ಕುಮಟಾ : ಯುವಾ ಬ್ರಿಗೇಡ್ ಕುಮಟಾವತಿಯಿಂದ ಎಲ್ಲೆಡೆ ಕಣ ಕಣದಲ್ಲಿ ಶಿವ ಎನ್ನುವ ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದು, ಹಳೆಯ ಹಾಗೂ ಹಾಳಾದ ದೇವರ ಫೋಟೋಗಳನ್ನು ಆಯ್ದು ಅವುಗಳಿಗೆ ಮುಕ್ತಿ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಅದರಂತೆ ಕುಮಟಾ ಯುವ ಬ್ರಿಗೇಡ್ ವತಿಯಿಂದ ಅಳ್ವೇಕೊಡಿಯಲ್ಲಿ ದೇವರ ಫೋಟೋಗಳನ್ನು ಸಂಗ್ರಹಿಸಿ ಅದನ್ನು ಅಲ್ಲಿಂದ ವಿಲೇವಾರಿ ಮಾಡಿ ಹೊಳೆಗದ್ದೆಯಲ್ಲಿ ತೆಗೆದುಕೊಂಡ ಹೋಗಿ ಅಲ್ಲಿ ಪ್ರೇಮ್ ಮತ್ತು ಗ್ಲಾಸ್ ವಿಂಗಡಿಸಿ ನೆಲದಲ್ಲಿ ಹಾಕಿ ಅದರ ಮೇಲೆ ನೆಲ್ಲಿಕಾಯಿ ಗಿಡವನ್ನು ನೆಟ್ಟು ಕಣಕಣದಲ್ಲು ಶಿವಾ ಎನ್ನುವ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯ ಎಲ್ಲೆಡೆ ಮೆಚ್ಚುಗೆ ಗಳಿಸಿದ್ದು ಕುಮಟಾ ಯುವ ಬ್ರಿಗೇಡ್ ನ ಈ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.