ದಿ ತೋಟಗಾರ್ಸ್‍ಕೋ-ಆಪರೇಟಿವ್ ಸೇಲ್ ಸೊಸೈಟಿಯ ಕೃಷಿ ವಿಭಾಗದಲ್ಲಿ ಜೂನ್25ರಿಂದಜುಲೈ25, 2019ರವರೆಗೆ“ಹಸಿರು ಮಾಸ”ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಮೇಳಆಯೋಜಿಸಲಾಗಿದೆ.ಹಸಿರು ಮಾಸದ ಪ್ರಯುಕ್ತಒಂದು ತಿಂಗಳ ಕಾಲ ನಡೆಯುವ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶಿರಸಿಯ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಸತೀಶ ಹೆಗಡೆ, ಹಾಗೂ ಸಂಘದಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಶೀಗೇಹಳ್ಳಿ, ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ಶ್ರೀಪಾದ ಹೆಗಡೆಕಡವೆ ಇವರುಗಳುಚಾಲನೆ ನೀಡಲಿದ್ದಾರೆ.
ಹಸಿರು ಮಾಸದ ಪ್ರಯುಕ್ತಮುಂದಿನ ಒಂದು ತಿಂಗಳ ಕಾಲ ನಡೆಯುವಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿಅಡಿಕೆ, ಹೈಬ್ರಿಡ್‍ತೆಂಗು, ಏಲಕ್ಕಿ, ವೆನಿಲ್ಲಾ, ವಿವಿಧ ತಳಿಯ ಮಾವಿನ ಸಸಿಗಳು, ಬಗೆ ಬಗೆಯಹಣ್ಣಿನ ಗಿಡಗಳು,ಹೂವಿನ ಗಿಡಗಳು,ಔಷಧಿ ಸಸ್ಯಗಳು,ಸಾಂಬಾರ ಬೆಳೆಯ ಸಸ್ಯಗಳು, ಹಾಗೂ ಅನೇಕ ಅಲಂಕಾರಿಕ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟನಡೆಯಲಿದೆ. ಮತ್ತು ಸಂಘದಲ್ಲಿ ಸಂಪೂರ್ಣ ವ್ಯವಹಾರ ಹೊಂದಿದ ಸದಸ್ಯರಿಗೆ ಕಾಳುಮೆಣಸಿನ ಸಸಿಗಳು ರೂ.5 ರಂತೆವಿಶೇಷ ರಿಯಾಯಿತಿದರದಲ್ಲಿ 50 ಸಸಿಗಳನ್ನು ಮಾತ್ರನೀಡಲಾಗುವುದುಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಲಾಕ್ ಡೌನ್ ವೇಳೆ ಉತ್ತಮ ಜನಸ್ಪಂದನೆ ಗೈದ ಹರೀಶ್ ನಾಯ್ಕ ಮಾದರಿರಸ್ತೆ.