ಅಂಕೋಲಾ : ಗೋವಾದಿಂದ ಮುಂಡಗೋಡ ಕಡೆಗೆ ಚಲಿಸುತ್ತಿದ್ದ ಕಾರು ಅಂಕೋಲಾ ತಾಲೂಕಿ ಬಾಳೆಗುಳಿ ಕ್ರಾಸ್ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾದ ಘಟನೆ ನಡೆದೆ.
ಕಾರ ಪಲ್ಟಿಯಾಗಿರುವ ಪರಿಣಾಮ ಕಾರನಲ್ಲಿದ್ದ ನಾಲ್ಬರಿಗೆ ಗಂಭೀರ ಗಾಯಗೊಂಡಿದ್ದು. ಎಲ್ಲರೂ ಕಾರ ಒಳಗೆ ಸಿಲುಕಿ ಹಾಕಿಕೊಂಡಿದ್ದರು. ಸ್ಥಳೀಯರು ಹಾಗೂ ಸ್ಕೋಡ್ ವೈಸ್ ಸಿಬ್ಬಂದಿಗಳು ಅಪಘಾತವಾಗಿದ್ದ ಕಾರನಲ್ಲಿದ್ದವರನ್ನ ಹರ ಸಾಹಸ ಪಟ್ಟು ಹೊರ ತೆಗೆದರು ಎನ್ನಲಾಗಿದೆ. ಇವರನ್ನು ಅಂಕೋಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.