ಕುಮಟಾ: ಕೊಂಕಣ ಎಜ್ಯುಕೇಶನ ಟ್ರಸ್ವನ ಸರಸ್ವತಿ ವಿದ್ಯಾಕೇಂದ್ರದಲ್ಲಿ ವಿಶ್ವಯೋಗದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.


ವಿಶ್ವಯೋಗ ದಿನದ ಕುರಿತಾಗಿ ವಿವರ ನೀಡಿದ ದೈಹಿಕ ಶಿಕ್ಷಕಿ ಸುಮಂಗಲಾ ನಾಯ್ಕ ನರೇಂದ್ರ ಮೋದಿಯವರು ತಂದಿರುವ ಬದಲಾವಣೆಗಳು ಅನೇಕವಿದ್ದು ಭಾರತದ ಯೋಗವನ್ನು ಇಡೀ ವಿಶ್ವವೇ ಒಪ್ಪುವಂತೆ ಮಾಡಿದ ಪ್ರಧಾನಿಯವರ ಕಾರ್ಯ ಶ್ಲಾಘನೀಯ ಎಂದರು.
ಮುಂಗಾರು ಪ್ರವೇಶದೊಂದಿಗೆ ಮಾನವನ ಬದುಕಿನಗತಿ ಬದಲಾಗುವ ಕಾಲ ಇದು. ಅದರಲ್ಲಿಯೂ ಜೂನ್ 21 ಅತಿದೊಡ್ಡ ಹಗಲನ್ನು ಹೊಂದಿರುವ ಕಾರಣದಿಂದಾಗಿ ವಿಶ್ವಸಂಸ್ಧೆ ಈ ದಿನವೇ ಯೋಗ ದಿನಕ್ಕೆ ಒಪ್ಪಿದೆ. ಹಿಂದಿನ ಕಾಲದಲ್ಲಿಯೂ ಋಷಿ ಮುನಿಗಳು ಈ ದಿನವನ್ನೇ ಯೋಗಕ್ಕಾಗಿ ಆಯ್ದಕೊಡಿದ್ದಾರೆ ಎಂದರು. ಯೋಗ ಮನಸ್ಸು ಮತ್ತು ದೇಹವನ್ನು, ಆತ್ಮ ಮತ್ತು ಪರಮಾತ್ಮನನ್ನು ಲೀನ ಮಾಡುವ ಪ್ರಕ್ರಿಯೆ ಇದಾಗಿದೆ. ಹೀಗಾಗಿ ನಾವೆಲ್ಲರೂ ಯೋಗದ ಮಹತ್ವ ಅರಿತು. ಬದುಕನ್ನು ಉತ್ತಮವಾಗಿ ರೂಪಿಸುಕೊಳ್ಳುವ ಚಿಂತನೆ ಮಾಡಬೇಕು ಎಂದರು.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ|| ಅಭಿನವ ಬ್ರಹ್ಮಾನಂದ ಸ್ವಾಮೀಜಿ.


ವಿದ್ಯಾರ್ಥಿಗಳಿಗೆ ವಿವಿಧ ಯೋಗ ಪ್ರದರ್ಶನಕ್ಕೆ ದೈಹಿಕ ಶಿಕ್ಷಕರಾದ ಈಶ್ವರ ಗೌಡ ಮಾರ್ಗದರ್ಶನ ಹಾಗೂ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ ಶಿಕ್ಷಕ ವೃಂದದವರು. ಈ ಸಮಯದಲ್ಲಿ ಹಾಜರಿದ್ದರು.

RELATED ARTICLES  10 ರೂ ಕೋಳಿ ಮರಿಗೆ 52₹ ಟಿಕೆಟ್ ಪಡೆಯಬೇಕಾಯ್ತು…!