ಕುಮಟಾ : ಸರ್ಕಾರದ ಎ.ಜಿ.ಟಿ ಶಿಕ್ಷಕರ ನೇರ ನೇಮಕಾತಿಯಿಂದ ಹಾಲಿ ಸೇವೆಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗಿದ್ದು sಅದನ್ನು ಮುಂದಿನ ಅಧಿವೇಶನದಲ್ಲಿ ಚರ್ಚಿಸುವೆ ಎಂದು ಶಾಸಕ ದಿನಕರ ಶೆಟ್ಟಿಯವರು ಅಭಿಪ್ರಾಯ ಪಟ್ಟರು. ಎ.ಜಿ.ಟಿ. ಶಿಕ್ಷಕರಿಗೆ ಸಮನಾದ ವೃಂದಬದಲಾವಣೆ ಹಾಲಿ ಪದವಿ ಪಡೆದರುವ ಶಿಕ್ಷಕರಿಗೂ ಅನ್ವಯಿಸಬೇಕು ಎಂದು ಪ್ರತಿಭಟಿಸಿ ರಾಜ್ಯಾದ್ಯಂತ ಕೈಗೊಂಡಿರುವ ಪದವಿ ಶಿಕ್ಷಕರ ಹೋರಾಟದ ಹಿನ್ನಲೆಯಲ್ಲಿ ಕುಮಟಾ ತಾಲೂಕಿನ ಸುಮಾರು 300 ಪದವಿ ಶಿಕ್ಷಕರ ಸಹಿಹೊಂದಿರುವ ಮನವಿಯನ್ನು ಕುಮಟಾ ಶಾಸಕ ದಿನಕರ ಶೆಟ್ಟಿಯವರಿಗೆ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನ್ನಾಡಿದ ಅವರು ಹಾಲಿ ಪದವಿ ಪಡೆದಿರುವ ಶಿಕ್ಷಕರ ಬೇಡಿಕೆ ನ್ಯಾಯಯುತವಾಗಿದ್ದು ಸದರಿ ಶಿಕ್ಷಕರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದರು.
ಕುಮಟಾ ತಾಲೂಕು ಪದವಿ ಶಿಕ್ಷಕರ ಪರವಾಗಿ ಮನವಿ ಸಲ್ಲಿಸಿದ ಶಿಕ್ಷಕ ವೃಂದ ತಮ್ಮ ನ್ಯಾಯಯುತ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪದವಿಧರ ಶಿಕ್ಷಕರ ರಾಜ್ಯ ಸಂಘ ಕರೆ ನೀಡುವ ಕರೆಗೆ ಸಂಪೂರ್ಣ ಬೆಂಬಲ ನೀಡಿ ಉಗ್ರಹೋರಾಟ ನಡೆಸಲಾಗುವುದು ಎಂದು ಒಕ್ಕೊರಳಿನಿಂದ ಹೇಳಿದರು. ಈ ಸಂದರ್ಭದಲ್ಲಿ ಪದವಿಧರ ಶಿಕ್ಷಕರಾದ ಶ್ರೀಧರ ಗೌಡ, ಮಂಜುನಾಥ ನಾಯ್ಕ, ಶೈಲಾ ಗುನಗಿ, ಎನ್. ಆರ್. ನಾಯ್ಕ, ಕೇಶವ ನಾಯ್ಕ, ನಾಗರಾಜ ಶೆಟ್ಟಿ, ಕೃಷ್ಣ ಗೌಡ, ರಾಜೇಶ ಶೇಟ್, ನಾಗರಾಜ ಕೊಡಿಯಾ, ಜಗನ್ನಾಥ ಮಡಿವಾಳ, ರಾಜು ನಾಯ್ಕ, ನಿತ್ಯಾನಂದ ನಾಯ್ಕ, ಉದಯ ನಾಯ್ಕ, ಪ್ರಶಾಂತ ನಾಯಕ ಸೇರಿದಂತೆ ಹಲವಾರು ಶಿಕ್ಷಕರು ಹಾಜರಿದ್ದರು.