ಮೇಷ ರಾಶಿ

ಇವತ್ತು ನೀವು ಆಧ್ಯಾತ್ಮಿಕ ದೃಷ್ಟಿಯಿಂದ ವಿಶಿಷ್ಟ ಸಂವೇದನೆಗೆ ಒಳಗಾಗುತ್ತೀರಿ. ನಿಗೂಢ ಮತ್ತು ಅತೀಂದ್ರಿಯ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ಆ ರಹಸ್ಯವನ್ನೆಲ್ಲ ತಿಳಿದುಕೊಳ್ಳಲು ಪ್ರಯತ್ನಿಸುತ್ತೀರಿ.

ವೃಷಭ ರಾಶಿ

ಗೃಹಸ್ಥ ಜೀವನದಲ್ಲಿ ಸುಖದ ಅನುಭವವಾಗುತ್ತದೆ. ಸ್ನೇಹಿತರು, ಕುಟುಂಬಸ್ಥರು ಮತ್ತು ಸಂಬಂಧಿಕರೊಂದಿಗೆ ಒಳ್ಳೆಯ ಭೋಜನ ಸವಿಯಲಿದ್ದೀರಿ. ಇವತ್ತಿನ ದಿನವನ್ನು ಆನಂದವಾಗಿ ಕಳೆಯಲಿದ್ದೀರಿ.

ಮಿಥುನ ರಾಶಿ

ಇವತ್ತು ನಿಮಗೆ ಶುಭ ದಿನ. ಮನೆಯಲ್ಲಿ ಶಾಂತಿ ಮತ್ತು ಆನಂದದ ವಾತಾವರಣವಿರುತ್ತದೆ. ಅಪೂರ್ಣ ಕೆಲಸಗಳೆಲ್ಲ ಪೂರ್ಣಗೊಳ್ಳುತ್ತವೆ. ಇದರಿಂದ ನಿಮಗೆ ಯಶಸ್ಸು ಮತ್ತು ಕೀರ್ತಿ ದೊರೆಯುತ್ತದೆ.

ಕರ್ಕ ರಾಶಿ

ಇವತ್ತು ನೀವು ಸಮಾಧಾನ ಚಿತ್ತದಿಂದ ಇರುವುದು ಒಳಿತು. ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಏರುಪೇರಾಗಬಹುದು. ಹೊಟ್ಟೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

RELATED ARTICLES  ಕಾಂಗ್ರೆಸ್‌, ಬಿಜೆಪಿ ರಾಜಕೀಯ ಮಾಡುತ್ತಿವೆ: ಎಚ್.ಡಿ.ಕುಮಾರಸ್ವಾಮಿ ಆರೋಪ.

ಸಿಂಹ ರಾಶಿ

ದೈಹಿಕವಾಗಿ ಅಸ್ವಸ್ಥರಾಗುತ್ತೀರಿ. ಮನಸ್ಸು ಕೂಡ ವ್ಯಾಕುಲಗೊಳ್ಳಲಿದೆ. ಮನೆಯಲ್ಲಿ ಕುಟುಂಬಸ್ಥರ ಜೊತೆಗಿನ ಕಲಹದಿಂದ ಮನಸ್ಸು ಉದಾಸೀನಗೊಳ್ಳುತ್ತದೆ. ಭಿನ್ನಾಭಿಪ್ರಾಯದಿಂದಾಗಿ ಬೇಸರ ಉಂಟಾಗಬಹುದು.

ಕನ್ಯಾ ರಾಶಿ

ಯಾವುದೇ ಕೆಲಸ ಕಾರ್ಯವನ್ನು ಸಾಕಷ್ಟು ಯೋಚಿಸಿ ಮುಂದುವರಿಸುವುದು ಉತ್ತಮ. ಒಡಹುಟ್ಟಿದವರೊಂದಿಗಿನ ಆತ್ಮೀಯತೆ ಇನ್ನಷ್ಟು ಹೆಚ್ಚಾಗಲಿದೆ. ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ತುಲಾ ರಾಶಿ

ನಿಮ್ಮ ಮನೋಸ್ಥೈರ್ಯ ಕೊಂಚ ದುರ್ಬಲವಾಗಿರಲಿದೆ. ಹಾಗಾಗಿ ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಹೊಸ ಕಾರ್ಯಕ್ಕೆ ಅಥವಾ ಇನ್ಯಾವುದೇ ಮಹತ್ವದ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬೇಡಿ.

ವೃಶ್ಚಿಕ ರಾಶಿ

ಇವತ್ತು ನಿಮಗೆ ಶುಭದಿನ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂತೋಷವಾಗಿ ಕಾಲ ಕಳೆಯಲಿದ್ದೀರಿ.

RELATED ARTICLES  ನಾಡಹಬ್ಬ 407ನೇ ದಸರಾ ಮಹೋತ್ಸವಕ್ಕೆ ಅರಮನೆ ನಗರಿ ಮೈಸೂರು ಸಜ್ಜು

ಧನು ರಾಶಿ

ಇವತ್ತಿನ ದಿನ ನಿಮಗೆ ಕಷ್ಟಕರವಾಗಿ ಪರಿಣಮಿಸಬಹುದು. ಕುಟುಂಬದವರೊಂದಿಗೆ ಜಗಳವಾಗುತ್ತದೆ, ಇದರಿಂದ ಮನಸ್ಸಿಗೆ ಬೇಸರ ಉಂಟಾಗಬಹುದು. ಮಾತಿನ ಮೇಲೆ ಸಂಯಮ ಇಟ್ಟುಕೊಳ್ಳುವುದು ಒಳಿತು.

ಮಕರ ರಾಶಿ

ಸ್ನೇಹಿತರು ಮತ್ತು ಸಂಬಂಧಿಕರ ಭೇಟಿಯಿಂದ ಆನಂದವಾಗಿ ದಿನ ಕಳೆಯಲಿದ್ದೀರಿ. ಸಾಮಾಜಿಕ ಕ್ಷೇತ್ರ, ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿ ಕೂಡ ನಿಮಗೆ ಲಾಭವಾಗಲಿದೆ.

ಕುಂಭ ರಾಶಿ

ಇವತ್ತಿನ ದಿನ ಸಾಮಾನ್ಯವಾಗಿರಲಿದೆ. ನಿಮ್ಮ ಕೆಲಸಗಳೆಲ್ಲ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಇದರಿಂದ ನೀವು ಕೂಡ ಪ್ರಸನ್ನರಾಗುತ್ತೀರಾ. ಕಚೇರಿ ಹಾಗೂ ಉದ್ಯಮದಲ್ಲಿ ಅನುಕೂಲಕರ ವಾತಾವರಣವಿರುತ್ತದೆ.

ಮೀನ ರಾಶಿ

ಮನಸ್ಸಿನಲ್ಲಿ ವ್ಯಾಕುಲತೆ ಮತ್ತು ಅಶಾಂತಿ ತುಂಬಿರುತ್ತದೆ. ದೈಹಿಕವಾಗಿಯೂ ಆಯಾಸದ ಅನುಭವವಾಗಲಿದೆ. ಹಿರಿಯ ಅಧಿಕಾರಿಗಳೊಂದಿಗೆ ಜಾಗರೂಕರಾಗಿ ವರ್ತಿಸಿ.1