ಹೊನ್ನಾವರ- ಸಾಮಾಜಿಕ ಪರಿಶೋಧನೆಯಿಂದ ನರೇಗಾ ಕಾಮಗಾರಿಗಳಲ್ಲಿ ತಪ್ಪುಗಳ ಪ್ರಮಾಣ ಕಡಿಮೆಯಾಗುತ್ತಿದೆ.ಪಾರದರ್ಶಕತೆ ಸಾಧ್ಯವಾಗಿದೆ ಎಂದು ತಾಲೂಕು ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ಹೇಳಿದರು.


ಅವರು ಇಂದು ತಾಲೂಕಿನ ಬಳಕೂರು ಪಂಚಾಯತ್ ನಲ್ಲಿ ನಡೆದ ೨೦೧೯/೨೦ ನೇ ಸಾಲಿನ ಮೊದಲ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಜೊತೆಗೆ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಅಂಕವಿಕಲ, ವೃದ್ದಾಪ್ಯ,ವಿದವಾ ವೇತನ,ಮನಸ್ವಿನಿ ಫಲಾನುಭವಿಗಳನ್ನು ಭೇಟಿ ಮಾಡಿ ಸಾಮಾಜಿಕ ಪರಿಶೋಧನೆ ನಡೆಸಿದ ವರದಿಯನ್ನು ಸಹ ಅವರು ಗ್ರಾಮಸಬೆಯಲ್ಲಿ ಮಂಡಿಸಿದರು.ಅನೇಕ ಪಲಾನುಬವಿಗಳಿಗೆ ಎಂಟು ಹತ್ತು ತಿಂಗಳಿಂದ ಯಾವುದೇ ಹಣ ಬಾರದಿರುವುದನ್ನು ಸಹ ಸಭೆಯಲ್ಲಿ ಓದಿ ಹೇಳಿದರು.

RELATED ARTICLES  ಕರುನಾಡ ರಕ್ಷಣಾ ವೇದಿಕೆಯಿಂದ ರಾಜ್ಯೋತ್ಸವದ ಆಚರಣೆ 


‌ಗ್ರಾಮಸಭೆಯ ಅಧ್ಯಕ್ಷತೆಯ ವಹಿಸಿದ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕರಾದ ಕೃಷ್ಣಾನಂದ ಕೆ ಅವರು ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯ ಅನೇಕ ಉಪಯೋಗಗಳ ಬಗ್ಗೆ ಅವಕಾಶಗಳ ಬಗ್ಗೆ ತಿಳಿಸಿ ನಿಯಮದಂತೆ ಕಾಮಗಾರಿ ಮಾಡಲು ತಿಳಿಸಿದರು.ಪಂಚಾಯತ್ ಅಧ್ಯಕ್ಷರಾದ ಕೇಶವ ನಾಯ್ಕ ವಲಸೆ ಹೋಗುವುದನ್ನು ತಪ್ಪಿಸಲಿಕ್ಕಾಗಿ ಬಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರು ಸಕ್ರೀಯವಾಗಿ ತೊಡಗಿಸಿಕೊಳ್ಳಲು ಪಂಚಾಯತ್ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುದಾಗಿ ತಿಳಿಸಿದರು.

RELATED ARTICLES  ಅಂಗಾರಕ ಸಂಕಷ್ಟಿಯ ವಿಶೇಷ ಪೂಜೆ


ಪಿಡಿಓ ರಾಧಾಕೃಷ್ಣ ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ನಡಾವಳಿ ಓದಿ ಹೇಳಿದರು.
ಪಿಂಚಣಿ ಮತ್ತು ನರೇಗಾದ ನೂರಕ್ಕೂ ಹೆಚ್ಚಿನ ಪಲಾನುಭವಿಗಳು ಹಾಜರಿದ್ದರು.