ಸಾಂಸ್ಕೃತಿಕ ನೀತಿ ಅಂಗೀಕರೀಸಿದ ಕರ್ನಾಟಕ ಸರ್ಕಾರ
ದೇಶದಲ್ಲೇ ಮೊದಲೆಂಬ ಹೆಮ್ಮೆ

ಪ್ರೌಢಶಾಲೆಗಳಲ್ಲಿ ಸಾಂಸ್ಕೃತಿಕ ಶಿಕ್ಷಕರ ನೇಮಕ, ಬುಡಕಟ್ಟು ವಿಶ್ವವಿದ್ಯಾಲಯ, ಸೂಫಿ ಮತ್ತು ತತ್ವಪದಗಳ ಅಧ್ಯಯನ ಕೇಂದ್ರ ಸ್ಥಾಪನೆ ಸೇರಿದಂತೆ ವಿವಿಧ ಪ್ರಸ್ತಾವನೆಗಳನ್ನು ಒಳಗೊಂಡ `ಸಾಂಸ್ಕೃತಿಕ ನೀತಿ’ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂಥಾದ್ದೊಂದು ಸಾಂಸ್ಕೃತಿಕ ನೀತಿ ಅಂಗೀಕರಿಸಿದ ಮೊದಲ ರಾಜ್ಯವೆಂಬ ಹಿರಿಮೆಗೆ ನಮ್ಮ ರಾಜ್ಯ ಪಾತ್ರವಾಗಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, `ಸಾಂಸ್ಕೃತಿಕ ನೀತಿ ಅನುಷ್ಠಾನ ಮಾಡಲು ರೂ. 59.68 ಕೋಟಿ ಅನುದಾನ ನೀಡಲಾಗುವುದು’ ಎಂದು ತಿಳಿಸಿದರು.

RELATED ARTICLES  ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಘೋಷಿಸುವಂತೆ ಮಾಡಲು ಮುಂದಾಗಬೇಕು : ಎಂ.ಬಿ. ಪಾಟೀಲ್

ಕನ್ನಡ ನಾಡು ನುಡಿಯ ಸಬಲೀಕರಣಕ್ಕಾಗಿ ಸಾಂಸ್ಕೃತಿಕ ನೀತಿ ರೂಪಿಸಲು ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ 2013 ರಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು 2014 ರಲ್ಲಿ ವರದಿ ನೀಡಿತ್ತು. ವರದಿಯ ಶಿಫಾರಸುಗಳನ್ನು ಪರಿಶೀಲಿಸಲು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಸಣ್ಣ ಪುಟ್ಟ ತಿದ್ದುಪಡಿಗಳ ಮೂಲಕ ಸಮಿತಿಯ ಶಿಫಾರಸುಗಳಿಗೆ ಸಂಪುಟ ಅನುಮೋದನೆ ನೀಡಿತು ಎಂದು ಅವರು ತಿಳಿಸಿದರು.

ನೀತಿಯ ಪ್ರಮುಖ ಅಂಶಗಳು.

* ಸರ್ಕಾರ ನೀಡುವ ಪ್ರಶಸ್ತಿಗಳನ್ನು ಆಯಾ ವರ್ಷವೇ ವಿತರಿಸಬೇಕು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 06-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

* ಪ್ರಾಚ್ಯವಸ್ತುಗಳು ಮತ್ತು ಸ್ಮಾರಕಗಳ ಸಂರಕ್ಷಣೆ

* ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧನಸಹಾಯ ನೀಡಲು ಮಾರ್ಗದರ್ಶಿ ಸೂತ್ರ

* ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನಕ್ಕೆ ಉತ್ತೇಜನ

* ಕನ್ನಡ ತಂತ್ರಾಂಶಗಳ ಸದ್ಬಳಕೆಗೆ ಪ್ರೋತ್ಸಾಹ

* ವಿವಿಧ ಅಕಾಡೆಮಿಗಳ ಸಬಲೀಕರಣ

* ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಕೇಂದ್ರೀಕರಣ ಹಾಗೂ ರಾಜ್ಯದ ನಾಲ್ಕು ಕಡೆಗಳಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪನೆ

* ಕಲಾಗ್ರಾಮಗಳ ಸ್ಥಾಪನೆ, ಕಲಾಕೃತಿಗಳ ಮಾರಾಟಕ್ಕೆ ಕೇಂದ್ರ ಸ್ಥಾಪನೆ

* ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸು

* ಪ್ರಾಕೃತ ಮತ್ತು ಪಾಲಿ ಭಾಷೆ ಅಧ್ಯಯನ ಕೇಂದ್ರ ಸ್ಥಾಪನೆ.