ಭಟ್ಕಳ : ನಮ್ಮ ಮಾತೃಭಾಷೆ ಕನ್ನಡದ ಬಗೆಗಿನ ಅಭಿಮಾನ ನಮ್ಮಲ್ಲಿರಬೇಕು ಹಾಗೆಯೇ ಇತರ ಭಾಷೆಗಳನ್ನೂ ಗೌರವವಿರಬೇಕು. ನಮ್ಮ ಮಾತ್ರಭಾಷೆಯ ಜೊತೆಗೆ ಇಂದಿನ ವ್ಯಾವಹಾರಿಕ ಜಗತ್ತಿಗೆ ಅಗತ್ಯವಾದ ಇಂಗ್ಲೀಷ್ ಭಾಷೆಯ ಪ್ರಭುತ್ವವನ್ನೂ ಗಳಿಸಿಕೊಳ್ಳಬೇಕು ಎಂದು ಭಟ್ಕಳ ಕಸಾಪ ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ನುಡಿದರು. ಶ್ರೀವಲಿ ಪ್ರೌಢಶಾಲೆಯಲ್ಲಿ ಇಂಗ್ಲೀಷ್ ಭಾಷಾ ಕ್ಲಬ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇದೇ ಸಂದರ್ಬದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಸಾಹಿತಿಯಾಗಿ, ನಾಟಕಕಾರರಾಗಿ, ರಂಗಕರ್ಮಿಯಾಗಿ, ನಟ ನಿರ್ದೇಶಕರಾಗಿ, ಪ್ರಗತಿಪರ ಚಿಂತಕರಾಗಿ ವೈವೀಧ್ಯಮಯ ಕ್ಷೇತ್ರದಲ್ಲಿ ಸಾಧನೆಗೈದ ಕಾರ್ನಡರ ಬಹುಮುಖ ವ್ಯಕ್ತಿತ್ವ ಕುರಿತು ಮಕ್ಕಳಿಗೆ ಪರಿಚಯಿಸಿದರಲ್ಲದೇ ವಿದ್ಯಾರ್ಥಿಗಳೇ ವ್ಯವಸ್ಥಿತವಾಗಿ ಸಂಘಟಿಸಿದ ಕಾರ್ಯಕ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶ್ರೀವಲಿ ಶಿಕ್ಷಣ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಸೋಲಾರ್ ಲ್ಯಾಂಪನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಾಧ್ಯಾಪಕಿ ಮಮತಾ ಭಟ್ಕಳ ಮಾತನಾಡಿ ಭಾಷಾ ಸಂಘದ ಮೂಲಕ ಮಕ್ಕಳಲ್ಲಿ ಭಾಷಾ ಕೌಶಲಗಳನ್ನು ಬೆಳೆಸುವುದು ಭಾಷಾ ಸಂಘಗಳ ಮುಖ್ಯ ಉದ್ದೇಶ. ಇಂದಿನ ಅಗತ್ಯಗಳಿಗೆ ಇಂಗ್ಲೀಷ ಬಾಷೆಯ ಪ್ರಭುತ್ವ ಗಳಿಸಿಕೊಳ್ಳಬೇಕೆಂದರಲ್ಲದೇ ಕಾರ್ನಾಡರ ಬಹುಮುಖ ಕ್ಷೇತ್ರಗಳ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ನುಡಿದರು.
ಕಾರ್ಯಕ್ರಮದ ಆರಂಭದಲ್ಲಿ ಗಿರೀಶ ಕಾರ್ನಾಡ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಇಂಗ್ಲೀಷ್ ಲರ್ನಿಂಗ್ ಕ್ಲಬ್ ನ ವಿದ್ಯಾರ್ಥಿ ಪ್ರತಿನಿದಿಗಳಾದ ಯಶೋಧಾ ಮತ್ತು ಶ್ರೀಧರ್ ಹಾಗೂ ಇಂಗ್ಲೀಷ್ ಲಿಟರರಿ ಕ್ಲಬ್‍ನ ಹೇಮಂತ್, ಸಹನಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪವಿತ್ರ ಸಂಗಡಿಗರು ಪ್ರಾರ್ಥಿಸಿದರೆ, ವಿದ್ಯಾರ್ಥಿನಿ ಪ್ರಿಯಾಂಕ ಸ್ವಾಗತಿಸಿದರು. ಧೀಕ್ಷಾ ನಾಯ್ಕ ಹಾಗೂ ಎಸ್. ಜಿ. ವಿನುತ ನಿರೂಪಿಸಿದರೆ ಸಹನಾ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಇಂಗ್ಲೀಷ್ ಶಿಕ್ಷಕರಾದ ಕುಮಾರಿ ರಮ್ಯಾ ಹಾಗೂ ಕುಮಾರಿ ತ್ರಿವೇಣಿ ಅವರ ಮಾರ್ಗದರ್ಶನದಲ್ಲಿ ಸಂಪೂರ್ಣ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ವ್ಯವಸ್ಥಿತವಾಗಿ ನಿರ್ವಹಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.