ಶಿರಸಿ: ಕುಡಿತದ ಚಟ ಸ್ವಂತ ಮಗನನ್ನೇ ಬಲಿ ಪಡೆದಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

    ಕುಡಿದ ಅಮಲಿನಲ್ಲಿ ಮಗನ ಮೇಲೆ ತಂದೆಯೇ ಗುಂಡುಹಾರಿಸಿದ ಘಟನೆ  ಶಿರಸಿಯ ನರೇಬೈಲ್ ನಲ್ಲಿ ನಡೆದಿದೆ.

ರಾವಯ್ಯ ಎಂಬುವವರು ಕುಡಿದ ಅಮಲಿನಲ್ಲು ತನ್ನ ಮಗನಾದ ನಾಗೇಂದ್ರ ಎಂಬುವವನಿಗೆ ಗುಂಡು ಹಾರಿಸಿದ್ದಾನೆ. ನಾಗೇಂದ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ.

RELATED ARTICLES  “ಶ್ರೀ ಮಾರಿಕಾಂಬಾ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಯತ್ನಿಸುತ್ತಿದೆಯೇ ಸರ್ಕಾರ?”

    ತಂದೆ ಮಗನ ಮಧ್ಯೆ ಆಸ್ತಿ ಸಂಬಂಧ ಮನಸ್ತಾಪವಿದ್ದು ನಿನ್ನೆ ಈ ವಿಷಯ ತಾರಕಕ್ಕೇರಿದ್ದು ಈ ವೇಳೆ ಕುಡಿದ ಅಮಲಿನಲ್ಲಿದ್ದ ತಂದೆ ಬಂದೂಕಿನಿಂದ ಗುಂಡು ಹಾರಿಸಿದ್ದು ಮಗನ ಹೊಟ್ಟೆ ಸೀಳಿದೆ.

RELATED ARTICLES  ಅರಣ್ಯವಾಸಿಗಳಿಂದ ಬೃಹತ್ ಮೆರವಣಿಗೆ : ಅಧಿಕಾರಿಗಳ ವಿರುದ್ಧ ಆಕ್ರೋಶ : ತಹಶಿಲ್ದಾರರ ಕಛೇರಿ ಮುತ್ತಿಗೆ ಯತ್ನ

ತಕ್ಷಣದಲ್ಲಿ ಗಾಯಗೊಂಡಿದ್ದ ಮಗನನ್ನು ಶಿರಸಿ ಟಿ.ಎಸ್.ಎಸ್ ಆಸ್ಪತ್ರೆಗೆ ಕೊಂಡೊಯ್ದಿದ್ದು ಚಿಕಿತ್ಸೆ ನೀಡಲಾಗಿದ್ದು ಸಾವು ಬದುಕಿನ ನಡುವೆ ಹೋರಾಡುತಿದ್ದಾನೆ .

ಘಟನೆ ಸಂಬಂಧ ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.