ಮೇಷ:- ಸುಮ್ಮನೆ ಯಾವುದೋ ಒಂದು ಕೆಲಸ ಮಾಡಿಕೊಂಡು ಹೋಗುವುದಕ್ಕಿಂತ ನಿರ್ದಿಷ್ಟ ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಾರ್ಯಗಳಲ್ಲೂ ಸೋಲು ಅನುಭವಿಸುತ್ತಿರುವ ನಿಮಗೆ ಜೀವನದಲ್ಲಿ ನಂಬಿಕೆ ಇಲ್ಲದಂತಾಗಿದೆ. ಆದರೂ ನಿರಾಶೆ ಬೇಡ, ಮುಂದಿನ ದಿನ ಶುಭವಾಗಲಿದೆ.
ವೃಷಭ:- ಸುತ್ತಮುತ್ತಲಿನ ಜನರ ಪ್ರೀತಿ ವಿಶ್ವಾಸ ಗಳಿಸಿರುವ ನಿಮಗೆ ಒಂದು ರೀತಿ ಧನ್ಯತೆಯ ಭಾವ ಮೂಡುವುದು. ಇದೇ ಕಾರಣದಿಂದ ನೀವು ಇತರರಿಗೆ ಸಹಾಯ ಮಾಡಲು ಮುಂದಾಗುವಿರಿ. ಆದರೆ ಅಪಾತ್ರರಿಗೆ ದಾನ ಕೊಡುವುದು ಒಳಿತಲ್ಲ.
ಮಿಥುನ:- ನಿಮ್ಮದೇ ಆದ ವಹಿವಾಟುಗಳನ್ನು ವಿಸ್ತರಿಸುವಂತಹ ಸದವಕಾಶಗಳು ಕೂಡಿಬರುವ ಹೊಸ ಸಾಧ್ಯತೆ ಇದೆ. ಆದರೆ ಬಾಯಿ ತಪ್ಪಿ ಆಡಿದ ಮಾತಿನಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುವುದು. ಅದಕ್ಕಾಗಿ ನೀವು ಮರುಗುವಿರಿ.
ಕಟಕ:- ಕಾರಣವಿರದೆ ಬಂದು ಹರಟೆ ಹೊಡೆಯುವ ಮತ್ತು ನಿಮ್ಮ ಕೆಲಸ ಹಾಳು ಮಾಡುವಂತ ಸ್ನೇಹಿತರಿಂದ ದೂರವಿರುವುದು ಒಳ್ಳೆಯದು. ಒಂದನ್ನು ಪಡೆಯಲು ಮತ್ತೊಂದು ತ್ಯಾಗದ ಅವಶ್ಯಕತೆ ಇದೆ. ಅಲ್ಲದೆ ಜಗತ್ತಿನಲ್ಲಿ ಎಲ್ಲರಿಗೂ ಒಳ್ಳೆಯವರಾಗಿರಲು ಸಾಧ್ಯವಿಲ್ಲ.
ಸಿಂಹ:- ಮಾಡುವ ಕೆಲಸ ಕಾರ್ಯಗಳಲ್ಲಿ ತಪ್ಪು ನುಸುಳುವುದರಿಂದ ಕಾರ್ಯವನ್ನು ಪೂರ್ಣಗೊಳಿಸಲು ಕಾಲಾವಕಾಶ ಬೇಕಾಗುವುದು. ಗುರುರಾಯರನ್ನು ಸ್ಮರಿಸಿ ಕಾರ್ಯಪ್ರವೃತ್ತರಾಗಿ. ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವವು.
ಕನ್ಯಾ:- ನಿಮ್ಮ ಕುಲದೇವರನ್ನು ನೆನೆಯುವ ಕಾರಣದಿಂದ ಮನದಾಳದ ಸಂಕಲ್ಪಗಳಿಗೆ ವಿಜಯವಾಗಲಿದೆ. ಆದರೆ ಇತ್ತೀಚೆಗೆ ಸ್ವಲ್ಪ ಆಲಸ್ಯತನ ಬೆಳೆಸಿಕೊಂಡಿರುವ ನೀವು ಅದರಿಂದ ಹೊರಬಂದು ಇತರೆ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಒಳ್ಳೆಯದು.
ತುಲಾ:- ನಿಗೂಢ ವಿಷಯಗಳು ಅಂತರಂಗದಲ್ಲಿ ಭಯ ತರುವ ಸಾಧ್ಯತೆ ಹೆಚ್ಚು. ಕೇವಲ ಹಣದ ಹಿಂದೆ ಓಡದೆ ಮನೆಯವರ ಇಷ್ಟಾನಿಷ್ಟಗಳ ಕಡೆ ಗಮನ ಹರಿಸುವುದು ಒಳ್ಳೆಯದು. ನಿರಾಶಾವಾದಿಗಳಾಗದಿರಿ. ಆಶಾವಾದಿಗಳಾಗಿರಿ. ಜೀವನ ಸುಂದರ ಎನಿಸುವುದು.
ವೃಶ್ಚಿಕ:- ಬೇರೆಲ್ಲೋ ಸುಖವಿದೆ ಎಂದು ಇದ್ದ ಕೆಲಸವನ್ನು ಬಿಟ್ಟು ಅತಂತ್ರ ಸ್ಥಿತಿ ಹೊಂದದಿರಿ. ಕಳೆದುಕೊಂಡ ಜಾಗದಲ್ಲಿಯೇ ವಸ್ತುವನ್ನು ಹುಡುಕಿದರೆ ಸಿಗುವುದು. ಈಗ ಮಾಡುತ್ತಿರುವ ಕೆಲಸದ ಸ್ಥಳದಲ್ಲಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ. ನಿಮ್ಮ ಪರಿಶ್ರಮಕ್ಕೆ ಬೆಲೆ ಸಿಗುವುದು.
ಧನುಸ್ಸು:- ನಿಮ್ಮ ಮನೋಭಿಲಾಷೆಗಳು ಪೂರ್ಣಗೊಳ್ಳಲು ಜನ್ಮಶನಿ ಬಿಡುತ್ತಿಲ್ಲ. ಎಲ್ಲರ ನಿಯಾಮಕ ಶಿವನನ್ನು ಪ್ರಾರ್ಥಿಸುವುದರಿಂದ ಶನಿ ಕಾಟದಿಂದ ಪಾರಾಗಬಹುದು. ಬಡವರಿಗೆ ಆಹಾರ ನೀಡಿ.
ಮಕರ:- ನಿಮ್ಮ ಕಷ್ಟ ಕೇಳಿಸಿಕೊಳ್ಳಲು ಯಾರೂ ಮುಂದೆ ಬರಲಾರರು. ನೀವೇ ನಿಮ್ಮ ರಕ್ಷ ಣೆಗಾಗಿ ಮುಂದೆ ಹೆಜ್ಜೆ ಇಡಿ. ಗುರುವಿನ ಶುಭ ಸಂಚಾರದಿಂದ ನಿಮಗೆ ಸಹಾಯ ಮಾಡುವ ಜನರು ದೊರೆಯುವರು ಮತ್ತು ಹಣಕಾಸಿನ ಪ್ರಗತಿ ಉಂಟಾಗುವುದು.
ಕುಂಭ:- ಇರುವುದೆಲ್ಲವ ಬಿಟ್ಟು ಇರದಿರುವುದರ ಬಗ್ಗೆ ಚಿಂತಿಸುತ್ತಾ, ಯೋಚಿಸುತ್ತಾ ಕುಳಿತುಕೊಳ್ಳುವುದು ತರವಲ್ಲ. ನಿಮ್ಮ ಶ್ರಮಕ್ಕೆ ಸೂಕ್ತ ಪ್ರತಿಫಲ ಬರುವುದು. ಅಲ್ಪ ವಿಳಂಬವಾದರೂ ಒಟ್ಟಿಗೆ ಶುಭಫಲ ಬರುವುದು.
ಮೀನ:- ನಿರೀಕ್ಷಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಕೈಗೊಂಡ ಯೋಜನೆಗಳು ಯಶಸ್ಸಿನತ್ತ ಸಾಗುವುದರಿಂದ ಮನಸ್ಸಿಗೆ ಮುದ ಉಂಟಾಗುವುದು. ಸ್ನೇಹಿತರು, ಬಂಧುಬಾಂಧವರ ಸಹಕಾರ ನಿಮಗೆ ಹೆಚ್ಚಿನ ಸಂತಸ ನೀಡುವುದು.