ಮೇಷ ರಾಶಿ

ರಹಸ್ಯ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚಲಿದೆ. ನಿಗೂಢ ವಿದ್ಯೆಯೆಡೆಗೆ ಆಕರ್ಷಿತರಾಗುತ್ತೀರಿ. ಪ್ರವಾಸವನ್ನು ಮುಂದೂಡಿ, ಯಾಕಂದ್ರೆ ವಿಘ್ನಗಳು ಎದುರಾಗುವ ಸಾಧ್ಯತೆ ಇದೆ. ಯಾವುದೇ ಹೊಸ ಕಾರ್ಯವನ್ನು ಆರಂಭಿಸಬೇಡಿ.

ಅದೃಷ್ಟ ಸಂಖ್ಯೆ : 6

ವೃಷಭ ರಾಶಿ

ಇವತ್ತು ನಿಮಗೆ ಶುಭ ದಿನ. ಶಾರೀರಿಕವಾಗಿ ಆರೋಗ್ಯವಾಗಿರುತ್ತೀರಿ. ಮನಸ್ಸು ಪ್ರಸನ್ನವಾಗಿರಲಿದೆ. ಕುಟುಂಬಸ್ಥರು ಮತ್ತು ಆತ್ಮೀಯರ ಜೊತೆಗೆ ಹೆಚ್ಚು ಸಮಯ ಕಳೆಯಲಿದ್ದೀರಿ.

ಅದೃಷ್ಟ ಸಂಖ್ಯೆ : 2

ಮಿಥುನ ರಾಶಿ

ಇವತ್ತು ನೀವು ಕೊಂಚ ಜಾಗರೂಕತೆಯಿಂದ, ಸಮಾಧಾನದಿಂದ ಇರುವುದು ಒಳಿತು. ಶಾರೀರಿಕ ಮತ್ತು ಮಾನಸಿಕ ಸ್ವಾಸ್ತ್ಯ ಹದಗೆಡುವ ಸಾಧ್ಯತೆ ಇದೆ. ಹೊಸ ಕಾರ್ಯವನ್ನು ಆರಂಭಿಸಲು ಇಂದು ಸಮಯ ಸೂಕ್ತವಾಗಿಲ್ಲ.

ಅದೃಷ್ಟ ಸಂಖ್ಯೆ : 8

ಕರ್ಕ ರಾಶಿ

ಶಾಂತವಾಗಿ ದಿನ ಕಳೆಯಿರಿ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಆತಂಕಗೊಳ್ಳಲಿದ್ದೀರಿ. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಆತ್ಮೀಯರೊಂದಿಗೆ ವಾದ- ವಿವಾದದಿಂದ ಭಿನ್ನಾಭಿಪ್ರಾಯ ಉಂಟಾಗುತ್ತದೆ.

ಅದೃಷ್ಟ ಸಂಖ್ಯೆ : 3

ಸಿಂಹ ರಾಶಿ

RELATED ARTICLES  ಯಾಣದಲ್ಲಿ ಶಿವರಾತ್ರಿ ವಿಶೇಷ ಪೂಜಾ ಕೈಂಕರ್ಯಗಳ ಅದ್ಭುತ ಡ್ರೋನ್ ವಿಡಿಯೋ!!!

ಮನಸ್ಸು ವ್ಯಗ್ರವಾಗಿರುತ್ತದೆ. ನಕಾರಾತ್ಮಕ ವಿಷಯಗಳು ನಿಮ್ಮನ್ನು ಕಾಡುತ್ತವೆ. ತಾಯಿಯ ಆರೋಗ್ಯ ಹದಗೆಡಬಹುದು. ಅಧಿಕ ಸಂವೇದನಾಶೀಲತೆಯ ಅನುಭವವಾಗಲಿದೆ. ಸಮಯಕ್ಕೆ ಸರಿಯಾಗಿ ಭೋಜನ ದೊರೆಯುವುದಿಲ್ಲ.

ಅದೃಷ್ಟ ಸಂಖ್ಯೆ : 9

ಕನ್ಯಾ ರಾಶಿ

ಸರಿಯಾಗಿ ವಿಚಾರ ವಿಮರ್ಷೆ ಮಾಡದೆ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳಬೇಡಿ. ಸ್ನೇಹಿತರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಿ. ಭಾವನಾತ್ಮಕ ಸಂಬಂಧಗಳ ಬಗ್ಗೆ ನಿಮ್ಮ ಮನಸ್ಸು ಮೃದುವಾಗಲಿದೆ.

ಅದೃಷ್ಟ ಸಂಖ್ಯೆ : 5

ತುಲಾ ರಾಶಿ

ನಿಮ್ಮ ಮನಸ್ಸು ಗೊಂದಲಮಯವಾಗಿರುತ್ತದೆ. ಸೂಕ್ತ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಹೊಸ ಕಾರ್ಯ ಆರಂಭಿಸುವುದು ನಿಮಗೆ ಹಿತಕರವಲ್ಲ. ಬಾಂಧವ್ಯಗಳ ಬಗ್ಗೆ ಔಪಚಾರಿಕತೆ ಇಟ್ಟುಕೊಳ್ಳಿ.

ಅದೃಷ್ಟ ಸಂಖ್ಯೆ : 1

ವೃಶ್ಚಿಕ ರಾಶಿ

ಮಿತ್ರರು, ಆತ್ಮೀಯರಿಂದ ಉಪಹಾರ ದೊರೆಯಲಿದೆ. ಪ್ರಿಯ ವ್ಯಕ್ತಿಗಳೊಂದಿಗೆ ಭೇಟಿ ಸಫಲವಾಗುತ್ತದೆ. ಶುಭ ಸಮಾಚಾರ ದೊರೆಯಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಸುಖ ಶಾಂತಿ ದೊರೆಯಲಿದೆ.

ಅದೃಷ್ಟ ಸಂಖ್ಯೆ : 4

ಧನು ರಾಶಿ

RELATED ARTICLES  ಫೆಬ್ರವರಿ 6ರೊಳಗೆ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಕಡ್ಡಾಯ: ಕೇಂದ್ರ ಸರ್ಕಾರ

ಆರೋಗ್ಯ ಹದಗೆಡಬಹುದು. ಮಾತು ಮತ್ತು ವ್ಯವಹಾರದಲ್ಲಿ ಸಂಯಮವಿರಲಿ. ದುರ್ಘಟನೆಗಳ ಬಗ್ಗೆ ಎಚ್ಚರಿಕೆಯಿಂದಿರಿ. ವ್ಯರ್ಥ ಕೆಲಸಗಳಿಂದ ಶಾಂತಿ ಭಂಗವಾಗಬಹುದು. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಾಗರೂಕರಾಗಿರಿ.

ಅದೃಷ್ಟ ಸಂಖ್ಯೆ : 2

ಮಕರ ರಾಶಿ

ಅವಿವಾಹಿತರಿಗೆ ವಿವಾಹದ ಪ್ರಯತ್ನಗಳು ಇಂದು ಸಫಲವಾಗುವುದಿಲ್ಲ. ಶುಭ ಕಾರ್ಯಗಳನ್ನು ಆಯೋಜಿಸಲಿದ್ದೀರಿ. ಸ್ತ್ರೀಯರು ಮತ್ತು ಮಕ್ಕಳ ಸಹಕಾರ ಸಿಗಲಿದೆ. ಯಾವುದೇ ವಸ್ತು ಖರೀದಿಗೆ ಇಂದು ಶುಭ ದಿನ. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ.

ಅದೃಷ್ಟ ಸಂಖ್ಯೆ : 8

ಕುಂಭ ರಾಶಿ

ಸಮಾಜದಲ್ಲಿ ಗೌರವ-ಪ್ರತಿಷ್ಠೆ ದೊರೆಯುತ್ತದೆ. ಮಿತ್ರರು ಮತ್ತು ಸಂಬಂಧಿಕರೊಂದಿಗೆ ಆನಂದವಾಗಿ ಪ್ರವಾಸ ಮಾಡಲಿದ್ದೀರಿ. ದಿನವಿಡೀ ನೀವು ಮಾಡುವ ಕೆಲಸಗಳೆಲ್ಲ ಸರಳವಾಗಿ ಪೂರ್ಣಗೊಳ್ಳಲಿವೆ.

ಅದೃಷ್ಟ ಸಂಖ್ಯೆ : 2

ಮೀನ ರಾಶಿ

ಹಿರಿಯ ಅಧಿಕಾರಿಗಳ ಜೊತೆಗೆ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರ ವಹಿಸಿ. ಶಾರೀರಿಕ ಶಿಥಿಲತೆ ಮತ್ತು ಮಾನಸಿಕ ಚಿಂತೆ ಕಾಡುತ್ತದೆ. ಪ್ರತಿಸ್ಪರ್ಧಿಗಳೊಂದಿಗಿನ ವಾದ-ವಿವಾದದಿಂದ ಆದಷ್ಟು ದೂರವಿರಿ.

ಅದೃಷ್ಟ ಸಂಖ್ಯೆ : 3