ಕುಮಟಾ : ಗ್ರಾಮ  ಪಂಚಾಯತ್ ದೇವಗಿರಿ, ಜನತಾ ವಿದ್ಯಾಲಯ ಧಾರೇಶ್ವರ,ಹಾಗೂ ದಿನಕರ ಶಾಲೆ ಧಾರೇಶ್ವರ ಇವರ ಸಹಯೋಗದಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

   ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ. ಅಧ್ಯಕ್ಷರಾದ ಶ್ರೀ  ಸುರೇಶ್. ಟಿ. ನಾಯ್ಕ ನೆರವೇರಿಸಿ ಮಾತನಾಡುತ್ತ ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ವಿಶ್ವಕ್ಕೆ ಪರಿಚಯಿಸಿದ ಯೋಗ ದಿನವನ್ನು ಇಂದು  ನಾವು ನೀವೆಲ್ಲಾ ಆಚರಣೆ ಮಾಡಿದ್ದೇವೆ ಅದು ಕೇವಲ ಆಚರಣೆಯಾಗಿರದೆ  ಅದನ್ನು ದಿನ ನಿತ್ಯ ರೂಡಿಸಿಕೊಂಡು ನಮ್ಮ ದೇಹವನ್ನು ರೋಗ ಮುಕ್ತವಾಗಿ ಇಟ್ಟುಕೊಳ್ಳೋಣ ಈಗಿನ ವಿದ್ಯಾರ್ಥಿಗಳಿಗೆ ಯೋಗವು ಅತಿ ಪ್ರಾಮುಖ್ಯವಾಗಿದ್ದು ಅದನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.

RELATED ARTICLES  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ ಹೊನ್ನಾವರದಲ್ಲಿ ಪ್ರತಿಭಟನೆ ಹಾಗೂ ಮನವಿ ಸಲ್ಲಿಕೆ

  ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ಶ್ರೀಮತಿ ಲಲಿತಾ ರೇವಣಕರ್, ಶಾಲಾಭಿವೃದ್ಧಿ ಸಮೀತಿಯ  ಕೋಶಾಧ್ಯಕ್ಷರಾದ ಶ್ರೀ ನಾಗರಾಜ್ ಶೇಟ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವಿನಯ್ ಕುಮಾರ್ ನಾಯಕ್,ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕಿ ಶ್ರೀಮತಿ ಲಕ್ಷ್ಮಿ ಕಸ್ಮಾಡಿ  ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಜಗದೀಶ್ ಗುನಗಾ, ಜನತಾ ವಿದ್ಯಾಲಯ ಹಾಗೂ ದಿನಕರ ಶಾಲೆಯ ಸಹ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದು ಯೋಗಾಭ್ಯಾಸ ಮಾಡಿದರು.

RELATED ARTICLES  ಸಾಹಿತ್ಯ ಭವನ ಕುಮಟಾದಲ್ಲಿ  ನಿರ್ಮಾಣವಾಗಲಿ : ಡಾ. ಶ್ರೀಧರ ಗೌಡ ಉಪ್ಪಿನಗಣಪತಿ

  ದೈಹಿಕ ಶಿಕ್ಷಣ ಶಿಕ್ಷಕರಾದ ಯೋಗೇಶ್ ಪಟಗಾರ ಎಲ್ಲರಿಗೂ ಯೋಗಾಭ್ಯಾಸವನ್ನು ಹೇಳಿಕೊಟ್ಟರು.