ಲಾಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್‍ನ “ದೃಷ್ಠಿ ಮೊದಲು” ಉದ್ದೇಶದ ಕಾರ್ಯವನ್ನು ಸಾಕಾರಗೊಳಿಸಲು ಸರಕಾರದ ಅಂಧತ್ವ ನಿವಾರಣಾ ಸಂಸ್ಥೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾಗೂ ಲಾಯನ್ಸ್ ಕ್ಲಬ್ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿ ತಿಂಗಳೂ ನಿಗದಿತ ದಿನಗಳಂದು ಕುಮಟಾ, ಅಂಕೋಲಾ , ಗೋಕರ್ಣ , ಹೊನ್ನಾವರ , ಭಟ್ಕಳಗಳಲ್ಲಿ ಉಚಿತ ಕಣ್ಣುಪೊರೆ ತಪಾಸಣಾ ಶಿಬಿರಗಳು ಹಾಗೂ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿದ್ದು ಅವಶ್ಯಕತೆಯುಳ್ಳ ಅರ್ಹರು ಈ ಕಾರ್ಯದ ಸದುಪಯೋಗ ಪಡೆಯುವಂತೆ ಲಾಯನ್ಸ್ ಹ್ಯುಮೆನಿಟೇರಿಯನ್ ಸರ್ವಿಸ್ ಟ್ರಸ್ಟ್ ನ ಅಧ್ಯಕ್ಷರಾದ ದೇವಿದಾಸ ಡಿ.ಶೇಟ್ ಕರೆ ನೀಡಿದರು.

ಅವರು ಹಿರೇಗುತ್ತಿ , ಕುಮಟಾ ,ಗೋಕರ್ಣ , ಅಂಕೋಲಾದಲ್ಲಿ ಜರುಗಿದ ಕಣ್ಣು ತಪಾಸಣಾ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಂಡು ಉಚಿತವಾಗಿ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಿಕೊಂಡ ರೋಗಿಗಳು ಇಂದು ಲಾಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು.

RELATED ARTICLES  ಅನಂತಕುಮಾರ ಹೆಗಡೆ ಪರಮಾಪ್ತ ಕೃಷ್ಣ ಎಸಳೆ ಪಕ್ಷೇತರ ಸ್ಪರ್ಧೆ..?


ನಮ್ಮ ಟ್ರಸ್ಟಿನ ಲಾಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯು ಪ್ರಾರಂಭವಾದ ಕಳೆದ 13 ವರ್ಷಗಳಿಂದಲೂ ಪ್ರತಿ ತಿಂಗಳೂ ಉಚಿತ ಕಣ್ಣಿನ ಪೊರೆ (ಮೋತಿಬಿಂದು) ತಪಾಸಣಾ ಶಿಬಿರಗಳನ್ನು ಕೈಕೊಳ್ಳುತ್ತಾ ಬಂದಿದ್ದು ಮಾರ್ಚ 2019 ರವರೆಗೆ ನಡೆದ 418 ಶಿಬಿರಗಳಲ್ಲಿ ಅಂತೂ 5994 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿ ಅವರು ದೃಷ್ಠಿ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ ಎಂದರು.


ಆಸ್ಪತ್ರೆಯು ಸ್ವಂತದ್ದಾದ ವಾಹನ ಹೊಂದಿದ್ದು ನುರಿತ ವೈದ್ಯಕೀಯ ತಂಡವು ತಪಾಸಣಾ ಶಿಬಿರಕ್ಕೆ ಹೋಗಿ ಕಣ್ಣಿನ ಪೊರೆ ಇರುವ ಜನರನ್ನು ಗುರುತಿಸಿ ಅವರನ್ನು ಆಸ್ಪತ್ರೆಗೆ ಕರೆತಂದು ಮಾರನೇ ದಿನ ಕುಮಟಾದ ಲಾಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಅದರ ಮರುದಿನ ಕರೆದುಕೊಂಡು ಬಂದ ಸ್ಥಳಕ್ಕೆ ಬಿಟ್ಟು ಬರಲಾಗುತ್ತದೆ. ಈ ರೀತಿ ಕ್ಯಾಂಪನಲ್ಲಿನ ತಪಾಸಣೆ , ಆಸ್ಪತ್ರೆಯಲ್ಲಿನ ಶಸ್ತ್ರಚಿಕಿತ್ಸೆ , ವಾಸ್ತವ್ಯ , ಔಷಧ , ಊಟೋಪಚಾರ , ನಂತರ ನೀಡುವ ಕನ್ನಡಕ ಎಲ್ಲವೂ ಸಂಪೂರ್ಣ ಉಚಿತವಾಗಿದ್ದು , ಅವಶ್ಯವುಳ್ಳವರು ಆಸ್ಪತ್ರೆಯ ಸ್ಥಿರ ದೂರವಾಣಿ ಸಂಖ್ಯೆ 08386-224480 ನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಲು ವಿನಂತಿಸಿದರು.

RELATED ARTICLES  ರಸ್ತೆಯ ಪಕ್ಕಕ್ಕೆ ಉರುಳಿದ ಟ್ಯಾಂಕರ್ : ಸುತ್ತಲ ಜನರಲ್ಲಿ ಆತಂಕ


ಮಾಹಿತಿ ನೀಡುವ ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿಗಳು , ಟ್ರಸ್ಟ್‍ನ ಖಜಾಂಚಿ ಹೆಚ್. ಎನ್ .ನಾಯ್ಕ , ಸೆಕ್ರೆಟರಿ ಪ್ರೊ. ರೇವತಿ ರಾವ್ , ಲಾಯನ್ಸ್ ಕ್ಲಬ್‍ನ ಪ್ರೆಸಿಡೆಂಟ್ ಡಾ.ಪ್ರಕಾಶ ಪಂಡಿತ್ , ವೈದ್ಯಾಧಿಕಾರಿ ಡಾ. ನವೀನಕುಮಾರ ಬೆಳವಡಿ , ಆಡಳಿತಾಧಿಕಾರಿ ಜಯದೇವ ಬಳಗಂಡಿ ಉಪಸ್ಥಿತರಿದ್ದರು.