ಕುಮಟಾ: ಹಿರೇಗುತ್ತಿಯ ರಾಮಕೃಷ್ಣ ತಿಮ್ಮಪ್ಪ ನಾಯಕ ಇಂದು 19/06/2019 ಮುಂಜಾನೆ ಹೃದಯಘಾತದಿಂದ ನಿಧನರಾದರು. ರಾಮಕೃಷ್ಣ ನಾಯಕರು ತಾಯಿ ಹೆಂಡತಿ ಮಗಳು ಮಗ ಸಹೋದರ ಸಹೋದರಿಯರನ್ನ ಅಗಲಿದ್ದಾರೆ.

ಅವರು ಉದ್ದಿಮೆದಾರರಾಗಿ ಕೃಷಿಕನಾಗಿ ಕಾರ್ಯ ನಿರ್ವಹಿಸಿದವರು. ಅಲ್ಲದೆ ಅನೇಕ ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರಸ್ತುತ ಅವರು ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಹಾಗೂ ಬಿಜಿಪಿ ಪಕ್ಷದ ಹಿರೇಗುತ್ತಿ ಘಟಕ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿದ್ದರು. ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

RELATED ARTICLES  ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ದಿನಾಂಕ 01/02/2019 ರ ರಾಶಿ ಭವಿಷ್ಯ

ಇವರ ಅಂತ್ಯ ಸಂಸ್ಕಾರದಲ್ಲಿ ಕುಮಟಾದ ಶಾಸಕರಾದ ದಿನಕರ ಕೆ ಶೆಟ್ಟಿ , ಆನಂದು ಕವರಿ , ಗೋಕರ್ಣದ ಅರ್ಬನ ಬ್ಯಾಂಕ ಉಪಧ್ಯಾಕ್ಷರಾದ ರಾಮು ಕೆಂಚನ್, ಶಿವಕುಮಾರ ಕವರಿ, ರಾಮಕೃಷ್ಣ ಯು ನಾಯಕ , ಎನ್ ಟಿ ಪ್ರಮೋದರಾವ್, ಬೀರಣ್ಣ ಕೆಂಚನ್, ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ನಾಯಕ ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷ ಸಣ್ಣಪ್ಪ ಮಾರುತಿ ನಾಯಕ, ನಾಗರಾಜ ನಾಯಕ ತೊರ್ಕೆ, ಚಂದ್ರಕಾಂತ ಗಾಂವಕರ, ಉಮೇಶ ಗಾಂವಕರ, ಕೃಷ್ಣಮೂರ್ತಿ ನಾಯಕ, ನೀಲಕಂಠ ನಾಯಕ, ನಾಗರಾಜ ನಾಯಕ, ಗಜಾನನ ನಾಯಕ, ರಾಜೀವ ಗಾಂವಕರ, ಶಾಂತಾ ಎನ್ ನಾಯಕ ಹಾಗೂ ಬ್ರಹ್ಮ ಜಟಕ ಯುವಕ ಸಂಘದ ಸರ್ವ ಸದಸ್ಯರು ಊರಿನ ನಾಗರಿಕರು ಹಾಜರಿದ್ದು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

RELATED ARTICLES  ಫೇಸ್’ಬುಕ್ ಪ್ರೀತಿಗೆ ಗಂಡನಿಗೆ ಸುಪಾರಿ ನೀಡಿದ ಹೆಂಡತಿ!


ವರದಿ ಎನ್ ರಾಮು ಹಿರೇಗುತ್ತಿ