ಗೋಕರ್ಣ:- ಇಲ್ಲಿನ ಆದಿಶಕ್ತಿ, ಗ್ರಾಮದೇವತೆಯಾದ ಶ್ರೀ ಭದ್ರಕಾಳಿ ದೇವಿಯ ಅವಲಬ್ಬವು ಬುಧವಾರದಂದು ಜರುಗಿತು.
ಮಂಗಳವಾರದಂದು ಹೊಸಅಕ್ಕಿ ಉಪಾರ ನಡೆಸಿ, ಮರುದಿನ ಬೆಳಿಗ್ಗೆ ಬಿಜ್ಜೂರಿನಿಂದ ತಾಯಿ ಮಹಾಮಾಯೆಯ ಕಳಸದ ಗಿಂಡಿಯನ್ನು ತಂದು ಗೋಕರ್ಣದ ಕಳಷದ ಮನೆಗೆ ಸಾಗಿ ಚಿನ್ನಾಭರಣ ಭೂಷಿತವಾದ ಪುಷ್ಪಾಲಂಕರಿತ ಕಳಸವನ್ನು ಗೋಕರ್ಣದ ಗ್ರಾಮದೇವತೆ ಶ್ರೀ ಭದ್ರಕಾಳಿ ದೇವಾಲಯಕ್ಕೆ ಸಂಚರಿಸಿದರು.
ಗ್ರಾಮದ ತುಂಬೆಲ್ಲ ರಂಗೋಲಿ ಹಾಕಿ ತಳಿರು ತೋರಣಗಳಿಂದ ಶೃಂಗರಿಸಿದ್ದರು.
ದೇವಿಗೆ ಪ್ರೀಯವಾದ ಮಲ್ಲಿಗೆ, ಅಬ್ಬಲಿ, ಸಂಪಿಗೆ ಹೂವನ್ನು ಭಕ್ತರು ಸಮರ್ಪಿಸುವುದರ ಮೂಲಕ ಹಣ್ಣುಕಾಯಿಗಳನ್ನು ಒಡೆಸುವಲ್ಲಿ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ವಿನಾಯಕ ಗುನಗಾ, ಬಲ ಕಟ್ಟಿಗೆದಾರರಾದ ದೇವಿದಾಸ ಬಸ್ತಿಕರ, ಸುಬ್ರಾಯ ಗುನಗಾ, ವಿಠಲ ಗುನಗಾ, ರವಿ ಗುನಗಾ, ಕರಿಯಾ ಗೌಡ, ಮತ್ತಿತ್ತರರು ಇದ್ದರು.