ಮೇಷ ರಾಶಿ
ಬೆಳಗಿನ ಸಮಯ ಹೊಸ ಕೆಲಸ ಆರಂಭಿಸಲು ಶುಭವಾಗಿದೆ. ಇಂದು ಸರ್ಕಾರದಿಂದ ಪ್ರಯೋಜನ ದೊರೆಯುವ ಸಂಭವ ಇದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ನಿಮ್ಮ ಅಲೋಚನೆಗಳೂ ಬದಲಾಗಲಿವೆ.
ಅದೃಷ್ಟ ಸಂಖ್ಯೆ: 2
ವೃಷಭ ರಾಶಿ
ಇವತ್ತಿನ ದಿನ ನಿಮ್ಮ ಪಾಲಿಗೆ ಮಧ್ಯಮ ಫಲದಾಯಕವಾಗಿದೆ. ಇವತ್ತು ಸ್ನೇಹಿತರನ್ನು ಭೇಟಿಯಾಗಿ ಖುಷಿಯಾಗಿ ಕಾಲಕಳೆಯಲಿದ್ದೀರಿ. ಇವತ್ತು ಹೆಚ್ಚು ಸಮಯವನ್ನು ಸಂಪತ್ತಿನ ವಿನಿಯೋಗಕ್ಕೆ ಸಂಬಂಧಿಸಿದ ಯೋಜನೆ ರೂಪಿಸುವುದರಲ್ಲಿ ಕಳೆಯಲಿದ್ದೀರಿ.
ಅದೃಷ್ಟ ಸಂಖ್ಯೆ: 1
ಮಿಥುನ ರಾಶಿ
ಆರ್ಥಿಕ ವಿಷಯದಲ್ಲಿ ನಿಮಗೆ ಇವತ್ತಿನ ದಿನ ಲಾಭದಾಯಕವಾಗಿದೆ. ಮಿತ್ರರು ಮತ್ತು ಸಂಬಂಧಿಕರ ಜೊತೆಗೆ ಸಂತೋಷವಾಗಿ ಸಮಯ ಕಳೆಯುವ ಸಾಧ್ಯತೆ ಇದೆ. ಉತ್ತಮ ಭೋಜನ ಹಾಗೂ ಹೊಸ ಬಟ್ಟೆ ಕೂಡ ದೊರೆಯಲಿದೆ.
ಅದೃಷ್ಟ ಸಂಖ್ಯೆ: 9
ಕರ್ಕ ರಾಶಿ
ಇವತ್ತು ಹೆಚ್ಚು ಹಣ ಖರ್ಚಾಗಲಿದೆ. ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳೋದ್ರಿಂದ ಆತಂಕ ಮತ್ತು ಚಿಂತೆ ಹೆಚ್ಚಲಿದೆ. ಮಾತು ಮತ್ತು ವರ್ತನೆಯ ಮೇಲೆ ಸಂಯಮ ಇಟ್ಟುಕೊಳ್ಳಿ. ಮನಸ್ಸು ಗೊಂದಲಕ್ಕೊಳಗಾಗದಂತೆ ಎಚ್ಚರ ವಹಿಸಿ.
ಅದೃಷ್ಟ ಸಂಖ್ಯೆ: 1
ಸಿಂಹ ರಾಶಿ
ಬೆಳಗಿನ ಸಮಯ ನಿಮ್ಮ ಪಾಲಿಗೆ ಉತ್ತಮವಾಗಿದೆ. ಸಾಮಾಜಿಕ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಆನಂದದಾಯಕ ಹಾಗೂ ಲಾಭದ ಸುದ್ದಿ ನಿಮಗೆ ಸಿಗಲಿದೆ. ಮಿತ್ರರಿಂದ್ಲೂ ಶುಭ ಸಮಾಚಾರ ಸಿಗುವ ಸಾಧ್ಯತೆ ಇದೆ. ಧನಲಾಭ ಹಾಗೂ ಆದಾಯ ವೃದ್ಧಿಯಾಗಲಿದೆ.
ಅದೃಷ್ಟ ಸಂಖ್ಯೆ: 6
ಕನ್ಯಾ ರಾಶಿ
ಇವತ್ತಿನ ದಿನ ನಿಮಗೆ ಅನುಕೂಲಕರವಾಗಿದೆ. ಕುಟುಂಬದವರೊಂದಿಗೆ ಪ್ರೇಮಮಯ ಸಂಬಂಧ ಹೊಂದಲಿದ್ದೀರಿ. ಸ್ನೇಹಿತರು ಸಂಬಂಧಿಕರಿಂದ ಉಡುಗೊರೆ ದೊರೆಯಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ. ಇದರಿಂದ ನೀವು ಕೂಡ ಪ್ರಸನ್ನವಾಗಿರುತ್ತೀರಿ.
ಅದೃಷ್ಟ ಸಂಖ್ಯೆ: 5
ತುಲಾ ರಾಶಿ
ಉನ್ನತ ಅಧಿಕಾರಿಗಳ ಕೃಪಾದೃಷ್ಟಿಯಿಂದ ಲಾಭವಾಗಲಿದೆ. ಪದೋನ್ನತಿ ಸಿಗುವ ಸಾಧ್ಯತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಮತ್ತು ಸನ್ಮಾನ ದೊರೆಯಲಿದೆ. ಆರೋಗ್ಯವೂ ಉತ್ತಮವಾಗಿರಲಿದೆ.
ಅದೃಷ್ಟ ಸಂಖ್ಯೆ: 7
ವೃಶ್ಚಿಕ ರಾಶಿ
ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಂಡರೆ ಪರಿಸ್ಥಿತಿ ಉತ್ತಮವಾಗಿರಲಿದೆ. ಉದರ ಸಂಬಂಧಿ ತೊಂದರೆ ಕಾಣಿಸಿಕೊಳ್ಳಲಿದೆ. ವ್ಯಾಪಾರ ಕ್ಷೇತ್ರದಲ್ಲೂ ಆಪತ್ತು ಎದುರಾಗಬಹುದು. ಉನ್ನತ ಅಧಿಕಾರಿಗಳ ಬಗ್ಗೆ ಎಚ್ಚರಿಕೆಯಿಂದಿರಿ.
ಅದೃಷ್ಟ ಸಂಖ್ಯೆ: 3
ಧನು ರಾಶಿ
ನಿಮ್ಮ ಸುಖ ಮತ್ತು ದುಃಖದಲ್ಲಿ ಸ್ನೇಹಿತರು ಭಾಗಿಯಾಗಲಿದ್ದಾರೆ. ಬೆಳಗ್ಗೆ ಆನಂದ ಹಾಗೂ ಮನರಂಜನೆಯ ವಾತಾವರಣವಿರಲಿದೆ. ಕುಟುಂಬದಲ್ಲೂ ನೆಮ್ಮದಿ ಮೂಡಲಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕೂಡ ನಿಮ್ಮದಾಗಲಿದೆ.
ಅದೃಷ್ಟ ಸಂಖ್ಯೆ: 4
ಮಕರ ರಾಶಿ
ಮಾತುಕತೆಯ ಸಮಯದಲ್ಲಿ ಕೋಪದ ಮೇಲೆ ಹಿಡಿತ ಇಟ್ಟುಕೊಳ್ಳಿ. ಮನೆಯಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿಯ ವಾತಾವರಣ ಇರಲಿದೆ. ಮಾನ-ಸಮ್ಮಾನ ಕೂಡ ದೊರೆಯಲಿದೆ. ಆರ್ಥಿಕ ಲಾಭವೂ ಆಗಲಿದೆ.
ಅದೃಷ್ಟ ಸಂಖ್ಯೆ: 2
ಕುಂಭ ರಾಶಿ
ಕಲೆಯ ಬಗ್ಗೆ ವಿಶೇಷ ಅಭಿರುಚಿ ಮೂಡಲಿದೆ. ಖರ್ಚು ಕೂಡ ಹೆಚ್ಚಾಗಲಿದೆ. ಮಕ್ಕಳ ಬಗ್ಗೆ ಚಿಂತೆ ಕಾಡಲಿದೆ. ಮಧ್ಯಾಹ್ನದ ನಂತರ ಮನೆಯಲ್ಲಿ ಶಾಂತಿ ನೆಲೆಸಲಿದೆ. ಅಪೂರ್ಣ ಕಾರ್ಯವನ್ನು ಪೂರ್ಣಗೊಳಿಸಲಿದ್ದೀರಿ. ಆರೋಗ್ಯವೂ ಸುಧಾರಿಸಲಿದೆ.
ಅದೃಷ್ಟ ಸಂಖ್ಯೆ: 5
ಮೀನ ರಾಶಿ
ಇವತ್ತು ಹೆಚ್ಚು ಭಾವುಕರಾಗಬೇಡಿ. ಅತಿಯಾದ ಕಲ್ಪನೆಗಳಿಂದಾಗಿ ಮನಸ್ಸು ಜಡವಾಗಲಿದೆ. ಜಮೀನು, ಮನೆಗೆ ಸಂಬಂಧಿಸಿದ ವಿಷಯದಲ್ಲಿ ಹೆಚ್ಚು ಖರ್ಚು ಮಾಡಬೇಡಿ.
ಅದೃಷ್ಟ ಸಂಖ್ಯೆ: 1