ಕುಮಟಾ; ಇತ್ತೀಚೆಗೆ ನಿಧನರಾದ ತಾಲೂಕಿನ ಹೆಗಡೆಯ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ದಿ. ಎಲ್ ವಿ ಶಾನಭಾಗ ರವರಿಗೆ ಶೃದ್ಧಾಂಜಲಿ ಸಮರ್ಪಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಅನಾರೋಗ್ಯದಿಂದ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಮಾಜ ಜಿಲ್ಲಾ ಪಂಚಾಯತ ಅಧ್ಯಕ್ಷ, ಕಾಂಗ್ರೆಸ್ ನ ಹಿರಿಯ ಮುತ್ಸದ್ಧಿ, ಉಸ್ತುವಾರಿ ಸಚೀವ ದೇಶಪಾಂಡೆಯವರ ಆಪ್ತರಾಗಿದ್ದ ದಿ ಎಲ್ ವಿ ಶಾನಭಾಗರವರಿಗೆ ಅವರ ಊರಾದ ಹೆಗಡೆಯ ಗೆಳೆಯರ ಬಳಗ ಹಾಗೂ ಊರ ನಾಗರಿಕರು ಸೇರಿ ಶೃದ್ಧಾಂಜಲಿ ಸಮರ್ಪಣೆ ಕಾರ್ಯಕ್ರಮ ಮಂಗಳವಾರ ಶ್ರೀ ಶಾಂತಿಕಾಂಬಾ ದೇವಾಲಯದ ಸಭಾಬವನದಲ್ಲಿ ಇಟ್ಟುಕೊಂಡಿದ್ದರು.
ಕಾರ್ಯಕ್ರಮಕ್ಕೆ ಎಲ್ಲಾ ಸಮಾಜದ ಯಜಮಾನರು, ಪ್ರಮುಖರು, ಪರ ಊರಿನ ಅಭಿಮಾನಿಗಳು ಆಗಮಿಸಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ. ಗೋಪಾಲಕೃಷ್ಣ ಹೆಗಡೆಯವರು ವೇದಘೋಷದೊಂದಿಗೆ ಆರಂಭಿಸಿದರು. ಮಹೇಶ ನಾಯ್ಕ ಸುಂದರವಾದ ಗೀತನಮನ ಅರ್ಪಿಸಿದರು. ತದನಂತರ ಎಲ್ಲರೂ ಸರತಿ ಸಾಲಿನಲ್ಲಿ ಪುಷ್ಪಾರ್ಚನೆ ಮಾಡಿದರು ಮೇಲೆ ಒಂದು ನಿಮಿಷ ಮೌನಾಚರಣೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಎಲ್ಲ ಸಮಾಜದವರು ಭಾವುಕರಾಗಿ ತಮ್ಮ ನುಡಿನಮನ ಸಲ್ಲಿಸಿದರು.
ಹಿರಿಯರಾದ ರಾಮದಾಸ ಬಾಳೇರಿ ತಮ್ಮ ಕುಟುಂಬದ ಹಾಗೂ ಎಲ್ ವಿ ಯವರ ಅನ್ಯೋನ್ಯತೆ ಹೇಗಿತ್ತು. ಯಾವ ರೀತಿ ರಾಜಕೀಯದಲ್ಲಿ ಬೆಳೆದರು ಎಂಬುದನ್ನು ತುಂಬಾ ಬಾವುಕರಾಗಿ ನುಡಿದರು. ಡಾ. ಗೋಪಾಲಕೃಷ್ಣ ಹೆಗಡೆಯವರು ಎಲ್ ವಿ ಯವರ ಕಾರ್ಯವೈಖರಿ ಬಗ್ಗೆ ಹೆಮ್ಮೆ ಪಡುತ್ತ ಶಾಸ್ತ್ರದ ಪ್ರಕಾರ ಯಾವ ವ್ಯಕ್ತಿ ಮರಣ ಹೊಂದಿದಾಗ ಮೊದಲ ಹತ್ತು ದಿನಗಳು ಅವರ ವಾಯುವಿನಲ್ಲಿ ಇರುತ್ತದೆ ಅವರು ಎಲ್ಲವನ್ನೂ ವಿಕ್ಷಿಸುತ್ತಿರುತ್ತಾರೆ ಇವತ್ತು ನಾವು ಅರ್ಪಿಸಿರುವ ಈ ನುಡಿ ನಮನ ವೂ ಅವರು ಗಮನಿಸಿರುತ್ತಾರೆ ಎಂದರು. ಅವರ ಆತ್ಮಕ್ಕೆ ಸದ್ಗತಿ ಕೋರಿದರು
ನಾಮಧಾರಿ ಸಮಾಜದ ಯಜಮಾನರಾದ ಎನ್ ವಿ ನಾಯ್ಕ ಮಾತನಾಡಿ ನಮ್ಮ ಊರಿನ ದೊಡ್ಡ ಶಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರಲ್ಲಿ ಇದ್ದಂತ ಆ ಗತ್ತು ಯಾವ ರಾಜಕಾರಣಿಗೂ ಬರಲು ಸಾಧ್ಯವಿಲ್ಲ. ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿ ತಮ್ಮ ಸೇವೆ ಸಮಾಜಕ್ಕೆ ಸಲ್ಲಿಸಿ ಹೊರಟು ಹೋಗಿದ್ದಾರೆ. ಅವರಿಗೆ ಇದ್ದಂತ ಶಕ್ತಿಯ ಮುಂದೆ ಯಾವ ದುಷ್ಠ ಶಕ್ತಿಯೂ ಬರುತ್ತಿರಲಿಲ್ಲ ಎಂದು ಅವರ ಆತ್ಮಕ್ಕೆ ಶಾಂತಿ ಕೋರಿದರು.
ತಣ್ಣೀರಕುಳಿ ಹಾಲಕ್ಕಿ ಸಮಾಜದ ಯಜಮಾನರಾದ ತಿಮ್ಮಣ್ಣ ಗೌಡ ಮಾತನಾಡಿ ಎಲ್ ವಿ ಶಾನಭಾಗರವರನ್ನು ಮರೆಯಲು ಸಾಧ್ಯವಿಲ್ಲ . ಎಂತಹ ಕೆಲಸ ಇದ್ದರೂ ಊರಿನ ಜನರಿಗೆ ಮೊದಲು ನೆನಪಾಗೋದು ಅವರೇ ಆಗಿತ್ತು . ಎಂತಹ ಸಾಮಾನ್ಯ ಬಡಕುಟುಂಬದ ಮನೆಗೂ ಹೋಗಿ ಅವರ ಜೊತೆ ಮನೆ ಜನರಂತೆ ಇದ್ದು ತಂಪಾದ ನೆಲದ ಮೇಲೆ ಮಲಗಿ ಮಾತನಾಡುವಂಥ ಎಲ್ಲರೊಂದಿಗೆ ಬೆರೆಯುವ ಗುಣ ಇತ್ತು. ಮುಖ್ಯವಾಗಿ ಊರಿನ ಯಾವುದೇ ವ್ಯಕ್ತಿ ಇರಲಿ ಅವರ ಹೆಸರು ಕರೆದೇ ಮಾತನಾಡುತ್ತಿದ್ದರು. ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಎಂದರು.
ಜಿಲ್ಲಾ ಪಂಚಾಯತ ಶಿಕ್ಷಣ ಮತ್ತು ಸ್ಥಾಯಿ ಸಮೀತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ ಎಲ್ ವಿ ಯವರು ನನ್ನ ರಾಜಕೀಯ ಗುರುಗಳು, ಇವತ್ತು ನಾನು ಈ ಒಂದು ಹುದ್ದೆಯಲ್ಲಿರಲು ಅವರೂ ಕಾರಣ ಎಂದು ಭಾವುಕರಾಗಿ ನುಡಿದರು. ಹಾಗೂ ಜೀವನದ ಗತ್ತಿನ ರಾಜಕೀಯ ಮತ್ತು ಸಮಾಜಿಕ ಜೀವನದ ಬಗ್ಗೆ ವಿವರಿಸಿ ಶಾಂತಿ ಕೋರಿದರು.
ಎಲ್ ವಿ ಯವರ ಆತ್ಮೀಯರಾದ ಡಾ ಜಿ ಜಿ ಹೆಗಡೆ,ಹೊನ್ನಪ್ಪ ನಾಯಕ, ಎಮ್ ಎಮ್ ಹೆಗಡೆ, ಕುಮಟಾ ತಲೂಕು ಪಂಚಾಯತ ಸ್ಥಾಯಿ ಸಮೀತಿ ಅಧ್ಯಕ್ಷ ಜಗನ್ನಾಥ ನಾಯ್ಕ, ಜಿಲ್ಲಾ ಪಂಚಾಯತ ಕುಮಟಾ ವಿಭಾದ ಎಂಜಿನಿಯರ್ ಪ್ರದೀಪ ಆಚಾರಿ, ಊರಿನ ಹಿರಿಯ ಕಾಂಗ್ರೆಸ್ ಧುರೀಣ ರಾಯ ನಾಯ್ಕ , ಹಿರೇಬೀರ ದೇವಾಲಯದ ಅರ್ಚಕರಾದ ಮಹೇಶ ಗುನಗ, ನಿವೃತ್ತ ಶಿಕ್ಷಕ ಕೆ ಎಮ್ ಮುಕ್ರಿ ,ಉದಯ ಮಡಿವಾಳ, ಶ್ಯಾಮಲಾ ಪಟಗಾರ, ಸಾಹಿತಿ ಹಾಗೂ ಶಿಕ್ಷಕ ಶ್ರೀಧರ ಉಪ್ಪಿನಗಣಪತಿ, ಶಿಕ್ಷಕ ಚಿದಾನಂದ ದೇಶಬಂಡಾರಿ ಹೀಗೆ ಅನೇಕರು ಎಲ್ ವಿ ಯವರ ಜೊತೆ ಇದ್ದ ತಮ್ಮ ಆತ್ಮೀಯತೆ ಹಾಗೂ ಗಂಭೀರ ನಡೆ ನುಡಿ ಬಗ್ಗೆ ವಿವರಿ ಕಂಬನಿ ಮಿಡಿದರು. ಶಿಕ್ಷಕ ರವೀಂದ್ರ ಭಟ್ಟ ಸೂರಿ ಸುಂದರವಾಗಿ ಎಲ್ ವಿ ಯವರ ಜೀವನ ವರ್ಣಿಸಿ ನಿರೂಪಣೆ ಮಾಡಿದರು. ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು. ಕುಟುಂಬದವರಾದ ರಾಮನಾಥ ಶ್ರೀಧರ ಶಾನಭಾಗ (ಧೀರೂ), ಮೋಹನ ಶಾನಭಾಗ ಹಾಗೂ ಇತರರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.