ಹೊನ್ನಾವರ : ಆಪರೇಶನ್ ಗಾಗಿ ಮನೆಯವರು ಹೊರ ಹೋದ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು ತಮ್ಮ ಕರಾಮತ್ತು ತೋರಿದ್ದಾರೆ.

ತಾಲೂಕಿನ ಹೆಬ್ಬಾರ್ನಕೆರೆಯ ಬಾಲಚಂದ್ರ ಗಣಪತಿ ಹೆಗಡೆಯವರ ಮನೆಯಲ್ಲಿ ಕಳ್ಳತನ ನಡೆದಿದೆ. ಬಾಲಚಂದ್ರ ಹೆಗಡೆಯವರ ಪತ್ನಿ ಚಂದ್ರಕಲಾ ಶಿಕ್ಷಕಿಯಾಗಿದ್ದು ಅನಾರೊಗ್ಯದ ಕಾರಣ ಒಪರೇಶನ್ ಗಾಗಿ ಮಣಿಪಾಲ ಆಸ್ಪತ್ರೆಗೆ ಪತಿ ಬಾಲ ಚಂದ್ರ ಹೆಗಡೆಯವರ ಜೊತೆ ತೆರಳಿದ್ದರು. ಹುಡುಗಿಯರಾದ ಅಶ್ವಿನಿ ಮತ್ತು ದಿವ್ಯಾ ಅಜ್ಜಿ ಮನೆಯಲ್ಲಿ ಉಳಿದಿದ್ದರು. ಈ ಸಮಯವನ್ನೇ ಕಾದ ಕಳ್ಳರು ನಗ ನಾಣ್ಯ ಎಗರಿಸಿ ಪರಾರಿ ಆಗಿದ್ದಾರೆ.

RELATED ARTICLES  ಕಾರು ಮತ್ತು ಬೈಕ್ ನಡುವೆ ಅಪಘಾತ : ಓರ್ವನ ಸಾವು.

ಕಳ್ಳರು ದೇವರ ಕೋಣೆಯ ಕಿಡಕಿ ಮುರಿದು, ಒಳಹೊಕ್ಕು ಗೋದ್ರೆಜ ಕಪಾಟಿನ ಬೀಗ ಮುರಿದು ಬಂಗಾರ ದೋಚಿದ್ದಾರೆ. ಪ್ರಕರಣ ಹೊನ್ನಾವರ ಪೊಲೀಸ ಠಾಣೆಯಲ್ಲಿ ದಾಖಲಾಗಿದ್ದು ಕಾರವಾರದಿಂದ ಬೆರಳಚ್ಚು ತಜ್ಞರು, ಶ್ವಾನ ದಳದವರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.‌

RELATED ARTICLES  ಕಾರವಾರದಲ್ಲಿ ಸ್ಥಾಪನೆಯಾಯ್ತು IMA- branch