ಶಿರಸಿ : ತಾನು ಸಿಎಂ ಹೆಚ್​.ಡಿ ಕುಮಾರಸ್ವಾಮಿಯ ಆಪ್ತ ಹಾಗೂ ಜೆಡಿಎಸ್ ಕಾರ್ಯಕರ್ತ ಎಂದು ಹೇಳಿ ಫೇಸ್ಬುಕ್ನಲ್ಲಿ ಮಹಿಳೆಗೆ ವಂಚನೆ ಮಾಡಿದ್ದ ಶಿರಸಿ ಮೂಲದ ಕೀರ್ತಿ ಹೆಗಡೆಯನ್ನು ಮೈಸೂರಿನ ಲಷ್ಕರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

   ಕೀರ್ತಿ ಹೆಗಡೆ ಫೇಸ್ಬುಕ್ನಲ್ಲಿ ಶಿರಸಿ ಮೂಲದ ಮಹಿಳೆಯನ್ನ ಪರಿಚಯ ಮಾಡಿಕೊಂಡಿದ್ದ. ಕಳೆದ 15 ದಿನಗಳಿಂದ ಆಕೆಯೊಂದಿಗೆ ಫೋನ್ ಸಂಪರ್ಕದಲ್ಲಿದ್ದ. ಜೂನ್ 18ರಂದು ತಾನು ಮೈಸೂರಿಗೆ ಬರುತ್ತೇನೆ ಎಂದು ಮಹಿಳೆಯನ್ನು ಕರೆಸಿಕೊಂಡಿದ್ದ. ಖಾಸಗಿ ಹೋಟೆಲ್ಗೆ ಜೆಡಿಎಸ್ ಮಹಿಳಾ ಕಾರ್ಯಕರ್ತರು ಬರುತ್ತಾರೆ. ನೀನು ಬಂದರೆ ಅವರನ್ನು ಪರಿಚಯ ಮಾಡಿಕೊಡ್ತೀನಿ ಅಂತ ಹೇಳಿದ್ದ ಎನ್ನಲಾಗಿದೆ.

RELATED ARTICLES  ತಮ್ಮ ನೆಲದ ಹೋರಾಟಕ್ಕೆ ಒಗ್ಗಟ್ಟಾದರೆ ಗೆಲುವು ಸಾಧಿಸಬಹುದು : ರಾಜು ತಾಂಡೇಲ್

ಬಳಿಕ ಆರೋಪಿ ಮಾತು ಕೇಳಿ ಮೈಸೂರಿನ ಖಾಸಗಿ ಹೋಟೆಲ್ಗೆ ಮಹಿಳೆ ಬಂದಿದ್ದರು. ಹೊಟೇಲ್ಗೆ ಬಂದಾಗ ರೂಂನಲ್ಲಿ ಯಾವೊಬ್ಬ ಮಹಿಳೆಯೂ ಇರಲ್ಲಿಲ್ಲ. ಮಹಿಳೆಯರು ಎಲ್ಲಿ ಎಂದು ಕೇಳಿದಾಗ ಅವರು ಹೊರಗೆ ಹೋಗಿದ್ದಾರೆ, ಬರುತ್ತಾರೆ ಎಂದು ಹೇಳಿದ್ದ. ಸ್ವಲ್ಪ ಸಮಯದ ನಂತರ ಆರೋಪಿ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಿ, ನೀನು ಹೋಟೆಲ್ಗೆ ಬಂದಿರುವ ವಿಷಯ ನಿನ್ನ ಗಂಡನಿಗೆ ತಿಳಿಸುತ್ತೇನೆ. ಈ ವಿಷಯ ನಿನ್ನ ಪತಿಗೆ ಹೇಳಬಾರದು ಅಂದ್ರೆ ಚಿನ್ನದ ಮಾಂಗಲ್ಯ ಸರ, ಉಂಗುರ ಕೊಡು ಎಂದು ಒತ್ತಾಯಿಸಿದ್ದ. ಆರೋಪಿ ಕೀರ್ತಿ ಹೆಗಡೆ ಬ್ಲ್ಯಾಕ್ ಮೇಲ್ಗೆ ಭಯಬಿದ್ದ ಮಹಿಳೆ ಚಿನ್ನದ ಆಭರಣಗಳನ್ನ ನೀಡಿದ್ದರು. ಅಲ್ಲದೆ ಈ ವಿಚಾರ ಎಲ್ಲೂ ಬಾಯಿಬಿಡದಂತೆ ಆರೋಪಿ ಪ್ರಾಣ ಬೆದರಿಕೆ ಕೂಡಾ ಹಾಕಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.

RELATED ARTICLES  ಯುವ ಸ್ಪಂದನ ಅರಿವು ಕಾರ್ಯಕ್ರಮ.

ಜೂನ್ 19ರಂದು ಮೈಸೂರು ಲಷ್ಕರ್ ಪೊಲೀಸ್ ಠಾಣೆಗೆ ತೆರಳಿ ಮಹಿಳೆ ಈ ಬಗ್ಗೆ ದೂರು ನೀಡಿದ್ದರು. ದೂರು ನೀಡಿದ 24 ಗಂಟೆಯಲ್ಲಿಯೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್​​ 364ರಡಿ ಕೇಸ್ ದಾಖಲಾಗಿದ್ದು, ಬಂಧಿತ ಆರೋಪಿಯಿಂದ ₹1 ಲಕ್ಷ ₹ 30 ಸಾವಿರ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.