ಕುಮಟಾ : ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ಕುಮಟಾದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಕೊನೆಗೂ ಕೇಂದ್ರ ಭೂ ಸಾರಿಗೆ ಮಂತ್ರಾಲಯ ಸಮ್ಮತಿ ಸೂಚಿಸಿದೆ .ಈ ಬಗ್ಗೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದ್ದು ಕುಮಟಾದಲ್ಲಿ ಸುಮಾರು ಎಂಟು ಕಿಲೋಮೀಟರ್ ಕುಮಟಾದ ಹೊರವಲಯದಲ್ಲಿ ರಸ್ತೆ ನಿರ್ಮಾಣವಾಗಲಿದೆ . ಇದರೊಂದಿಗೆ ಚತುಷ್ಪಥ ಕಾಮಗಾರಿ ಪ್ರಾರಂಭವಾದ ನಾಲ್ಕು ವರ್ಷದ ನಂತರ ಕುಮಟಾದಲ್ಲಿ ಬೈಪಾಸ್ ರಸ್ತೆ ನಿರ್ಮಾಣದ ಬಗ್ಗೆ ಅಧಿಕೃತವಾಗಿ ಅಧಿಸೂಚನೆ ಬಂದಂತಾಗಿದೆ.

ಇದು ವರೆಗೂ ಬೈಪಾಸ್ ರಸ್ತೆ ಹೌದೋ ಅಲ್ಲವೋ ಎನ್ನುವ ಗೊಂದಲ ಹಾಗೂ ಇದರ ಪರ ವಿರೋಧ ಹೋರಾಟಗಳು ನಡೆಯುತ್ತಲೇ ಇದ್ದರೂ ಯಾವುದೇ ನಿಲುವು ಬಂದಿರಲಿಲ್ಲ ಆದರೆ ಇದೀಗ ಬೈಪಾಸ್ ರಸ್ತೆ ನಿರ್ಮಾಣದ ನಿಲುವು ಸಾರಿಗೆ ಮಂತ್ರಾಲಯದಿಂದ ಅಂತಿಮಗೊಂಡಿದ್ದರಿಂದ ಹೋರಾಟಕ್ಕೆ ಒಂದು ಅಂತ್ಯ ಸಿಗಬಹುದು ಎನ್ನಲಾಗಿದೆ.

RELATED ARTICLES  ಲಾರಿ ಡಿಕ್ಕಿ : ಸ್ಥಳದಲ್ಲಿಯೇ ಪ್ರಾಣಬಿಟ್ಟ ವೃದ್ಧೆ.

ಬೈಪಾಸ್ ರಸ್ತೆಗಳು ಕುಮಟಾದ ಮಣಕಿ, ಹಂದಿಗೋಣ, ಕಲ್ಬಾಗ್, ಕುಮಟಾದ ಹಳೆ ಹೆರವಟ್ಟಾ, ಹೊಸ ಹೆರವಟ್ಟಾ, ಬಗ್ಗೋಣ ಗ್ರಾಮದ ಮೇಲೆ ಹಾದು ಹೋಗಲಿದ್ದು ಈ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ .

RELATED ARTICLES  ಕಕ್ಕಳ್ಳಿ ಕನಕನಹಳ್ಳಿ  ಸಾರ್ವಕಾಲಿಕ ರಸ್ತೆಯಾಗಲು ಶ್ರೀಗಳಿಂದ ಮಂತ್ರಾಕ್ಷತೆ..

ಎರಡು ವರ್ಷಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೆದ್ದಾರಿಯ ಪಥ ಬದಲಿಸಿ ಹೊರವಲಯದಲ್ಲಿ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆದರೆ ಪರ ವಿರೋಧದ ಹೋರಾಟದ ನಡುವೆಯೂ ಅಧಿಕೃತ ತೀರ್ಮಾನ ಹೊರ ಬಂದಿರಲಿಲ್ಲ ಹೀಗಾಗಿ ಚತುಷ್ಪಥ ಕಾಮಗಾರಿ ಕುಮಟಾದ ಪಟ್ಟಣದಲ್ಲಿ ಮಾತ್ರ ಸ್ಥಗಿತಗೊಂಡಿತ್ತು .

ಇದೀಗ ಬೈಪಾಸ್ ಅನುಮತಿ ಸಿಕ್ಕಿದ್ದು ಹೋರಾಟ ಯಾವ ದಿಶೆಯಲ್ಲಿ ನಡೆಯಲಿದೆ? ಮುಂದೇನಾಗಲಿದೆ? ಎನ್ನುವುದನ್ನು ಕಾದು ನೋಡಬೇಕಾಗಿದೆ.