಗೇಶ್ ಭಟ್, ವಿಜಯಲಕ್ಷ್ಮೀ ಉಪಾಧ್ಯಾಯ, ಪ್ರಸನ್ನ ಶೆಟ್ಟಿ, ಸಂಗೀತಾ ಭಟ್, ಸ್ವಾತಿ, ಪೃಥ್ವಿ ಸಾಗರ್ ಇದ್ದಾರೆ.

ಬೆಂಗಳೂರು, ಹೊನ್ನಾವರ, ಅಗ್ರಹಾರ, ಕುಮಟಾ, ಮುರ್ಡೇಶ್ವರ ಮುಂತ್ತಾದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ.


ಚಿತ್ರ ಹೀಗಿದೆ ಅಂತಾರೆ..!!

ರಂಗಭೂಮಿ ಎಳೆ ಇರುವಂಥ ಸಿನಿಮಾಗಳು ಬಂದಿವೆ, ರಿಯಾಲಿಟಿ ಶೋ ಗಳನ್ನ ಎಳೆಯಾಗಿ ಇಟ್ಟುಕೊಂಡು ಸಿನಿಮಾಗಳು ಬಂದಿವೆ, ಸಿನಿಮಾರಂಗವನ್ನೇ ಎಳೆಯಾಗಿಟ್ಟುಕೊಂಡು ಸಿನಿಮಾಗಳು ಬಂದಿವೆ..ಆದರೇ ಇದೇ ಮೊದಲನೇ ಬಾರಿಗೆ ಒಂದು ಸೂಪರ್ ಹಿಟ್ ಟಿ.ವಿ ಸೀರೀಯಲ್‌ನ ಎಳೆಯಾಗಿ ಇಟ್ಟುಕೊಂಡು ನಮ್ಮ ಸಿನಿಮಾ ಬರ‍್ತಾ ಇದೆ..ಇವತ್ತು ಸೀರಿಯಲ್ ಕ್ರೇಜ್ ಹೇಗಿದೆ ಅಂತ ಎಲ್ಲರಿಗೂ ಗೊತ್ತು.ನಮ್ಮ ಕನ್ನಡದಲ್ಲೇ ದಿನಕ್ಕೆ ಕಡಿಮೆ ಅಂದ್ರೂ ೫೦-೬೦ ಸೀರಿಯಲ್ ಗಳು ಟೆಲಿಕಾಸ್ಟ್ ಆಗ್ತಾ ಇದೇ..ಇವತ್ತು ಕಿರುತೆರೆಗೆ ಅಷ್ಟೊಂದು ದೊಡ್ಡ ಮಟ್ಟದ ಪ್ರೇಕ್ಷಕರು ಹುಟ್ಟಿಕೊಳ್ಳೋಕೆ ಕಾರಣ ಸೀರಿಯಲ್ ಗಳೇ..ಒಂದ್ ಸಿನಿಮಾ ಸ್ಟಾರ್ ಗಳಿಗೆ ಇರುವಷ್ಟು ಜನಪ್ರೀಯತೆ-ಅಭಿಮಾನಿ ಬಳಗ ಇವತ್ ಒಂದ್ ಹಿಟ್ ಸೀರಿಯಲ್‌ನಲ್ಲಿ ಅಭಿನಯಿಸ್ತಾ ಇರೋ ಹೀರೋ-ಹೀರೋಯಿನ್ ಗಳಿಗೆ ಇದ್ದಾರೆ.

RELATED ARTICLES  ಉಪ್ಪಿನಗಣಪತಿಯಲ್ಲಿ ಮಾಲಾಧಾರಿ ಸ್ವಾಮಿಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ

.ಎಷ್ಟೋ ಅಭಿಮಾನಿಗಳು ಅವರ ಫೋಟೋಗಳನ್ನ ತಮ್ಮ ವಾಟ್ಸ್ಯಾಪ್ ಡಿ.ಪಿ, ಪ್ರೋಫೈಲ್ ಫೋಟೋ, ಕವರ್ ಫೋಟೋ, ಗಳಾಗಿ ಸೋಶಿಯಲ್ ಮೀಡಿಯಾದಲ್ಲಿ ಬಳಸ್ಕೊಳ್ತಾ ಇದ್ದಾರೆ..ಎಷ್ಟೋ ಜನ ಫೇಸ್ ಬುಕ್ ಲ್ಲಿ ಫ್ರೆಂಡ್ಸ್ ಆಗಿದ್ದಾರೆ, ಇನ್ನೆಷ್ಟೋ ಜನ ಫೋಲೋವರ‍್ಸ್ ಆಗಿದ್ದಾರೆ, ಈ ಅಂಶಗಳನ್ನೇ ಇಟ್ಕೊಂಡು ಒಂದು ಸೂಪರ್ ಹಿಟ್ ಸೀರಿಯಲ್ ನ ಒಬ್ಬ ಹೀರೋ..ಮತ್ತು ಆ ಹೀರೋನ ಸಿಕ್ಕಾ ಪಟ್ಟೆ ಇಷ್ಟಪಡುವಂಥಹ ಒಬ್ಬಳು ಅಪ್ಪಟ ಅಭಿಮಾನಿ….ಇವರ ನಡುವೆ ನಡೆಯುವಂಥಹ ಒಂದು ಅಭಿಮಾನದ ಕಥೆಯೇ..ನಮ್ಮ ಸಿನಿಮಾದ ಎಳೆ.

RELATED ARTICLES  ಗೋಕರ್ಣದಲ್ಲಿ ಗರ್ಭಗುಡಿಯಲ್ಲಿ ನೀರು : ಭಕ್ತರಲ್ಲಿ ಕೆಲಕಾಲ ಗೊಂದಲ

ಹಾಸ್ಯ ಪ್ರಧಾನವಾಗಿಯೇ ಈ ಸಿನಿಮಾವನ್ನು ನಿರೂಪಣೆ ಮಾಡಿದ್ದು, ಪ್ರೇಕ್ಷಕರಿಗೆ ಒಂದು ನಿಮಿಷವೂ ಕೂಡ ಬೇಸರ ತರಿಸುವುದಿಲ್ಲ..ಎಲ್ಲಾ ಕಲಾವಿದರ ಸಹಜ ಅಭಿನಯ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳತ್ತೆ. ಸಂಭಾಷಣೆ ಕಚಗುಳಿ ಇಡತ್ತೆ, ಹಾಡುಗಳು ಮೋಡಿ ಮಾಡತ್ತೆ..ಸಂಕಲನದ ವೇಗ ಮುಂದಿನ ಕಥೆಯ ಕುತೂಹಲ ಕೆರಳಿಸುತ್ತೆ, ಕ್ಯಾಮೆರಾ ಕಣ್ಣಿನಲ್ಲಿ ಉತ್ತರ ಕನ್ನಡದ ಕರಾವಳಿ ಪ್ರದೇಶದ ಲೋಕೇಶನ್ ಗಳು ಪ್ರೇಕ್ಷಕರ ಕಣ್ಣಿಗೆ ಇಂಪನ್ನ ನೀಡತ್ತೆ..ಹಿನ್ನೆಲೆ ಸಂಗೀತಾ ನಗುಮೊಗದಿಂದ ಇಡೀ ಸಿನಿಮಾ ನೋಡುವಂಥೆ ಮಾಡತ್ತೆ ಎನ್ನುತ್ತಾರೆ ನಿರ್ದೇಶಕರು.

“ಫ್ಯಾನ್” ಸಿನಿಮಾದ ಟೀಸರ್ ನೋಡಿ…