ಭಟ್ಕಳ : ಕರ್ನಾಟಕ ವಿಶ್ವವಿದ್ಯಾಲಯದ 2018-19ನೇ ಸಾಲಿನ ಪ್ರಥಮ ಹಾಗೂ ತೃತೀಯ ಸೆಮಿಸ್ಟರನ ಬಿ.ಎಡಿ. ಫಲಿತಾಂಶ ಪ್ರಕಟವಾಗಿದ್ದು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ಹಾಗೂ ತ್ರತೀಯ
ಸೆಮಿಸ್ಟರಗೆ 100 ಪ್ರತಿಶತ ಫಲಿತಾಂಶ ಬಂದಿದೆ.
ಬಿ.ಎಡ್ ತೃತೀಯ ಸೆಮ್‍ನ ಭಾಗ್ಯಶ್ರೀ ನಾರಾಯಣ ನಾಯ್ಕ ಹಾಗೂ ಚಂದ್ರಿಕಾ ಎಮ್. ಮೊಗೇರ 90.10% ಹಾಗೂ ದೀಪಾ ರಾಥೋಡ್ 89% ಹಾಗೂ ಅಕ್ಷತಾ ಶನಿಯಾರ ನಾಯ್ಕ 88.83% ಅಂಕ ಗಳಿಸಿದ್ದಾರೆ. ಹಾಗೆಯೇ ಪ್ರಥಮ ಸೆಮಿಸ್ಟರಿನ ಮಾಲಾಶ್ರೀ ನಾರಾಯಣ ನಾಯ್ಕ ಹಾಗೂ ನಾಗರತ್ನ ಎಮ್. ನಾಯ್ಕ 87%, ಶ್ರೀದೇವಿ ಹಸ್ಲರ್ ಹಾಗೂ ಸುಮಂಗಲಾ 85.67% ಹಾಗೂ ಭವ್ಯಾ ಮೊಗೇರ 85.50% ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಪ್ರಶಿಕ್ಷಣಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ಆರ್.ಜಿ.ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಆಡಳಿತ ಮಂಡಳಿಯ ಸದಸ್ಯರುಗಳು, ಪ್ರಾಚಾರ್ಯ ಡಾ.ಆರ್. ನರಸಿಂಹ ಮೂರ್ತಿ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.