ಕುಮಟಾ: ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಗಾರ ಗಲ್ಲಿಯಲ್ಲಿ ವಿಜ್ಞಾನ ಸಂಘದಿಂದ ಏರ್ಪಡಿಸಿದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ರುಚಿ ಶುಚಿ ಯಾದ  ತಿಂಡಿ ತಿನಿಸು ತಂಪಾದ ಪಾನೀಯ ತಯಾರಿಸಿ ಗಮನ ಸೆಳೆದರು.

    ಶಾಲೆಯ ಅವರಣದಲ್ಲಿ ಸುಮಾರು 20 ಆಹಾರ ಮಳಿಗೆಗಳನ್ನು ತೆರೆದು ಅಲ್ಲಿ ತಂಡತಂಡವಾಗಿ ಆಹಾರ ತಯಾರಿಕೆ ಮತ್ತು ತಮ್ಮ  ಶಿಕ್ಷಕರನ್ನು ಸೆಳೆಯಲು ನಾನಾ ಕಸರತ್ತು ನಡೆಸಿದರು ಪಾನಿಪುರಿ,  ಹಣ್ಣಿನ ಸಲಾಡ್, ಜ್ಯೂಸ್,  ಮಜ್ಜಿಗೆ, ಬಜ್ಜಿ,  ಬೋಂಡಾ,  ವಡೆ,  ಕೋಸಂಬರಿ, ಸ್ಯಾಂಡ್ವಿಚ್,  ಕೇಕ್,  ಬೇಲ್ ಪುರಿ,  ಪುಳಿಯೋಗರೆ, ಜಾಮೂನ್, ವೆಜ್ ಸಲಾಡ್ ಇನ್ನೂ ಅನೇಕ  ತಿಂಡಿ ತಿನಿಸುಗಳು ಆಹಾರ ಮೇಳದಲ್ಲಿ ಕಂಡು ಬಂತು.

    ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಬಿ.ಆರ್. ಸಿ.  ಆದ ರೇಖಾ ನಾಯ್ಕ  ಅವರು ಮಾತನಾಡಿ ಈ ಆಹಾರ ಮೇಳಕ್ಕೆ ಬಂದು ನನಗೆ ತುಂಬಾ ಸಂತೋಷವಾಯಿತು, ಇಲ್ಲಿ ಎಲ್ಲಾ ವಿವಿಧ ರೀತಿಯ ಆಹಾರವನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ, ವಿದ್ಯಾರ್ಥಿಗಳು ಆಸಕ್ತಿ ಮತ್ತು ಖುಷಿಯಿಂದ ಅವರು ಭಾಗವಹಿಸಿದ್ದಾರೆ ಹಾಗೆಯೇ ಅವರಿಗೆ ನಾವು ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ ಹಾಗೆಯೇ ನಾವು ಕೂಡ ವಿದ್ಯಾರ್ಥಿಗಳಿಗೆ ಪ್ರಶ್ನಿಸಿದಾಗ ಅದನ್ನು ತಯಾರಿಸಿದ ರೀತಿ ಅದರ ಬಗ್ಗೆ ಯಾವ ಘಟಕ ಅಂಶಗಳಿವೆ ಅದರಿಂದ ಆರೋಗ್ಯಕ್ಕೆ ಆಗುವಂತ ಲಾಭವನ್ನು ಹೇಳಿ ಅವರು ಸಮರ್ಥರಾದರು ಎಂದು ಹೇಳಿದರು.

RELATED ARTICLES  ಬಯಸಿದ ಚುನಾವಣಾ ಚಿನ್ಹೆ ಪಡೆಯುವಲ್ಲಿ ಗೆದ್ದ ನಿಧಿ ದೇಶಭಂಡಾರಿ

ಇನ್ನು ಮಂಜುನಾಥ್ ನಾಯ್ಕ ಮಾತನಾಡಿ ಈ ವರ್ಷವೂ ಕೂಡ ವಿವಿಧ ಬಗೆಯ ಕಾರ್ಯಕ್ರಮ ಮಾಡಿಕೊಳ್ಳಬೇಕೆಂಬ ಯೋಚನೆ ಮಾಡಿದಾಗ ಈಗಾಗಲೇ ಬಂದ 6 ಮತ್ತು 7ನೇ ತರಗತಿಯ ಮಕ್ಕಳಿಗೆ  ಆಹಾರ ಪಾಠದ ಕುರಿತಾಗಿ ನಮ್ಮ ಎಲ್ಲಾ ಶಿಕ್ಷಕರೊಂದಿಗೆ ಚರ್ಚಿಸಿ ನಮ್ಮ ಶಾಲೆಯಲ್ಲಿ ಆಹಾರಮೇಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಇನ್ನೊಂದು ಕಡೆ ನಮಗೆ ಒಳಕಿತ್ತು  ಚಿಕ್ಕ ಮಕ್ಕಳು ಹೇಗೆ ಆಹಾರ ತಯಾರಿ  ಮಾಡುತ್ತಾರೆ ಎಂದು ಭಾವನೆ ಇತ್ತು ಆದರೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಆಹಾರ ತಯಾರಿಕೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ ಹಾಗೆಯೇ ನಮ್ಮ ಶಾಲೆಗೆ ಸಭಾಭವನದ ಕೊರತೆ ಉಂಟಾಗಿದ್ದು ನಮಗೆ ಸಭಾಭವನದ ಅವಶ್ಯಕತೆ ಇದೆ ಆದರೂ ಕೂಡ ಎಲ್ಲರನ್ನೂ ಕರೆದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಹಂಬಲ ಕೂಡ ಇದೆ ಆದರೆ ನಮಗೆ ಅವಕಾಶ ದೊರಕುತ್ತಿಲ್ಲ  ಹಾಗೆಯೇ ಈ ವರ್ಷ   ವಿಜ್ಞಾನ ಪ್ರದರ್ಶನ ಕೂಡ ಮಾಡುತ್ತೇವೆ ಹೊರ ಸಂಚಾರಕ್ಕಾಗಿ ಗದ್ದೆಯಲ್ಲಿ ಹೋಗುವ ಕಾರ್ಯಕ್ರಮವಿದೆ ಹೀಗೆಯೇ ಹೊಸಹೊಸ ಕಾರ್ಯಕ್ರಮ ಮಾಡಬೇಕೆಂಬ ಹಂಬಲವಿದೆ ಎಂದು ಹೇಳಿದರು.

RELATED ARTICLES  ಬಡವರ ಪಾಲಿನ ಗೋಧಿ ಹುಳುಗಳ ಪಾಲಾಯ್ತೆ?

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಡಿ.ಎಂ. ಬಂಟ್,  ಸಿ.ಆರ್. ಪಿ  ಪ್ರೇಮ ರಾಯ್ಕರ್,  ನಾಗರತ್ನ ಆರ್ ಭಟ್, ಲತಾ ಎನ್.ಶೇಟ್, ಶಾಂತಾಬಾಯಿ ಹಾಗೂ ಹಲವರು ಉಪಸ್ಥಿತರಿದ್ದರು.