ಕುಮಟಾ: 2018 ನೇ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಿ ತಾಲೂಕು ಮಟ್ಟದಲ್ಲಿ ಪ್ರಥಮ ಹಾಗೂ ತೃತೀಯ ಸ್ಥಾನ ಪಡೆದ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಐಶ್ವರ್ಯಾ ಗುರನಾಥ ಶಾನಭಾಗ ಮತ್ತು ಪೂರ್ಣಿಮಾ ಕಮಲಾಕರ ಪಟಗಾರ ಅವರನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಸಲ್ಲಿಸಿರುವ ಪಟ್ಟಿಯ ಆಧಾರದ ಮೇರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು 2018-19 ನೆಯ ಸಾಲಿನ “ಕನ್ನಡ ಮಾಧ್ಯಮ ಪ್ರಶಸ್ತಿ”ಗೆ ಆಯ್ಕೆ ಮಾಡಿದೆ.
ದಿ. 30 ರಂದು ಕಲಾಭವನ, ನವನಗರ ಬಾಗಲಕೋಟೆಯಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಿದ್ದು, ಸನ್ಮಾನ, ಫಲಕ ಹಾಗೂ ಕ್ರಮವಾಗಿ ಹತ್ತು ಸಾವಿರ ಹಾಗೂ ಎಂಟು ಸಾವಿರ ನಗದು ಹಣವನ್ನು ನೀಡಲಾಗುವುದೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪತ್ರ ಬಂದಿದೆಯೆಂದು ಮುಖ್ಯಾಧ್ಯಾಪಕ ಎನ್.ಆರ್.ಗಜು ತಿಳಿಸಿದ್ದಾರೆ.