ಮೇಷ ರಾಶಿ

ಇಂದು ನಿಮ್ಮ ಪಾಲಿಗೆ ಅನುಕೂಲಕರ ಹಾಗೂ ಪರಿಪೂರ್ಣ ದಿನ. ಕೈಗೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಲಿವೆ. ಆರ್ಥಿಕ ಕ್ಷೇತ್ರದಲ್ಲೂ ಇಂದು ಲಾಭವಿದೆ.

ಅದೃಷ್ಟ ಸಂಖ್ಯೆ : 2

ವೃಷಭ ರಾಶಿ

ಇಂದು ಅತ್ಯಂತ ಸಮಾಧಾನಚಿತ್ತದಿಂದಿರಿ. ಮನಸ್ಸು ಚಿಂತೆಯ ಗೂಡಾಗಲಿದೆ. ಆರೋಗ್ಯವೂ ಸ್ವಲ್ಪ ಏರುಪೇರಾಗಬಹುದು. ಅದರಲ್ಲೂ ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ : 6

ಮಿಥುನ ರಾಶಿ

ಇಂದು ನಿಮಗೆ ವಿವಿಧ ರೀತಿಯಲ್ಲಿ ಲಾಭವಾಗಲಿದೆ. ಪುತ್ರರು ಮತ್ತು ಪತ್ನಿಯಿಂದ ಶುಭ ಸಮಾಚಾರ ದೊರೆಯುತ್ತದೆ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಆನಂದ ಉಂಟಾಗಲಿದೆ.

ಅದೃಷ್ಟ ಸಂಖ್ಯೆ : 3

ಕರ್ಕ ರಾಶಿ

ವ್ಯಾಪಾರ ಹಾಗೂ ನೌಕರಿ ಮಾಡುವವರಿಗೆ ಇಂದು ಅತ್ಯಂತ ಲಾಭದಾಯಕ ದಿನ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಉತ್ತಮ ವಾತಾವರಣವಿರುತ್ತದೆ. ಹಿರಿಯ ಅಧಿಕಾರಿಗಳ ಸಹಕಾರ ಸಿಗಲಿದೆ. ಪದೋನ್ನತಿ ಸಿಗಬಹುದು.

RELATED ARTICLES  ದಿನಾಂಕ 23/07/2019 ರ ದಿನ ಭವಿಷ್ಯ ಇಲ್ಲಿದೆ.

ಅದೃಷ್ಟ ಸಂಖ್ಯೆ : 9

ಸಿಂಹ ರಾಶಿ

ಇಂದು ಮಿಶ್ರಫಲವಿದೆ. ಧಾರ್ಮಿಕ ಮತ್ತು ಮಂಗಳ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ನಿಮ್ಮ ವ್ಯವಹಾರ ನ್ಯಾಯಯುತವಾಗಿರುತ್ತದೆ. ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದೀರಿ.

ಅದೃಷ್ಟ ಸಂಖ್ಯೆ : 1

ಕನ್ಯಾ ರಾಶಿ

ಇಂದು ಹೊಸ ಕಾರ್ಯವನ್ನು ಆರಂಭಿಸಬೇಡಿ. ಹೊರಗಿನ ತಿನಿಸುಗಳನ್ನು ತಿಂದಲ್ಲಿ ಆರೋಗ್ಯ ಹದಗೆಡಲಿದೆ. ಕೋಪ ಹೆಚ್ಚಾಗಲಿದೆ. ಮಾತಿನ ಮೇಲೂ ಸಂಯಮವಿರಲಿ.

ಅದೃಷ್ಟ ಸಂಖ್ಯೆ : 5

ತುಲಾ ರಾಶಿ

ಇಂದು ನಿಮಗೆ ಯಶಸ್ಸು ಸಿಗುತ್ತದೆ. ಮನರಂಜನೆ ಹೆಚ್ಚಾಗಿರುತ್ತದೆ. ದಿನವಿಡೀ ಮನಸ್ಸು ಪ್ರಸನ್ನವಾಗಿರುತ್ತದೆ. ಸಾರ್ವಜನಿಕ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ.

ಅದೃಷ್ಟ ಸಂಖ್ಯೆ : 8

ವೃಶ್ಚಿಕ ರಾಶಿ

ಇವತ್ತಿನ ದಿನ ಅತ್ಯಂತ ಸುಖಮಯವಾಗಿ ಕಳೆಯಲಿದೆ. ಕುಟುಂಬದವರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ಅದೃಷ್ಟ ಸಂಖ್ಯೆ : 2

ಧನು ರಾಶಿ

ಇಂದು ನಿಮಗೆ ಮಿಶ್ರಫಲವಿದೆ. ಉದರ ಬಾಧೆ ಕಾಣಿಸಿಕೊಳ್ಳಲಿದೆ. ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಚಿಂತೆ ಕಾಡುತ್ತದೆ. ಕೆಲಸದಲ್ಲಿ ಯಶಸ್ಸು ಸಿಗದೇ ಇರುವುದರಿಂದ ಕೋಪ ಆವರಿಸಲಿದೆ.

RELATED ARTICLES  ಹೊರ ಜಿಲ್ಲೆ, ರಾಜ್ಯ, ವಿದೇಶಗಳಿಂದ ಬಂದವರಿಗೆ ಗುಡ್ ನ್ಯೂಸ್.

ಅದೃಷ್ಟ ಸಂಖ್ಯೆ : 7

ಮಕರ ರಾಶಿ

ಇಂದು ನಿಮಗೆ ಪ್ರತಿಕೂಲ ದಿನ. ಮನಸ್ಸಿನಲ್ಲಿ ಖಿನ್ನತೆಯ ಅನುಭವವಾಗಲಿದೆ. ಶರೀರದಲ್ಲಿ ಸ್ಪೂರ್ತಿ ಮತ್ತು ತಾಜಾತನದ ಕೊರತೆ ಕಾಣಿಸಲಿದೆ.

ಅದೃಷ್ಟ ಸಂಖ್ಯೆ : 3

ಕುಂಭ ರಾಶಿ

ಇಂದು ಅತ್ಯಂತ ಪ್ರಸನ್ನರಾಗಿರುತ್ತೀರಿ. ಮನಸ್ಸಿನಲ್ಲಿ ಆವರಿಸಿರುವ ಚಿಂತೆಯ ಕಾರ್ಮೋಡ ದೂರವಾಗಲಿದೆ. ಸಹೋದರರ ಜೊತೆ ಸೇರಿ ಹೊಸ ಹೊಸ ಯೋಜನೆಗಳನ್ನು ರೂಪಿಸಲಿದ್ದೀರಿ.

ಅದೃಷ್ಟ ಸಂಖ್ಯೆ : 7

ಮೀನ ರಾಶಿ

ಇಂದು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಕೋಪದಲ್ಲಿ ಯಾರ ಜೊತೆಗೂ ಜಗಳ ಅಥವಾ ವಿವಾದಕ್ಕಿಳಿಯಬೇಡಿ. ದೇಹಕ್ಕೆ ಕಷ್ಟದ ಅನುಭವವಾಗಲಿದೆ. ಕಣ್ಣಿನ ಬಗ್ಗೆ ಕಾಳಜಿ ವಹಿಸಿ.

ಅದೃಷ್ಟ ಸಂಖ್ಯೆ : 2