ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಮುಜಂಗಾವು ಶ್ರೀ ಭಾರತಿ ವಿಧ್ಯಾಪೀಠದ ಮುಖ್ಯೋಪಾಧ್ಯಾಯರಾದ ಶ್ರೀಯುತ ಶ್ಯಾಮ ಭಟ್ ಇವರು “ಯೋಗವು ಸರ್ವರ ಹಿತಕ್ಕೆ ಯೋಗ್ಯವಾದದ್ದು” ಎಂದು ಅಭಿಪ್ರಾಯಪಟ್ಟರು.

ಶಾಲಾ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ “ವಿಧ್ಯಾರ್ಥಿಗಳು ಯೋಗದ ಮಹತ್ವವನ್ನು ಅರಿತುಕೊಂಡು ಮುನ್ನಡೆಯ ಬೇಕು ಆಗ ವಿಧ್ಯಾರ್ಥಿ ಜೀವನದಲ್ಲಿ ಮಹತ್ತರ ಬದಲಾವಣೆ ಕಾಣಲು ಸಾಧ್ಯ” ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಮ್ ಕಾರಿಯಪ್ಪ ಕಾಲೇಜಿನ ಯೋಗ ಶಿಕ್ಷಕಿ ಕುಮಾರಿ ಸುಪರ್ಣ ಇವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ವಿವರಿಸಿ ಯೋಗದ ವಿವಿಧ ಆಸನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು.

RELATED ARTICLES  ಜಿಲ್ಲೆಯ ಹೊರಗು ಪಸರಿಸಿದ ಸೂರಜ್ ಸೋನಿಯವರ ಅಲೆ.

ಈ ಸುಸಂಧರ್ಭದಲ್ಲಿ ಅತಿಥಿಗಳಿಗೆ ಶಾಲಾವತಿಯಿಂದ ಕೇರಳದ ವೃಕ್ಷದ ರಾಜಯೆಂದೇ ಕರೆಯಲ್ಪಡುವ ಹಲಸಿನ ಸಸಿಯನ್ನು ನೀಡಿ ಗೌರವಿಸಲಾಯಿತು.

ಶಾಲಾ ಅಧ್ಯಾಪಕ ಶ್ರೀಯುತ ಗೋವಿಂದ ಭಟ್ ಸ್ವಾಗತಿಸಿ, ಶ್ರೀಮತಿ ಸುನೀತಾ ಕೆ ವಂದಿಸಿದರು. ಶ್ರೀಯುತ ಶಿವಪ್ರಸಾದ್.ಚೆರುಗೋಳಿ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ವಿಚೇತ.ಬಿ , ಶ್ರೀ ಶಿವನಾರಾಯಣ ಭಟ್ , ಕೇಶವ ಪ್ರಸಾದ್ ಎಡಕ್ಕಾನ ಸಹಕರಿಸಿದರು

RELATED ARTICLES  ಯಕ್ಷಗಾನ ತರಬೇತಿ ಶಿಬಿರಕ್ಕಾಗಿ ಅರ್ಜಿ ಆಹ್ವಾನ.

ವರದಿ:ಕೇಶವಪ್ರಸಾದ ಎಡಕ್ಕಾನ