ಕುಮಟಾ: ‘ಗುರುವೃಂದ ಒಂದೇ ಮನೆಯ ಸದಸ್ಯರಿದ್ದಂತೆ’ ನಾವೆಲ್ಲಾ ವಿದ್ಯಾದೇಗುಲದ ಮೂರ್ತಿಗಳಾದ ವಿದ್ಯಾರ್ಥಿಗಳನ್ನು ಸುಂದರವಾಗಿ ಸಿದ್ಧಗೊಳಿಸೋಣ” ಎಂದು ಸಿ.ವಿ.ಎಸ್.ಕೆ ಕುಮಟಾದ ಮುಖ್ಯಾಧ್ಯಾಪಕಿ ಸುಜಾತಾ ನಾಯ್ಕ ನುಡಿದರು.


ಅವರು ಕೊಂಕಣ ಎಜ್ಯುಕೇಶನ್‍ನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ‘ಗುರುಪ್ರೇರಣೆ’ ಸಾಮಥ್ರ್ಯಾಭಿವೃದ್ಧಿ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಪ್ರಾಸ್ತವಿಕ ನುಡಿಗಳನ್ನಾಡಿದ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು ಕುಮಟಾದ ಅಧ್ಯಕ್ಷರಾದ ಪಾಂಡುರಂಗ ವಾಗ್ರೇಕರ್‍ರವರು “ಪ್ರತಿಯೊಬ್ಬರಲ್ಲೂ ಒಂದೊಂದು ಸಂಪನ್ಮೂಲ ಇದೆ. ಆ ಸಂಪನ್ಮೂಲ ಪ್ರತಿಭೆ ಎಲ್ಲರಿಗೂ ತಿಳಿದು ಬರುವುದರ ಮೂಲಕ ಶಿಕ್ಷಕರು ಸಂಪನ್ಮೂಲಗಳ ಗಣಿಯಾಗಲು ಸಾಮಥ್ರ್ಯಗಳ ಅಭಿವೃದ್ಧಿ ಮಾಡಿಕೊಳ್ಳಲು ಈ ತರಬೇತಿ ಅವಶ್ಯಕ” ಎಂದರು.

RELATED ARTICLES  “ಹಸಿರು ಮಾಸ” ಸಸ್ಯಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ


ಕಾರ್ಯಕ್ರಮದ ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಶೋಕ ಭಟ್ಟ ಕತಗಾಲ್, ಶ್ರೀ ಗಣಪತಿ ಅಂಬಿಗ ಮುಖ್ಯಾಧ್ಯಾಪಕರು ತೌಹಿದ್ ಹೈಸ್ಕೂಲ್ ಕಾಗಲ್, ಲಕ್ಷ್ಮೀ ಕಾಸ್ಮಾಡಿ ಮುಖ್ಯಾಧ್ಯಾಪಕಿ ಜನತಾ ವಿದ್ಯಾಲಯ ಧಾರೇಶ್ವರ ಉಪಸ್ಥಿತರಿದ್ದರು.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.


ಕಾರ್ಯಕ್ರಮವು ಕೊಂಕಣ ವಿದ್ಯಾಸಂಸ್ಥೆಯ ಶಿಕ್ಷಕರಾದ ಶಿವಾನಂದ ಭಟ್ಟರವರ ಪ್ರಾರ್ಥನೆ ಮತ್ತು ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಯಿತು. ಪ್ರಗತಿ ವಿದ್ಯಾಲಯ ಮೂರೂರು ಶಿಕ್ಷಕರಾದ ರಾಘವೇಂದ್ರ ಭಟ್ಟ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶ್ರೀ ರಾಮನಾಥ ಪ್ರೌಢಶಾಲೆ ಮುಖ್ಯಾಧ್ಯಾಪಕ ಎಸ್. ಜಿ ಭಟ್ಟ ವಂದಿಸಿದರು.