ಕುಮಟಾ: ಶ್ರೀಯುತ ಗಣಪತಿ ಕೆ. ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹೊನ್ನಾವರರವರ ಮಾರ್ಗದರ್ಶನದಂತೆ, ಶ್ರೀ ಪ್ರವೀಣಕುಮಾರ ಬಸ್ರೂರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕುಮಟಾರವರ ನೇತೃತ್ವದಲ್ಲಿ ಹಾಗೂ ಶಾಲಾ ಮಕ್ಕಳ ಸಹಭಾಗಿತ್ವದೊಂದಿಗೆ ವನಮಹೋತ್ಸವ ಹಾಗೂ ಬೀಜದುಂಡೆ ಅಭಿಯಾನವು ಕತಗಾಲ ವಲಯದ ಹಲವು ಶಾಲೆಗಳಲ್ಲಿ ನಡೆಯಿತು.

RELATED ARTICLES  ಉತ್ತರಕನ್ನಡದಲ್ಲಿ ಚುನಾವಣಾ ಕಣದಿಂದ ಹಿಂದೆ‌ ಸರಿದವರಾರು? ಉಳಿದವರಾರು ಗೊತ್ತಾ? ಇಲ್ಲಿದೆ ಮಾಹಿತಿ.

ಶ್ರೀ ಪ್ರಭಾಕರ ಕಾಗಿನೆಲ್ಲೆ ವಲಯ ಅರಣ್ಯಾಧಿಕಾರಿಗಳು ಪ್ರಕೃತಿಯ ಕೊಡುಗೆಯ ಬಗ್ಗೆ ವಿವರಿಸಿದರು. ಶ್ರೀ ಡಿ.ಬಿ. ಹರಿಕಾಂತ ಸುಗಮಗಾರರು ಹಿಂದಿನ ಹಾಗೂ ಇಂದಿನ ಪರಿಸ್ಥಿತಿಗಳ ಬಗ್ಗೆ ಮತ್ತು ಪರಿಸರದ ಸಮತೋಲನದ ಬಗ್ಗೆ ಮಗುವಿಗೊಂದು ಮರ, ಶಾಲೆಗೊಂದು ವನದ ಕುರಿತು ವಿವರಿಸಿದರು. ಶ್ರೀ ಬಿ.ಎನ್. ಬಂಕಾಪುರ ಉಪ ವಲಯ ಅರಣ್ಯಾಧಿಕಾರಿಗಳು ಕತಗಾಲರವರು ಕಾರ್ಯಕ್ರಮವನ್ನು ಸಂಘಟಿಸಿದರು.

RELATED ARTICLES  ಉತ್ತರ ಕನ್ನಡದ ಹೆಚ್ಚು ತಾಲೂಕಿನಲ್ಲಿ ಇಂದು 0 ಕೊರೋನಾ ಕೇಸ್