ಕಾರವಾರ: ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಚಾರವಾಗಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಯುವಕರು ಭಾನುವಾರ ಮನವಿ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ (ಐಬಿ) ಸಂಸದರನ್ನು ಭೇಟಿಯಾದ ಅವರು, ಜಿಲ್ಲೆಯಲ್ಲಿ ಆಸ್ಪತ್ರೆ ಅಗತ್ಯತೆಯ ಬಗ್ಗೆ ಅವರಿಗೆ ಮನವರಿಕೆ ಮಾಡಿದರು. ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೂ ಮುನ್ನ, ಟ್ರಾಮಾ ಸೆಂಟರ್, ಸುಸಜ್ಜಿತ ಆಂಬುಲೆನ್ಸ್ ಅನ್ನೂ ಜಿಲ್ಲೆಗೆ ಒದಗಿಸುವಂತೆ ಅವರು ಮನವಿ ಮಾಡಿದರು.

RELATED ARTICLES  ಅಬ್ಬಾ..!! ಕಾರವಾರದ ಮನೆಯೊಂದರಲ್ಲೇ ಇತ್ತಂತೆ 2440 ಲೀಟರ್ ಗೋವಾ ಮದ್ಯ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದರು, ಇದು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಿಂದ ಆಗಬೇಕಿದೆ. ಅವರು ಪ್ರಸ್ತಾವನೆ ಕಳುಹಿಸಿದಲ್ಲಿ ಕೇಂದ್ರದಿಂದ ಅಗತ್ಯ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.

RELATED ARTICLES  ಸಮುದಾಯಭವನದ ಜಾಗ ಖರೀದಿಗೆ 5 ಲಕ್ಷ ರೂ. ನೀಡಿದ ಶಾಸಕ ದಿನಕರ ಶೆಟ್ಟಿ.

ಈ ವೇಳೆ ರಾಘವ ನಾಯ್ಕ ಸ್ಕಂದ, ಮಂಜು ದೀವಗಿ, ಸಿದ್ದಾರ್ಥ ನಾಯಕ, ರಾಘವೇಂದ್ರ ಪಟಗಾರ ಕೊಡಕಣಿ,ರಾಮದಾಸ ಕುಮಟಾ,ಮಾಹಾದೇವ ಪಟಗಾರ ಕೋಡ್ಕಣಿ ಇದ್ದರು.