ಸಿದ್ಧಾಪುರ: ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿ, ಇಲ್ಲಿ “ವಿಶ್ವ ಯೋಗ ದಿನಾಚರಣೆ”ಯನ್ನು ದಿನಾಂಕ 21 ಜೂನ್ 2019ರಂದು ಆಚರಿಸಲಾಯಿತು.
ಕಾರ್ಯಕ್ರಮವು ಬೆಳಿಗ್ಗೆ 9:00 ಗಂಟೆಗೆ ಆರಂಭವಾಯಿತು.ಯೋಗದ ಕುರಿತಾಗಿ ಶಿಕ್ಷಕರಾದ ಶ್ರೀ ನಾರಾಯಣ ದೈಮನೆಯವರು ಪ್ರಾಸ್ತಾವಿಕ ಮಾತುಗಳನ್ನ ಆಡಿದರು. ಯೋಗದ ಮಹತ್ವ,ಯೋಗದ ಹುಟ್ಟು ಅದರ ಬೆಳವಣಿಗೆ ಕುರಿತಾಗಿ ಮಕ್ಕಳಿಗೆ ವಿವರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಎಮ್.ಎನ್. ಹೆಗಡೆ, ಹಾರೂಗಾರ(ನಿವೃತ್ತ ಜನರಲ್ ಮ್ಯಾನೇಜರ ಬಿಇಎಲ್ ಬೆಂಗಳೂರು) ಇವರು ಮಾತನಾಡಿ ಇಂದು ನಾವು ಯಾವ ವಾತಾವರಣದಲ್ಲಿ ಜೀವಿಸುತ್ತಿದ್ದೇವೆ, ಎಲ್ಲಾ ಕ್ಷೇತ್ರ ಸಾಕಷ್ಟು ಪ್ರಗತಿ ಆಗುತ್ತಿದ್ದರೂ ಮಾನವನ ಜೀವ ಅಲ್ಪಾಯುಷಿ ಆಗುತ್ತಿದೆ ಏಕೆ ಕಾರಣ ಒತ್ತಡ ರೋಗ ಕೆಟ್ಟ ವಾತಾವರಣ ಮೈಮುರಿದು ದುಡಿಯದಿರುವುದು ಆಗಿದೆ.ಹೀಗಾಗಿ ತನ್ನ ದೇಹ ಮನಸ್ಸನ್ನು ಹೃದಯವನ್ನು ಆರೋಗ್ಯಪೂರ್ಣವಾಗಿಟ್ಟುಕೊಳ್ಳಲು ದಿನದ 24 ಗಂಟೆಯಲ್ಲಿ ಒಂದು ಗಂಟೆಯಾದರೂ ಯೋಗ ದ್ಯಾನ ಮಾಡುವುದು ಅನಿವಾರ್ಯವಾಗಿದೆ ಇದರ ಸ್ವಸ್ಥ ಸಮಾಜ ನಿರ್ಮಿಸಲು ಸಾದ್ಯ ಎಂದು ಕಿವಿಮಾತು ಹೇಳಿದರು. ದೈಹಿಕ ಶಿಕ್ಷಕರಾದ ಶ್ರೀ ಗಣೇಶ ಹೆಗಡೆ ಇವರು ಯೋಗ ದಿನಾಚರಣೆಯ ಶಿಷ್ಟಾಚಾರದಂತೆ ಆಸನಗಳು ಮತ್ತು ಪ್ರಾಣಾಯಾಮಗಳನ್ನು ಮಕ್ಕಳಿಗೆ ಹೇಳಿಕೊಟ್ಟರು.
ಸಮಾರಂಭದಲ್ಲಿ ಮುಖ್ಯಶಿಕ್ಷಕರಾದ ಶ್ರೀ ಎಮ್ ಜಿ ಹೆಗಡೆಯವರು ಹಾಗೂ ಶಿಕ್ಷಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿ ಯೋಗ ದಿನಾಚರಣೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಿದರು .